ನಾಲ್ಕನೆ ಮದುವೆಗೆ ರೆಡಿಯಾಗಿದ್ದಾರೆ ಈ ನಟಿ

ಇತ್ತೀಚೆಗಷ್ಟೆ ಮದುವೆ ವಿಚಾರಕ್ಕೆ ಸಂಬಂಧಪಟ್ಟಂತೆ ಸಿಕ್ಕಾಪಟ್ಟೆ ಸುದ್ದಿಯಾಗಿದ್ದ ನಟಿ , ಬಿಗ್ ಬಾಸ್ ಸ್ಪರ್ಧಿ ವನಿತಾ ವಿಜಯ್ ಮತ್ತೆ ಮದುವೆ ವಿಚಾರಕ್ಕೆ ಸುದ್ದಿಯಾಗಿದ್ದಾರೆ.

ಖ್ಯಾತ ತಂತ್ರಜ್ಞ ಪೀಟರ್ ಪೌಲ್ ಜೊತೆ ಲಂಡನ್ ನಲ್ಲಿ ವಿವಾಹವಾಗಿದ್ದ ನಟಿ ವನಿತಾ. ಕೆಲ ತಿಂಗಳ ಬಳಿಕ ಮದುವೆ ಸಂಬಂಧವನ್ನು ಮುರಿದುಕೊಂಡಿದ್ರು. ಇದರ ಬಗ್ಗೆ ಅಲ್ಲಲ್ಲಿ ಅಲ್ಪ ಸ್ವಲ್ಪ ಸ್ಪಷ್ಟನೆ ನೀಡುತ್ತಿದ್ದ ವನಿತಾ ಇದೀಗ ಜನರಿಗೆ ಅಚ್ಚರಿ ಕೊಡೋ ಸುದ್ದಿ ನೀಡಿದ್ದಾರೆ.

ಮೂರನೇ ಮದುವೆಗೆ ಎಳ್ಳುನೀರು ಬಿಟ್ಟಿರೋ ವನಿತಾ ಮತ್ತೆ ಲವ್ ನಲ್ಲಿ ಬಿದ್ದಿದ್ದಾರೆ .ಇದರ ಬಗ್ಗೆ ಇನ್ಸ್ಟಾಗ್ರಾಂ ನಲ್ಲಿ ಪೋಸ್ಟ್ ಹಾಕಿರೋ ವನಿತಾ ವಿಜಯ್ ಕುಮಾರ್ ನಾನು ಮತ್ತೆ ಲವ್ ಅಲ್ಲಿ ಬಿದ್ದಿದ್ದೇನೆ . ನೀನು ಈಗ ಸಂತೋಷವಾಗಿದ್ದೀಯಾ ಎಂದು ಬರೆದುಕೊಂಡಿದ್ದು ಕಮೆಂಟ್ ಬಾಕ್ಸ್ ನ್ನು ಬ್ಲಾಕ್ ಮಾಡಿದ್ದಾರೆ . ಇದನ್ನು ನೋಡಿರೋ ನೆಟ್ಟಿಗರಿಗೆ ಶಾಕ್ ಆಗಿದ್ದು ಯಾರು ಆ ಲವರ್ ಅನ್ನೋದು ಪ್ರಶ್ನೆಯಾಗಿದೆ.

Exit mobile version