ನ್ಯೂಕ್ಲಿಯರ್ ವಿಜ್ಞಾನಿ ಹತ್ಯೆ: ಇಸ್ರೇಲ್ ಕೈವಾಡ ಶಂಕೆ?

ಟೆಹ್ರಾನ್, ನ. 28: ಭಯೋದ್ಪಾದಕರು ಇರಾನ್‌ನ ಪ್ರಸಿದ್ಧ ಪರಮಾಣು ವಿಜ್ಞಾನಿಯೊಬ್ಬರನ್ನು ಶುಕ್ರವಾರ(ನವೆಂಬರ್ 27, 2020) ಟೆಹ್ರಾನ್ ನ ಹೊರವಲಯದಲ್ಲಿ ಹತ್ಯೆಗೈದಿರುವ ಘಟನೆ ನಡೆದಿದೆ. ವಿಜ್ಞಾನಿ ಹತ್ಯೆಯ ಹಿಂದೆ ಇಸ್ರೇಲ್ ಕೈವಾಡ ಇದ್ದಿರುವುದಾಗಿ ಇರಾನ್ ಆರೋಪಿಸಿದೆ. ಈ ಬಗ್ಗೆ ಅಮೆರಿಕಾದ ಅಧಿಕಾರಿ ಹಾಗೂ ಇಬ್ಬರು ಗುಪ್ತಚರ ಅಧಿಕಾರಿಗಳೀಂದ ಮಾಹಿತಿ ಲಬಿಸಿದೆ ಎಂದು ನ್ಯೂಯಾರ್ಕ್ ಟೈಮ್ಸ್ ಹೇಳಿದೆ.

ಶಸ್ತ್ರಧಾರಿ ಗುಂಪೊಂದು ವಿಜ್ಞಾನಿ ಮೋಹ್ಸೆನ್ ಫಖ್ರಿಝಾಡೆ ಅವರ ಕಾರಿನ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ಮೋಹ್ಸೆನ್ ಅವರ ರಕ್ಷಣಾ ಸಿಬ್ಬಂದಿಗಳು ಪ್ರತಿದಾಳಿ ನಡೆಸಿದ್ದರು ಕೂಡಾ ಮೋಹ್ಸೆನ್ ಗಂಭೀರವಾಗಿ ಗಾಯಗೊಂಡಿರುವುದಾಗಿ ಇರಾನ್ ರಕ್ಷಣಾ ಸಚಿವಾಲಯ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಿದೆ.

ಫಕ್ರಿಝಾಡೆಹ್ ಅವರು ಸಂಶೋಧನಾ ಮತ್ತು ಆವಿಷ್ಕಾರ ಸಚಿವಾಲಯದ ಮುಖ್ಯಸ್ಥರಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದ ವಿಜ್ಞಾನಿ ಮೋಹ್ಸೆನ್ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿರುವುದಾಗಿ ವರದಿ ವಿವರಿಸಿದೆ.

ಖ್ಯಾತ  ವಿಜ್ಞಾನಿ ಫಖ್ರಿಝಾಡೆಹ್, ಅವರನ್ನು “ಇರಾನ್ ನ ಪರಮಾಣು ಶಸ್ತ್ರಾಸ್ತ್ರ ಕಾರ್ಯಕ್ರಮದ ಪಿತಾಮಹ” ಎಂದು  ಇರಾನ್ ಪ್ರಧಾನಮಂತ್ರಿ ಬೆಝಮಿನ್ ನೇತನ್‌ಯಾಹೂ ಮೊಹ್ಸೆನ್  ಅವರು ಬಣ್ಣಿಸಿದ್ದರು. ಫಖ್ರಿಝಾಡೆಹ್ ಕಾರಿನಲ್ಲಿ ಟೆಹ್ರಾನ್ ಪ್ರಾಂತ್ಯದ ಪೂರ್ವ ದಾಮಾವಂದ್ ಕೌಂಟಿ ಸಮೀಪದ ಅಬ್ಸಾರ್ಡ್ ನಗರದತ್ತ ಪ್ರಯಾಣಿಸುತ್ತಿದ್ದಾಗ ಗುಂಡಿಟ್ಟು ಹತ್ಯೆ ಮಾಡಲಾಗಿದೆ.

Exit mobile version