ಶ್ರದ್ಧಾ ಹತ್ಯೆ ಪ್ರಕರಣ ; ಅಫ್ತಾಬ್ಗೆ ನಾರ್ಕೋ ಪರೀಕ್ಷೆ ನಡೆಸಲು ಅನುಮತಿ ನೀಡಿದ ದೆಹಲಿ ನ್ಯಾಯಾಲಯ!

New Delhi : ಶ್ರದ್ಧಾ ವಾಕರ್ (Shraddha) ಹತ್ಯೆ(Murder) ಪ್ರಕರಣಕ್ಕೆ ಸಂಬಂಧಿಸಿದಂತೆ ಅಫ್ತಾಬ್ (Narco Test To Aftab) ಅಮೀನ್ ಪೂನಾವಾಲಾ ಅವರಿಗೆ ನಾರ್ಕೋ ವಿಶ್ಲೇಷಣೆ ಪರೀಕ್ಷೆಗೆ ಒಳಪಡಿಸಲು ದೆಹಲಿಯ ನ್ಯಾಯಾಲಯವು(Delhi Court) ದೆಹಲಿ ಪೊಲೀಸರಿಗೆ ಅನುಮತಿ ನೀಡಿದೆ.

ತನ್ನ ಲಿವ್-ಇನ್ ರಿಲೇಷನ್ಶಿಪ್ ಪ್ರೀತಿಯಲ್ಲಿದ್ದ ಪ್ರೇಯಸಿ ಶ್ರದ್ಧಾ ವಾಕರ್‌ (Narco Test To Aftab) ಅನ್ನು ಕತ್ತು ಹಿಸುಕಿ ಹತ್ಯೆಗೈದು,

ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ಅರಣ್ಯ ಪ್ರದೇಶದೊಳಗೆ ಬಿಸಾಡಿದ್ದ ಪ್ರಿಯಕರ ಆಫ್ತಾಬ್ ಅಮೀನ್ ಪೂನಾವಾಲಾಗೆ ಸದ್ಯ ದೆಹಲಿ ನ್ಯಾಯಾಲಯ ಪೊಲೀಸರಿಗೆ ತನ್ನ ಆದೇಶವನ್ನು ಪ್ರಕಟಿಸಿದೆ.

ದೆಹಲಿ ಪೊಲೀಸರ(Delhi Police) ದಾರಿಯನ್ನು ತಪ್ಪಿಸಲು ಯತ್ನಿಸುತ್ತಿರುವ ಅಫ್ತಾಬ್ಗೆ ನಾರ್ಕೋ ಪರೀಕ್ಷೆಗೆ ಒಳಪಡಿಸಲು ಅನುಮತಿಯನ್ನು ದೆಹಲಿ ನ್ಯಾಯಾಲಯಕ್ಕೆ ದೆಹಲಿ ಪೊಲೀಸರು ವಿಶೇಷ ಮನವಿ ಮಾಡಿದ್ದರು.

ಅದರಂತೆ ದೆಹಲಿ ನ್ಯಾಯಾಲಯವನ್ನು ನಾರ್ಕೋ ಪರೀಕ್ಷೆಯನ್ನು ನಡೆಸಲು ದೆಹಲಿ ಪೊಲೀಸರಿಗೆ ಅನುಮತಿ ಸೂಚಿಸಿದೆ.

ಇದನ್ನೂ ಓದಿ : https://vijayatimes.com/musk-sacked-indian-employees/

ಅಫ್ತಾಬ್ ತನಿಖೆಯ ಸಮಯದಲ್ಲಿ ತನ್ನ ಯಾವುದೇ ತಪ್ಪಿಗೂ ಸಹಕರಿಸದ ಕಾರಣ ಮತ್ತು ಪೊಲೀಸರನ್ನು ದಾರಿ ತಪ್ಪಿಸುವ ಪ್ರಯತ್ನಗಳನ್ನು ಮಾಡಿದ ಕಾರಣ

, ದೆಹಲಿ ಪೊಲೀಸರು ನಾರ್ಕೋ ಪರೀಕ್ಷೆಗೆ ಅನುಮೋದನೆ ಪಡೆಯಲು ಸಾಕೇತ್ ನ್ಯಾಯಾಲಯಕ್ಕೆ ಮಂಗಳವಾರ ಮೊರೆ ಹೋದರು.

ಶ್ರದ್ಧಾ ಅವರ ಮೊಬೈಲ್ ಫೋನ್‌ನ ವಿವರಗಳನ್ನು ಆಫ್ತಾಬ್ ಇನ್ನೂ ಬಹಿರಂಗಪಡಿಸಿಲ್ಲ ಮತ್ತು ತನ್ನ ಸಂಗಾತಿಯ ದೇಹವನ್ನು ತುಂಡುಗಳಾಗಿ ಕತ್ತರಿಸಲು ಅಸಲಿ ಕಾರಣವನ್ನು ಕೂಡ ಬಹಿರಂಗ ಪಡಿಸಿಲ್ಲ ಎಂಬುದು ಪೊಲೀಸರ ಹೇಳಿಕೆ!

