ನಂಜನಗೂಡಿನ ನಂಜುಂಡೇಶ್ವರ ಮತ್ತೆ ಕೋಟ್ಯಾಧೀಶ್ವರ

ನಂಜನಗೂಡು, ಜ. 30: ದಕ್ಷಿಣ ಕಾಶಿ ನಂಜುಂಡೇಶ್ವರ ದೇವಾಲಯದ ಹುಂಡಿಗಳ ಕಾಣಿಕೆ ಎಣಿಕೆ ಮಾಡಲಾಗಿದ್ದು, ಒಂದು ಕೋಟಿ ರೂ.ಗೂ ಹೆಚ್ಚಿನ ಕಾಣಿಕೆ ಸಂಗ್ರಹವಾಗಿದೆ.

ಒಂದು ತಿಂಗಳ ಅವಧಿಯಲ್ಲಿ 1,01,71,910 ರೂಪಾಯಿ ಕಾಣಿಕೆ ಹಣದ ಜೊತೆಗೆ 70 ಗ್ರಾಂ ಚಿನ್ನ, 3 ಕೆಜಿ 50 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ. ಜೊತೆಗೆ 13 ನಿಷೇಧಿತ ನೋಟುಗಳು, 2 ವಿದೇಶಿ ಕರೆನ್ಸಿ ಕೂಡ ಇದೆ.
ಹುಂಡಿಯಲ್ಲಿ 7,500 ರೂ. ಮೌಲ್ಯದ ನಿಷೇಧಿತ ನೋಟುಗಳು ಪತ್ತೆಯಾಗಿದ್ದು, ಅದರಲ್ಲಿ 1,000 ರೂ. ಮುಖಬೆಲೆಯ 2 ನೋಟುಗಳು ಹಾಗೂ 500 ರೂ. ಮುಖಬೆಲೆಯ 11 ನಿಷೇಧಿತ ನೋಟುಗಳು ಪತ್ತೆಯಾಗಿವೆ.
ದೇವಾಲಯದ 20 ಕ್ಕೂ ಹೆಚ್ಚು ಹುಂಡಿಗಳ ಕಾಣಿಕೆ ಎಣಿಕೆ ಮಾಡಲಾಯಿತು. 50 ಕ್ಕೂ ಹೆಚ್ಚು ಸಿಬ್ಬಂದಿ ಎಣಿಕೆ ಕಾರ್ಯದಲ್ಲಿ ಭಾಗಿಯಾಗಿದ್ದರು.

Exit mobile version