ನೇತಾಜಿ ಕೊಡುಗೆ ರಾಷ್ಟ್ರಪಿತನಿಗಿಂತ ಕಡಿಮೆಯಿಲ್ಲ ; ನೋಟುಗಳಲ್ಲಿ ನೇತಾಜಿ ಭಾವಚಿತ್ರ ಹಾಕಲು ಹಿಂದೂ ಮಹಾಸಭಾ ಒತ್ತಾಯ!

Calcutta : ಭಾರತೀಯ ಕರೆನ್ಸಿ ನೋಟುಗಳ (Indian Currency Notes) ಮೇಲೆ ಮಹಾತ್ಮ ಗಾಂಧಿಯವರ ಚಿತ್ರದೊಂದಿಗೆ ನೇತಾಜಿ ಸುಭಾಷ್ ಚಂದ್ರ ಬೋಸ್ (Netaji On currency Notes?) ಅವರ ಭಾವಚಿತ್ರವನ್ನು ಹಾಕಬೇಕೆಂದು  ಎಂದು ಅಖಿಲ ಭಾರತ ಹಿಂದೂ ಮಹಾಸಭಾ ಒತ್ತಾಯಿಸಿದೆ.

ಸ್ವಾತಂತ್ರ್ಯ ಹೋರಾಟಕ್ಕೆ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಕೊಡುಗೆ (Netaji On currency Notes?) ರಾಷ್ಟ್ರಪಿತನಿಗಿಂತ ಕಡಿಮೆಯಿಲ್ಲ ಎಂದು ನಾವು ಭಾವಿಸುತ್ತೇವೆ.

ಆದ್ದರಿಂದ ಭಾರತದ ಶ್ರೇಷ್ಠ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಅವರನ್ನು ಗೌರವಿಸಲು ಉತ್ತಮ ಮಾರ್ಗವೆಂದರೆ ಅವರ ಭಾವಚಿತ್ರವನ್ನು ದೇಶದ ಕರೆನ್ಸಿ ನೋಟುಗಳಲ್ಲಿ ಹಾಕಬೇಕು.

ಗಾಂಧೀಜಿ ಅವರ ಫೋಟೋವನ್ನು ನೇತಾಜಿಯವರೊಂದಿಗೆ ಬದಲಾಯಿಸಬೇಕು ಎಂದು ಅಖಿಲ ಭಾರತ ಹಿಂದೂ ಮಹಾಸಭಾ ಹೇಳಿದೆ.

ಅಖಿಲ ಭಾರತ ಹಿಂದೂ ಮಹಾಸಭಾದ ರಾಜ್ಯ ಕಾರ್ಯಾಧ್ಯಕ್ಷ ಚಂದ್ರಚೂರ್ ಗೋಸ್ವಾಮಿ ಅವರು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ,  

https://fb.watch/gjmTfwGQy2/

ಮುಂದಿನ ವರ್ಷ ನಡೆಯಲಿರುವ ಪಶ್ಚಿಮಬಂಗಾಳ ರಾಜ್ಯ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಲು ಸಂಘಟನೆ ನಿರ್ಧರಿಸಿದೆ. ಬಂಗಾಳ ರಾಜ್ಯದಲ್ಲಿ ಹಿಂದೂ ಬಂಗಾಳಿಗಳ ಹಕ್ಕುಗಳನ್ನು ರಕ್ಷಿಸಲು ಟಿಎಂಸಿ ಅಥವಾ ಬಿಜೆಪಿಗೆ ಸಾಧ್ಯವಾಗಿಲ್ಲ.

ಅವರ ಹಕ್ಕುಗಳನ್ನು ರಕ್ಷಿಸಲು ನಾವು ಹೋರಾಡುತ್ತೇವೆ. ಕೆಲವು ಬಿಜೆಪಿ ಶಾಸಕರ (BJP MLA) ಬಂಗಾಳ ವಿಭಜನೆಯ ಬೇಡಿಕೆಯನ್ನು ನಾವು ಬೆಂಬಲಿಸುವುದಿಲ್ಲ.

ಇದನ್ನೂ ಓದಿ : https://vijayatimes.com/bindu-slams-rss/

ರಾಜ್ಯವನ್ನು ಬಲಪಡಿಸುವ ನಿಟ್ಟಿನಲ್ಲಿ, ನಾವು ಕೆಲಸ ಮಾಡಲು ಬಯಸುತ್ತೇವೆ ಎಂದು ಗೋಸ್ವಾಮಿ ಹೇಳಿದ್ದಾರೆ.

ಇನ್ನೊಂದೆಡೆ ಚಂದ್ರಚೂರ್ ಗೋಸ್ವಾಮಿ ಅವರ ಬೇಡಿಕೆಯು ಟಿಎಂಸಿ ಮತ್ತು ಕಾಂಗ್ರೆಸ್‌ನಿಂದ ಟೀಕೆಗೆ ಗುರಿಯಾಗಿದ್ದು, ಪಶ್ಚಿಮ ಬಂಗಾಳದಲ್ಲಿ ವಿಭಜಕ ರಾಜಕೀಯವನ್ನು ಅನುಸರಿಸುವುದನ್ನು ಬಿಜೆಪಿ ನಿಲ್ಲಿಸಬೇಕು ಎಂದು ಹೇಳಿವೆ.

ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ಅಧೀರ್ ಚೌಧರಿ ಮಾತನಾಡಿ, ದೇಶದ ಸ್ವಾತಂತ್ರ್ಯದಲ್ಲಿ ಗಾಂಧೀಜಿಯವರ ಪಾತ್ರ ನಿರ್ವಿವಾದ.

ಮಹಾತ್ಮ ಗಾಂಧಿಯವರ ಹತ್ಯೆಯ ಹಿಂದೆ ಯಾರಿದ್ದಾರೆಂದು ನಮಗೆಲ್ಲರಿಗೂ ತಿಳಿದಿದೆ. ಈಗ ಅವರ ಆದರ್ಶಗಳು ಮತ್ತು ತತ್ವಗಳು ದಿನನಿತ್ಯದ ಕೊಲೆಯಾಗುತ್ತಿವೆ. ಇದಕ್ಕೆ ಬಿಜೆಪಿ ಮತ್ತು ಆರ್‌ಎಸ್‌ಎಸ್ ಉತ್ತರಿಸಬೇಕು ಎಂದು ಹೇಳಿದರು.

Exit mobile version