ದಾಂತೇವಾಡದಲ್ಲಿ ಎನ್‌ಕೌಂಟರ್‌, ಮಹಿಳಾ ನಕ್ಸಲ್ ಸಾವು

ದಾಂತೇವಾಡ, ಮೇ. 31: ಛತ್ತೀಸಗಡದ ದಾಂತೇವಾಡ ಜಿಲ್ಲೆಯಲ್ಲಿ ಸೋಮವಾರ ನಡೆದ ಎನ್‌ಕೌಂಟರ್‌ನಲ್ಲಿ ಒಬ್ಬ ಮಹಿಳಾ ನಕ್ಸಲ್‌ ಮೃತಪಟ್ಟಿದ್ದಾರೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

ಗೀದಂ ಪೊಲೀಸ್ ಠಾಣಾ ವ್ಯಾಪ್ತಿಯ ಗುಮಾಲ್ನರ್ ಗ್ರಾಮದ ಬಳಿ ಬೆಳಿಗ್ಗೆ 6.30ರ ಸುಮಾರಿಗೆ ಜಿಲ್ಲಾ ಪೊಲೀಸ್‌ ಮೀಸಲು ಪಡೆ(ಡಿಆರ್‌ಜಿ) ಮತ್ತು ನಕ್ಸಲರ ನಡುವೆ ಗುಂಡಿನ ಚಕಮಕಿ ನಡೆದಿದೆ ಎಂದು ಪೊಲೀಸ್‌ ವರಿಷ್ಠಾಧಿಕಾರಿ ಅಭಿಷೇಕ್‌ ಪಲ್ಲವ ಮಾಹಿತಿ ನೀಡಿದರು.

ಈ ವೇಳೆ ಮಹಿಳಾ ನಕ್ಸಲರೊಬ್ಬರು ಮೃತಪಟ್ಟಿದ್ದು, ಇನ್ನುಳಿದ ನಕ್ಸಲರು ಅಲ್ಲಿಂದ ಪರಾರಿಯಾಗಿದ್ದಾರೆ. ಘಟನಾ ಸ್ಥಳದಿಂದ ಸುಧಾರಿತ ಸ್ಫೋಟಕ ಸಾಮಗ್ರಿಗಳು (ಐಇಡಿ), ಔಷಧಿಗಳು, ದಿನ ಬಳಕೆಯ ವಸ್ತುಗಳನ್ನು ವಶಕ್ಕೆ ಪಡೆಯಲಾಗಿವೆ ಎಂದು ಅವರು ಹೇಳಿದರು.

Exit mobile version