ಪ್ರವೀಣ್ ನೆಟ್ಟಾರು ಹತ್ಯೆಗೆ ಸಂಬಂಧಿಸಿದ 4 ಆರೋಪಿಗಳ ಸುಳಿವು ನೀಡಿದವರಿಗೆ ನಗದು ಬಹುಮಾನ : NIA

Karnataka : ಕರ್ನಾಟಕದ ರಾಜ್ಯದ ಮಂಗಳೂರಿನಲ್ಲಿ(Mangaluru) ಬಿಜೆಪಿ ಯುವ ಮೋರ್ಚಾ ನಾಯಕ ಪ್ರವೀಣ್ ನೆಟ್ಟಾರು ಹತ್ಯೆಗೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿರುವ ನಾಲ್ವರು ಆರೋಪಿಗಳನ್ನು ಪತ್ತೆಹಚ್ಚಲು ಅಧಿಕಾರಿಗಳಿಗೆ ಸಹಾಯ ಮಾಡುವ ಯಾರಿಗಾದರೂ ರಾಷ್ಟ್ರೀಯ ತನಿಖಾ ಸಂಸ್ಥೆ(NIA Over Praveen Murder) ಸುತ್ತೋಲೆ ಮತ್ತು ನಗದು ಬಹುಮಾನವನ್ನು ಘೋಷಿಸಿದೆ.

ತುಫೈಲ್, ಮೊಹಮ್ಮದ್ ಮುಸ್ತಫಾ, ಉಮರ್ ಫಾರೂಕ್ ಮತ್ತು ಅಬುಬುಕರ್ ಸಿದ್ದಿಕ್ ಅವರನ್ನು ಎನ್‌ಐಎ ತೀವ್ರವಾಗಿ ಶೋಧಿಸುತ್ತಿದೆ.

ತುಫೈಲ್ ಮಡಿಕೇರಿ ಮೂಲದವನಾಗಿದ್ದು, ಉಳಿದ 3 ಆರೋಪಿಗಳು ದಕ್ಷಿಣ ಕನ್ನಡದ ಭಾಗವಾಗಿದ್ದಾರೆ.

ತಲೆಮರೆಸಿಕೊಂಡಿರುವ ನಾಲ್ವರು ಆರೋಪಿಗಳ ಪತ್ತೆಗೆ ಮಾಹಿತಿ ನೀಡಿದವರಿಗೆ ಒಟ್ಟು 14 ಲಕ್ಷ ರೂಪಾಯಿ ನಗದು ಬಹುಮಾನ ನೀಡಲಾಗುವುದು ಎಂದು ತಂಡ ಘೋಷಿಸಿದೆ.

ಎಲ್ಲಾ ಆರೋಪಿಗಳು ಈಗ ನಿಷೇಧಿತ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(PFI) ಜೊತೆ ಸಂಪರ್ಕ ಹೊಂದಿದ್ದಾರೆ ಎಂದು ಶಂಕಿಸಿ ಹೇಳಲಾಗಿದೆ.

2022ರ ಜುಲೈನಲ್ಲಿ ಕರ್ನಾಟಕದ ದಕ್ಷಿಣ ಕನ್ನಡದಲ್ಲಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತ ಪ್ರವೀಣ್ ನೆಟ್ಟಾರು(NIA Over Praveen Murder) ಅವರನ್ನು ಬೈಕ್‌ನಲ್ಲಿ ಬಂದ ಅಪರಿಚಿತ ವ್ಯಕ್ತಿಗಳು ಮಾರಕಾಸ್ತೃಗಳಿಂದ ಹತ್ಯೆಗೈದಿದ್ದರು.

https://fb.watch/gwOQOjxw-x/ ನಮ್ಮ ಕರ್ನಾಟಕ ಬಾವುಟದ ಸಂಕೇತ ಏನು ಗೊತ್ತಾ ? ಕೊಟ್ಟ ಉತ್ತರ ಕೇಳಿ . ಕನ್ನಡದ ಬಗ್ಗೆ ನಿಮಗೆಷ್ಟು ಗೊತ್ತು?

ಈ ಪ್ರಕರಣ ಕುರಿತು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರು ಬಿಜೆಪಿ ಯುವ ಕಾರ್ಯಕರ್ತನ ಹತ್ಯೆಗೆ ಸಂತಾಪ ವ್ಯಕ್ತಪಡಿಸಿ,

ಆರೋಪಿಗಳನ್ನು ಶೀಘ್ರವೇ ಬಂಧಿಸಿ ಶಿಕ್ಷಿಸಲಾಗುವುದು ಎಂದು ಅಂದು ಭರವಸೆ ನೀಡಿದ್ದರು.

ಇನ್ನು ಟ್ವಿಟರ್‌ನಲ್ಲಿ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಸಿಎಂ ಬೊಮ್ಮಾಯಿ ಅವರು,

“ದಕ್ಷಿಣ ಕನ್ನಡದ ಸುಳ್ಯದ ಪಕ್ಷದ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅವರ ಬರ್ಬರ ಹತ್ಯೆಯನ್ನು ನಾನು ಖಂಡಿಸುತ್ತೇನೆ.

ಇಂತಹ ಘೋರ ಕೃತ್ಯ ಎಸಗಿದ ಆರೋಪಿಗಳನ್ನು ಶೀಘ್ರವೇ ಬಂಧಿಸಿ ಕಾನೂನಿನಡಿಯಲ್ಲಿ ಶಿಕ್ಷಿಸಲಾಗುವುದು.

ಇದನ್ನೂ ಓದಿ : https://vijayatimes.com/cm-about-kannada-language/

ಪ್ರವೀಣ್ ಅವರ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ಹೇಳಿ ಟ್ವೀಟ್ ಮಾಡಿದ್ದರು.

ಸದ್ಯ ನಾಲ್ವರು ಆರೋಪಿಗಳು ಎಎನ್ಐ ಕಣ್ಣಿನಿಂದ ತಲೆಮರಿಸಿಕೊಂಡಿದ್ದು, ಆರೋಪಿಗಳ ಸುಳಿವು ನೀಡಿದವರಿಗೆ ನಗದು ಬಹುಮಾನವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಘೋಷಿಸಿದೆ.

Exit mobile version