ತಿಂಗಳಲ್ಲೇ ಕೋಟಿ ಒಡೆಯನಾದ ನಂಜುಂಡೇಶ್ವರ: ದೇವಸ್ಥಾನದ ಹುಂಡಿಯಲ್ಲಿ 1.11ಕೋಟಿ ಸಂಗ್ರಹ

ಮೈಸೂರು, ಮಾ. 03: ಕೊರೊನಾ ಲಾಕ್‌ ಡೌನ್‌ ಕಳೆದ ನಂತರ ನಂಜನಗೂಡಿನ ನಂಜುಂಡೇಶ್ವರ ದೇವಾಲಯಕ್ಕೆ ಆಗಮಿಸುವ ಭಕ್ತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ.

ಭಕ್ತರ ಬರುವಿಕೆ ಹೆಚ್ಚಾದ ಬೆನ್ನಲ್ಲೇ ನಂಜುಂಡೇಶ್ವರನಿಗೆ ನೀಡುತ್ತಿರುವ ಕಾಣಿಕೆ ಮೊತ್ತದಲ್ಲೂ ಏರಿಕೆಯಾಗಿದ್ದು, ನಂಜುಂಡೇಶ್ವರ ಒಂದೇ ತಿಂಗಳಿನಲ್ಲಿ ಕೋಟ್ಯಾಧಿಪತಿಯಾಗಿದ್ದಾನೆ.

ನಂಜನಗೂಡಿನ ತಹಶೀಲ್ದಾರ್ ಶರ್ಮಿಳಾ ದತ್ತಿ ಅವರ ಸಮ್ಮುಖದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಸಿಬ್ಬಂದಿ, ನಂಜನಗೂಡಿನ ಕರ್ನಾಟಕ ಗ್ರಾಮೀಣ ಬ್ಯಾಂಕ್ ಸಿಬ್ಬಂದಿ 24 ಹುಂಡಿಗಳಲ್ಲಿನ ಹಣವನ್ನು ಎಣಿಕೆ ಮಾಡಿದ್ದಾರೆ. ವಿವಿಧ ಮುಖಬೆಲೆಯ 3,24,550 ರೂ‌‌.ನಾಣ್ಯ ಸೇರಿದಂತೆ 1,11,64,033 ಕೋಟಿ ರೂಪಾಯಿ, ಅಲ್ಲದೇ 105 ಗ್ರಾಂ ಚಿನ್ನ, 2 ಕೆಜಿ 250 ಗ್ರಾಂ ಬೆಳ್ಳಿ, 6 ವಿದೇಶಿ ಕರೆನ್ಸಿಗಳು,‌ ನಿಷೇಧಿತ ನೋಟುಗಳಾದ 1ಸಾವಿರ ಮುಖಬೆಲೆಯ 11 ನೋಟು, 500 ಮುಖಬೆಲೆ 87 ನೋಟುಗಳನ್ನು ಭಕ್ತರು ಹಾಕಿದ್ದಾರೆ.

ಕಳೆದು ತಿಂಗಳು ಹುಂಡಿ ಏಣಿಕೆ ಮಾಡಿದಾಗ ನಂಜುಂಡೇಶ್ವರನ ಹುಂಡಿಯಲ್ಲಿ ಕೋಟಿಗೂ ಮೀರಿ ಹಣ ಸಂಗ್ರಹವಾಗಿತ್ತು.

Exit mobile version