ವಿಮಾನ ಪ್ರಯಾಣಿಕರಿಗೆ ಹೊಸ ಗೈಡ್ಲೈನ್ಸ್ ಜಾರಿ

ನವದೆಹಲಿ, ಮಾ. 13: ದೇಶಾದ್ಯಂತ ಎರಡನೇ ಸುತ್ತಿನಲ್ಲಿ ಕೋವಿಡ್-19 ಸಾಂಕ್ರಾಮಿಕವು ಹರಡುತ್ತಿದ್ದು, ಡಿಜಿಸಿಎ ವಿಮಾನ ಪ್ರಯಾಣಿಕರಿಗೆ ಹೊಸ ಗೈಡ್‌ಲೈನ್ಸ್‌ ಜಾರಿಗೆ ತಂದಿದೆ. ಒಂದು ವೇಳೆ ವಿಮಾನ ಪ್ರಯಾಣಿಕರು ಮಾಸ್ಕ್ ಧರಿಸದೆ ಹೋದಲ್ಲಿ ಮತ್ತು ಕೊರೊನಾ ಮಹಾಮಾರಿಯ (Coronavirus Case)ಮಾರ್ಗಸೂಚಿಗಳನ್ನು ಅನುಸರಿಸದೆ ಹೋದಲ್ಲಿ ಅವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು. ಇನ್ನು ಒಂದು ವೇಳೆ ವಿಮಾನ ಪ್ರಯಾಣಿಕರು ಪದೇ ಪದೇ ತಪ್ಪನ್ನು ಪುನರಾವರ್ತಿಸಿದರೆ ಅವರ ವಿಮಾನಯಾನದ ಮೇಲೆ ಖಾಯಂ ಆಗಿ ನಿರ್ಬಂಧ ವಿಧಿಸಲಾಗುವ ಸಾಧ್ಯತೆ ಇದೆ.

”ವಿಮಾನ ಪ್ರಯಾಣ ಮಾಡುತ್ತಿರುವ ಕೆಲವು ಪ್ರಯಾಣಿಕರು ‘ಕೋವಿಡ್ 19 ಶಿಷ್ಟಾಚಾರ’ಗಳನ್ನು ಸರಿಯಾಗಿ ಪಾಲಿಸದೆ ಇರುವುದು ನಮ್ಮ ಗಮನಕ್ಕೆ ಬಂದಿದೆ. ಮಾಸ್ಕ್ ಅನ್ನು ಸರಿಯಾಗಿ ಧರಿಸಬೇಕು. ಮೂಗಿನ ಕೆಳಗೆ ಅಲ್ಲ. ವಿಮಾನ ನಿಲ್ದಾಣಕ್ಕೆ ಪ್ರವೇಶಿಸಿದಾಗಿನಿಂದ ವಿಮಾನದಿಂದ ಇಳಿದು ಹೊರ ಹೋಗುವವರೆಗೂ ಈ ಶಿಷ್ಟಾಚಾರಗಳನ್ನು ಪಾಲಿಸಬೇಕು” ಎಂದು ಡಿಜಿಸಿಎ ತಿಳಿಸಿದೆ.

ವಿಮಾನ ಏರುವ ಸಂದರ್ಭದಲ್ಲಿ ಕೂಡ ಅನೇಕ ಪ್ರಯಾಣಿಕರು ಸರಿಯಾದ ರೀತಿಯಲ್ಲಿ ಮಾಸ್ಕ್ ಧರಿಸಿರುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಸರಿಯಾಗಿ ಮಾಸ್ಕ್‌ ಧರಿಸುವ ಜೊತೆಗೆ ವಿಮಾನ ಪ್ರಯಾಣದ ಎಲ್ಲ ಸಮಯದಲ್ಲಿಯೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಆದೇಶಿಸಿದೆ.

Exit mobile version