ಅಪಹರಿಸಿದ್ದ ಸಿಆರ್ ಪಿಎಫ್ ಕಮಾಂಡೋವನ್ನು ಬಿಡುಗಡೆಗೊಳಿಸಿದ ನಕ್ಸಲರು

ಬಿಜಾಪುರ, ಏ. 09: ಕಳೆದ ವಾರ ಛತ್ತೀಸಗಢದ ಸುಕ್ಮಾ ಹಾಗೂ ಬಿಜಾಪುರ ಜಿಲ್ಲೆಯ ಗಡಿಯಲ್ಲಿ ಭದ್ರತಾ ಪಡೆ ಹಾಗೂ ಮಾವೋವಾದಿಗಳ ನಡುವೆ ಗುಂಡಿನ ದಾಳಿ ನಡೆದಿತ್ತು. ಈ ದಾಳಿಯಲ್ಲಿ 22 ಮಂದಿ ಸೈನಿಕರು ಸಾವನ್ನಪ್ಪಿದ್ದರು. ಸುಮಾರು ಮೂರು ಗಂಟೆಗಳ ಕಾಲ ನಡೆದ ಎನ್‌ಕೌಂಟರ್ ಕಾರ್ಯಾಚರಣೆಯ ನಂತರ ಸಿಆರ್‌ಪಿಎಫ್ ಕಮಾಂಡೋ ರಾಕೇಶ್ವರ ಸಿಂಗ್ ಮನ್ಹಾಸ್ ಅವರನ್ನು ಮಾವೋವಾದಿಗಳು ಅಪಹರಿಸಿದ್ದರು. 100 ಗಂಟೆಗಳಿಗೂ ಹೆಚ್ಚು ಕಾಲ ಸೆರೆಯಲ್ಲಿದ್ದ ಯೋಧನನ್ನು ಇಂದು ಬಿಡುಗಡೆ ಮಾಡಲಾಗಿದೆ ಎಂದು ರಾಜ್ಯ ಸರ್ಕಾರ ಗುರುವಾರ ತಿಳಿಸಿದೆ.

ಶನಿವಾರದಿಂದಲೂ ಸೇನೆ ಕಮಾಂಡೋಗಾಗಿ ಶೋಧಕಾರ್ಯ ನಡೆಸಿತ್ತು. ಯೋಧನನ್ನು ಅಪಹರಿಸಿರುವುದಾಗಿ ಮಾವೋವಾದಿಗಳು ತಿಳಿಸಿ, ಮಧ್ಯಸ್ಥಿಕೆ ಸರ್ಕಾರ ಯಾರನ್ನಾದರೂ ಸೂಚಿಸಬೇಕು ನಂತರ ಯೋಧನನ್ನು ಬಿಡುಗಡೆ ಮಾಡುವುದಾಗಿ ತಿಳಿಸಲಾಗಿತ್ತು.

Exit mobile version