ನಾರಾಯಣ ಗುರುಗಳ ಸ್ತಬ್ದ ಚಿತ್ರದ ವಿವಾದ ಯಾಕೆ ? ಅದರ ಸಂಪೂರ್ಣ ವಿವರ ಇಲ್ಲಿದೆ.

narayanaguru

ಬೆಂಗಳೂರು, ಜ 18 : ದೇಶದಲ್ಲಿ ಈ ಬಾರಿ ಆಚರಿಸಲಾಗುವ 73ನೇ ಗಣರಾಜ್ಯೋತ್ಸವ ವಿಶೇಷವಾಗಿರಲಿದೆ ಎಂಬ ಸೂಚನೆಗಳು ದೊರೆಯುವಷ್ಟರಲ್ಲಿ, ದೊಡ್ಡ ವಿವಾದವೊಂದು ದೇಶದ ರಾಜಾಕಾರಣಿಗಳಲ್ಲಿ ಹಾಗೂ ಜನರಿಗೆ ಬೇಸರ ತಂದೊಡ್ಡಿರುವ ಸಂಗತಿಯಾಗಿದೆ ಎಂದೇ ಹೇಳಬಹುದಾಗಿದೆ. ಹೌದು, ಈ ಬಾರಿ ಗಣರಾಜ್ಯೋತ್ಸವ ಸಂಭ್ರಮಾಚರಣೆಯಲ್ಲಿ ಕೇರಳ ರಾಜ್ಯವೂ ಸಮಾಜ ಸುಧಾರಕರಾಗಿದ್ದ ನಾರಾಯಣ ಗುರುಗಳ ಸ್ತಬ್ದ ಚಿತ್ರವನ್ನು ಇರಿಸುವ ಮೂಲಕ ಅವರಿಗೆ ಗೌರವವನ್ನು ಈ ಬಾರಿಯ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಲ್ಲಿಸಲು ಕೇಂದ್ರ ಸರಕಾರಕ್ಕೆ ಪ್ರಸ್ತಾವನೆಯನ್ನು ಮುಂದಿಟ್ಟಿತ್ತು.! ಆದರೆ ಈ ಪ್ರಸ್ತಾವನೆಗೆ ಕೇಂದ್ರ ಕೊಟ್ಟಿರುವ ಉತ್ತರ ಏನು ಗೊತ್ತಾ.? ಅಷ್ಟಕ್ಕೂ ಈ ವಿಚಾರದಲ್ಲಿ ಕೋಲಾಹಲ ಏಳುವಲ್ಲಿ ಕೇಂದ್ರದ ಪ್ರಮುಖ ಕಾರಣವೇನು ಎಂಬುದನ್ನು ತಿಳಿಯಲು ಮುಂದೆ ಓದಿ.

ಕೇರಳ ರಾಜ್ಯದ ಸಮಾಜ ಸುಧಾರಕರಾಗಿ, ಜಾತಿ ವಿವಾದಗಳ ವಿರುದ್ಧ ಹಾಗೂ ಸಮುದಾಯದ ದ್ವೇಷವನ್ನು ವಿರೋಧಿಸಿದ್ದರು. ನಾರಾಯಣ ಗುರುಗಳು ಜಾತಿಯೆಂಬ ವಿಷ ಬೀಜ ಬಿತ್ತನೆ ಮಾಡುವವರ ವಿರುದ್ಧ ಮತ್ತು ಆಧ್ಯಾತ್ಮಿಕ ನಾಯಕರಾಗಿ, ಭಾರತದ ತತ್ವಜ್ಞಾನಿಯಾಗಿ ಅಗಾಧ ಸೇವೆ ಸಲ್ಲಿಸಿದ್ದಾರೆ.