ನಾರ್ಕೋ ಪರೀಕ್ಷೆಯು ನ್ಯಾಯಾಲಯದಲ್ಲಿ ಸಾಕ್ಷಿಯಾಗಿ ಸ್ವೀಕಾರಾರ್ಹವಲ್ಲದಿದ್ದರೂ, ವೈದ್ಯಕೀಯ ಮತ್ತು ಶವಪರೀಕ್ಷೆ ವರದಿಗಳು,

ಆಫ್ತಾಬ್ ಮತ್ತು ಶ್ರದ್ಧಾ ಅವರ ಸ್ನೇಹಿತರ ಹೇಳಿಕೆಗಳು ಮತ್ತು ದೆಹಲಿ ಪೊಲೀಸರು ಹಿಂಪಡೆದ ಡೇಟಾದ ತಾಂತ್ರಿಕ ವಿಶ್ಲೇಷಣೆ ಸೇರಿದಂತೆ ಇತರ ಪುರಾವೆಗಳನ್ನು ಬೆಂಬಲಿಸಲು ಈ ಅನುಮತಿ ದೆಹಲಿ ಪೊಲೀಸರಿಗೆ ಹೆಚ್ಚು ಸಹಾಯ ಮಾಡುತ್ತದೆ ಎನ್ನಲಾಗಿದೆ.

ಆರೋಪಿ ಅಫ್ತಾಬ್ 300-ಲೀಟರ್ ಫ್ರಿಡ್ಜ್ ಅನ್ನು ಖರೀದಿಸಿ,

ಅದರಲ್ಲಿ ಆತ ಶ್ರದ್ಧಾ ಅವರ ದೇಹದ ಭಾಗಗಳನ್ನು ದಕ್ಷಿಣ ದೆಹಲಿಯ ಮೆಹ್ರೌಲಿಯಲ್ಲಿರುವ ಅವರ ನಿವಾಸದಲ್ಲಿ ಸುಮಾರು ಮೂರು ವಾರಗಳ ಕಾಲ ಸಂಗ್ರಹಿಸಿಟ್ಟು .

ಹಲವಾರು ದಿನಗಳ ಬಳಿಕ ಮೂರು ಅರಣ್ಯ ಪ್ರದೇಶಗಳಲ್ಲಿ ಎಸೆದಿದ್ದಾನೆ ಎಂದು ಪೊಲೀಸರು ವರದಿಯಲ್ಲಿ ಉಲ್ಲೇಖಿಸಿದ್ದಾರೆ.

https://youtu.be/-vaB267p8Tc COVER STORY PROMO | ಪೆಟ್ರೋಲ್‌ ಕಳ್ಳರು!

ಮಂಗಳವಾರ, ದೆಹಲಿ ಪೊಲೀಸರು ಅಫ್ತಾಬ್‌ನನ್ನು ದಕ್ಷಿಣ ದೆಹಲಿಯ ಛತ್ತರ್‌ಪುರದ ಅರಣ್ಯ ಪ್ರದೇಶಕ್ಕೆ ಕರೆದೊಯ್ದು, ತನ್ನ ಸಂಗಾತಿಯ ದೇಹದ ಭಾಗಗಳನ್ನು ಎಸೆದ ನಿರ್ದಿಷ್ಟ ಸ್ಥಳಗಳನ್ನು ಪತ್ತೆಹಚ್ಚಲು ಕರೆದೊಯ್ದರು.

ಪೊಲೀಸರು ಶ್ರದ್ಧಾ ದೇಹದ ಭಾಗಗಳನ್ನು ಪತ್ತೆಹಚ್ಚಿದ್ದು, ತಲೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಈ ಹಿಂದೆಯೂ ಶ್ರದ್ಧಾಳನ್ನು ಕೊಲ್ಲಲು ಯತ್ನಿಸಿದ್ದ ಅಫ್ತಾಬ್,ಪ್ರೇಯಸಿ ಭಾವುಕರಾಗಿ ಅಳಲು ತೋಡಿಕೊಂಡ ಬಳಿಕ ಮನಸ್ಸು ಬದಲಾಯಿಸಿಕೊಂಡಿದ್ದ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸ್ ಅಧಿಕಾರಿಗಳ ಪ್ರಕಾರ, ಆಫ್ತಾಬ್ ವಿಲೇವಾರಿ ಮಾಡಿದ ಶ್ರದ್ಧಾಳ ಮೊದಲ ದೇಹದ ಭಾಗಗಳು ಆಕೆಯ ಯಕೃತ್ತು ಮತ್ತು ಕರುಳುಗಳಾಗಿವೆ.

ಪೂನಾವಾಲಾ ಮತ್ತು ವಾಕರ್ ಆನ್‌ಲೈನ್ ಡೇಟಿಂಗ್ ಆಪ್‌ನ ಮುಖೇನ ಪರಸ್ಪರ ಭೇಟಿಯಾಗಿದ್ದಾರೆ. ತದನಂತರ ಮುಂಬೈನಲ್ಲಿ (Mumbai)

ಒಂದೇ ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು ಮತ್ತು ತಮ್ಮ ಪ್ರೀತಿಯನ್ನು ಮುಂದುವರೆಸುತ್ತಿದ್ದರು.

ಆದರೆ ಅವರು ವಿಭಿನ್ನ ನಂಬಿಕೆಗಳಿಗೆ ಸೇರಿದವರಾಗಿದ್ದರಿಂದ ಅವರ ಕುಟುಂಬಗಳು ಇಬ್ಬರ ಸಂಬಂಧವನ್ನು ವಿರೋಧಿಸಿದ್ದರು ಎನ್ನಲಾಗಿದೆ.

Exit mobile version