ನವರಾತ್ರಿಗೆ ‘ನವಮಿ 9.9.1999’ ಫಸ್ಟ್ ಲುಕ್

ನವ ಪ್ರತಿಭೆಗಳ ಚಿತ್ರವಾದ `ನವಮಿ 9.9.1999′ ಪೋಸ್ಟರ್ ಮತ್ತು ಫಸ್ಟ್ ಲುಕ್ ಬಿಡುಗಡೆಯಾಗಿದೆ. ಇದು ನಿರ್ದೇಶಕ ಎಸ್ ನಾರಾಯಣ್ ಅವರ ಪುತ್ರ ಪವನ್ ನಿರ್ದೇಶನದ ಮೊದಲ ಚಿತ್ರ.

ಉತ್ಸಾಹಿ ಯುವಕರ ತಂಡವೊಂದು ಲಾಕ್ ಡೌನ್ ದಿನಗಳಲ್ಲೆ ಕಥೆ ಬರೆದು, ಈಗ ಒಂದು ಹಂತದ ಚಿತ್ರೀಕರಣ ಮುಗಿಸಿರುವ ಸಿನಿಮಾ ಇದು. ಆಯುಧ ಪೂಜೆಯ ಶುಭದಿನದಂದು ನಿರ್ದೇಶಕರುಗಳಾದ ಎಸ್ ನಾರಾಯಣ್, ಶಶಾಂಕ್, ರವಿ ಶ್ರೀವತ್ಸ, ಸಿಂಪಲ್ ಸುನಿ, ಪವನ್ ಒಡೆಯರ್, ಎ.ಪಿ.ಅರ್ಜುನ್, ಚಂದ್ರಶೇಖರ್ ಬಂಡಿಯಪ್ಪ, ಕದರ್ ಕುಮಾರ್ ಹಾಗೂ ಅಭಿರಾಮ್ ಎನ್ನುವ ಒಂಬತ್ತು ಮಂದಿ ಈ ಚಿತ್ರದ ಟೈಟಲ್, ಪೋಸ್ಟರ್, ಫಸ್ಟ್ ಲುಕ್ ಲಾಂಚ್ ಮಾಡಿದ್ದಾರೆ. ಚಿತ್ರಕ್ಕೆ ಕನ್ನಡದ ಖ್ಯಾತ ನಿರ್ದೇಶಕರಾದ ಎಸ್.ನಾರಾಯಣ್ ರವರ ಹಿರಿಯ ಪುತ್ರ ಪವನ್ ರವರು ಆಕ್ಷನ್ ಕಟ್ ಹೇಳುತ್ತಿದ್ದು ಇವರು “ಚಿ.ರಾ ಮುತ್ತು ಚಿ.ಸೌ ರತ್ನ’ ಎನ್ನುವ ಚಿತ್ರದಲ್ಲಿ ನಾಯಕ ನಟನಾಗಿಯೂ ಅಭಿನಯಿಸುತ್ತಿದ್ದಾರೆ. ತಂದೆಯ ಗರಡಿಯಲ್ಲಿ ಪಳಗಿ ಈಗ ಸ್ವತಂತ್ರ ನಿರ್ದೇಶಕನಾಗಿ ಈ ಸಿನಿಮಾದ ಮುಖಾಂತರ ಹೆಜ್ಜೆ ಇಡುತ್ತಿದ್ದಾರೆ.
ನಟ ಯಶಸ್ ಅಭಿಯವರು ಈ ಹಿಂದೆ ಪ್ರಸೆಂಟ್ ಪ್ರಪಂಚ',ಜೀರೋ ಪರ್ಸೆಂಟ್ ಲವ್’ ಹಾಗೂ `ಕ್ರಿಟಿಕಲ್ ಕೀರ್ತನೆಗಳು’ ಎನ್ನುವ ಚಿತ್ರಗಳಲ್ಲಿ ಅಭಿನಯಿಸಿದ್ದು, ಈ ಚಿತ್ರದಲ್ಲಿ ನಾಯಕ ನಟನಾಗಿ ಕಾಣಿಸಿಕೊಳ್ಳಲಿದ್ದಾರಂತೆ.

ಪವನ್ ನಾರಾಯಣ್ ಹಾಗೂ ಯಶಸ್ ಅಭಿಯವರು ರಂಗಭೂಮಿಯ ಕಲಿಕೆ ದಿನಗಳಿಂದಲೂ ಉತ್ತಮ ಸ್ನೇಹಿತರಾಗಿದ್ದು, ಈ ಚಿತ್ರದ ಮುಖಾಂತರ ಸಿನಿಮಾರಂಗದಲ್ಲಿಯೂ ಜೊತೆಯಾಗಿದ್ದಾರೆ.
ಚಿತ್ರದಲ್ಲಿ ನಂದಿನಿ ಗೌಡ ರವರು ನಾಯಕಿಯಾಗಿದ್ದು ನಾಯಕ ನಟ ಯಶಸ್ ಅಭಿ ಮತ್ತು ಕೃಷ್ಣ ಗುಡೆಮಾರನ ಹಳ್ಳಿ ಯವರು ಸೇರಿ ಕಥೆ ಹಾಗೂ ಚಿತ್ರಕತೆ ರಚಿಸಿದ್ದಾರೆ. ಪದ್ಮ ಸುಂದರಿ ಕ್ರಿಯೇಷನ್ ಬ್ಯಾನರ್ ನಲ್ಲಿ ಚಿತ್ರ ನಿರ್ಮಾಣವಾಗುತ್ತಿರುವ ಈ ಚಿತ್ರದಲ್ಲಿ ಎಸ್.ನಾರಾಯಣ್, ಶಂಕರ್ ಅಶ್ವಥ್, ಓಂ ಪ್ರಕಾಶ್ ರಾವ್, ಹುಚ್ಚ ವೆಂಕಟ್, ಸಂದೀಪ್, ಅನುಶ್ರೀ, ಪವಿತ್ರಾ, ಕುರಿಬಾಂಡ್ ಸುನೀಲ್, ಅರುಣ ಬಾಲರಾಜ್ ಮುಂತಾದವರ ತಾರಾಗಣವಿದೆ. ತಾಂತ್ರಿಕ ವರ್ಗದಲ್ಲಿ ಕೆ.ಪಿ.ಎಚ್.ಎಸ್. ರವರ ಛಾಯಾಗ್ರಹಣ, ಧರ್ಮ ರವರ ಸಂಗೀತ ನಿರ್ದೇಶನ, ನಾಗಾರ್ಜುನ್ ಶರ್ಮ ರವರ ಸಾಹಿತ್ಯ, ಮಾಸ್ ಮಾದ ರವರ ಸಾಹಸ ನಿರ್ದೇಶನ ಹಾಗೂ ಮೋಹನ್ ರವರ ನೃತ್ಯ ಸಂಯೋಜನೆ ಈ ಚಿತ್ರಕ್ಕಿದೆ. ಚಿತ್ರ ತಂಡವೇ ಒಟ್ಟಾಗಿ ಬಂಡವಾಳ ಹೂಡಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಶಶಿಕುಮಾರ್ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.ಬಾಕಿ ಉಳಿದಿರುವ ಚಿತ್ರೀಕರಣ ಸಕಲೇಶ ಪುರ, ಕನಕಪುರ ಇನ್ನೂ ಮುಂತಾದ ಪ್ರದೇಶಗಳಲ್ಲಿ ನಡೆಯಲಿದೆ ಎಂದು ಚಿತ್ರತಂಡ ತಿಳಿಸಿದೆ.

Exit mobile version