ಶತಮಾನದ ಹಿಂದೆ ಅಸ್ಪೃಶ್ಯತೆ ಮತ್ತು ಪುರೋಹಿತಶಾಹಿ ವರ್ಗದ ವಿರುದ್ಧ ಹೋರಾಡಿದರು ಮತ್ತು ಸಮಾಜವನ್ನು ಸುಧಾರಿಸಲು ಪ್ರಯತ್ನಸಿದ್ದಾರೆ. ಜಾತಿ ವಿರೋಧಿಸುವವರ ವಿರುದ್ಧ ಸಿಡಿದೆದ್ದು, ಅನೇಕ ಚಳುವಳಿಗಳನ್ನು ನಡೆಸುವ ಮೂಲಕ ಕೇರಳದ ಜಾತಿ-ಪೀಡಿತ ಸಮಾಜದಲ್ಲಿನ ಅನ್ಯಾಯದ ವಿರುದ್ಧ ಸುಧಾರಣಾ ಚಳುವಳಿಯನ್ನು ನಡೆಸಿದವರು. ಇಂದು ಅವರ ಸ್ತಬ್ದಚಿತ್ರವನ್ನು ಗಣರಾಜ್ಯೋತ್ಸವ ದಿನದಂದು ಪ್ರದರ್ಶಿಸಲು ಪ್ರಸ್ತಾವನೆಯನ್ನು ಸಲ್ಲಿಸಿದ ಕೇರಳ ರಾಜ್ಯಕ್ಕೆ ಕೇಂದ್ರ ಸರ್ಕಾರ ತಿರಸ್ಕರಿಸುವ ಮುಖೇನ ಅವಮಾನಿಸಿದೆ ಎಂಬುದು ಹಲವು ರಾಜಾಕಾರಣಿಗಳ ಅಕ್ರೋಶದ ಮಾತಾಗಿದೆ.  ಈ ಕುರಿತು ರಾಜ್ಯ ರಾಜಾಕಾರಣದಲ್ಲೂ ಕೋಲಾಹಲ ಸೃಷ್ಟಿಯಾಗಿದ್ದು, ಕೇಂದ್ರ ಸರ್ಕಾರ, ಕೇರಳ ರಾಜ್ಯದ ಪ್ರಸ್ತಾವನೆಯನ್ನು ತಿರಸ್ಕರಿಸುವ ಮೂಲಕ ನಾರಾಯಣ ಗುರುಗಳಿಗೆ ಅವಮಾನಿಸಿದೆ.! ಇದಕ್ಕೆ ಕೇಂದ್ರ ಕ್ಷಮಾಪಣೆ ಕೇಳಬೇಕು, ಗೌರವಿಸಬೇಕು ಎಂದು ಅಗ್ರಹಿಸಿದ್ದಾರೆ.

ಈ ವಿಚಾರ ಸುದ್ದಿಯಾಗುತ್ತಿದ್ದಂತೆ ವಿಪಕ್ಷ ನಾಯಕರಾದ ಸಿದ್ದರಾಮಯ್ಯನವರು ಮತ್ತು ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರು ಗುಡುಗಿದ್ದಾರೆ.

ಕೇಂದ್ರವು ಕ್ಷಮೆಯಾಚಿಸಬೇಕು ಮತ್ತು ನಾರಾಯಣ ಗುರುಗಳ ಟ್ಯಾಬ್ಲೋ ಚಿತ್ರಿಸಲು ಅವಕಾಶ ಕಲ್ಪಿಸಿಕೊಡಬೇಕು. ಕೇಂದ್ರದ ನಿಲುವುಗಳು ಹಿಂದುಳಿದ ವರ್ಗಗಳ ಮಹಾನ್ ಸುಧಾರಕರಾದ ನಾರಾಯಣ ಗುರುಗಳ ಬಗ್ಗೆ ಪೂರ್ವ ಕಲ್ಪಿತ ಕಲ್ಪನೆಗಳನ್ನು ತೋರಿಸುತ್ತದೆ. ಕೇರಳ ಸರ್ಕಾರದ ಪ್ರಸ್ತಾವನೆಯನ್ನು ತಿರಸ್ಕರಿಸುವಂತ ಉದ್ದೇಶವಾದರೂ ಏನಿತ್ತು.? ಅಂತ ತಾರ್ಕಿಕತೆ ಏನು.? ಎಂದು ಮಾಜಿ ಮುಖ್ಯಮಂತ್ರಿ  ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

 ನಾರಾಯಣ ಗುರುಗಳು ಹಿಂದೂ ಸಮುದಾಯಕ್ಕೆ ಸೇರಿದವರಲ್ಲವೇ.? ಬಿಜೆಪಿ ತನ್ನ ಉದ್ದೇಶಗಳೇನು ಎಂಬುದನ್ನು ಸ್ಪಷ್ಟವಾಗಿ ತಿಳಿಸಬೇಕು  ಎಂದು ಹೆಚ್.ಡಿ. ಕುಮಾರಸ್ವಾಮಿ ಹರಿಹಾಯ್ದಿದ್ದಾರೆ.  ನಾರಾಯಣ ಗುರುಗಳು ಲಿಂಗ ಸಮಾನತೆಯನ್ನು ಪ್ರಚಾರ ಮಾಡಿದ್ದರು ಮತ್ತು ಜಾತಿ ಮತ್ತು ಸಮುದಾಯದ ಎಷ್ಟೋ ಬುಗಿಲೆದ್ದ ವಿಚಾರಗಳನ್ನು ವಿರೋಧಿಸಿದ್ದರು. ದೇಶದಲ್ಲಿ ಸಮಾಜ ಸುಧಾರಣ ಚಳುವಳಿಯ ಇತಿಹಾಸ ತಿಳಿಯದವರು ಮಾತ್ರ ಇಂತಹ ನಿರ್ಧಾರ ತೆಗೆದುಕೊಂಡಿರುತ್ತಾರೆ ಎಂದು ಮಾತಿನ ಚಾವಟಿ ಬೀಸಿದರು.

Exit mobile version