ನೀಫಾ ವೈರಸ್ ಎಚ್ಚರ : ಕೇರಳದಲ್ಲಿ ನಿಫಾ ವೈರಸ್ ಹೆಚ್ಚಳ ಕರ್ನಾಟಕದಲ್ಲೂ ಆರೋಗ್ಯ ಇಲಾಖೆಯಿಂದ ಹೈ ಅಲರ್ಟ್

ರಾಜ್ಯದಲ್ಲಿ ನಿಫಾ ವೈರಸ್ (Nipah virus alert in Kar) ಆತಂಕದ ಬೆನ್ನಲ್ಲೇ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಿತು. ಸಭೆ ಬಳಿಕ ಆರೋಗ್ಯ ಇಲಾಖೆ ಸುತ್ತೋಲೆ

ಹೊರಡಿಸಿದ್ದು, ದಕ್ಷಿಣ ಕನ್ನಡದ (Dakshina Kannada) ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಶಂಕಿತ ಪ್ರಕರಣಗಳನ್ನು ದಾಖಲಿಸಿಕೊಂಡು ಚಿಕಿತ್ಸೆ ನೀಡಬೇಕು ಎಂದು ಸುತ್ತೋಲೆಯಲ್ಲಿ

ಹೆಚ್ಚಿನ ಅಲರ್ಟ್​ಗೆ (Nipah virus alert in Kar) ಸೂಚಿಸಿದೆ.

ಕೇರಳದಲ್ಲಿ (Kerala) ನಿಫಾ ವೈರಸ್ ಆರ್ಭಟ ಹೆಚ್ಚಾಗಿದ್ದು, ತೀವ್ರ ಜ್ವರದಿಂದ ಬಳಲುತ್ತಿದ್ದ ಇಬ್ಬರು ಸಾವನ್ನಪ್ಪಿರುವುದರಿಂದ ಅವರಿಗೆ ನಿಫಾ ವೈರಸ್ ತಗುಲಿದ್ದು ದೃಢವಾಗಿದೆ. ಶಂಕಿತ ಪ್ರಕರಣದ

ಕುರಿತು ಜಿಲ್ಲಾ ಕಣ್ಗಾವಲು ಕಚೇರಿಗೆ ಮಾಹಿತಿ‌ ನೀಡಬೇಕಾಗಿದ್ದು, ನಿಫಾ ವೈರಸ್ ನಿರ್ವಹಣೆಗಾಗಿ ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಪ್ರತ್ಯೇಕ 10 ಹಾಸಿಗೆಯ ವಾರ್ಡ್ ಕಾಯ್ದಿರಿಸಲು‌

ಸುತ್ತೋಲೆಯಲ್ಲಿ ಸೂಚಿಸಲಾಗಿದೆ.

ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಆಕ್ಸಿಜನ್ (Oxygen) ಮತ್ತು ಔಷಧಿಗಳನ್ನು ಒಳಗೊಂಡಂತೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲು ತಿಳಿಸಲಾಗಿದೆ. ಇನ್ನು ಅಗತ್ಯವಿರುವ ಔಷಧಿಗಳನ್ನು

ಶೇಖರಿಸಲು ಹಾಗೂ ನಿಫಾ ರೋಗ ಲಕ್ಷಣಗಳ ಕುರಿತು ಕ್ಷೇತ್ರ ಸಿಬ್ಬಂದಿಗೆ ತರಬೇತಿ ನೀಡುವ ವ್ಯವಸ್ಥೆ ಮಾಡಬೇಕು. ಯಾವುದೇ ಶಂಕಿತ ಪ್ರಕರಣಗಳ ಮಾದರಿಯನ್ನು ಪುಣೆಯ ಎನ್​ಐವಿ ಲ್ಯಾಬ್ ಗೆ

(Pune NIV Lab) ಕಳುಹಿಸಲು ವ್ಯವಸ್ಥೆ ಮಾಡಬೇಕು ಮತ್ತು ಸಾರ್ವಜನಿಕರಿಗೆ ಈ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಮಾಡಬೇಕು ಎಂದು ಸೂಚಿಸಲಾಗಿದೆ.

ಕೇರಳದಲ್ಲಿ ಪ್ರಕರಣಗಳು ಹೆಚ್ಚಾದರೆ ಇನ್ನಷ್ಟು ಕಠಿಣ ಕ್ರಮ
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundurao) ಅವರು ಸಭೆ ಬಳಿಕ ಮಾತನಾಡಿದ್ದು, ಕೇರಳ ರಾಜ್ಯದಲ್ಲಿ ನಾಲ್ವರಲ್ಲಿ ನಿಫಾ ವೈರಸ್ ಕಾಣಿಸಿಕೊಂಡಿದೆ ಮತ್ತು ಕೇರಳದಲ್ಲಿ ನಿಫಾ

ವೈರಸ್​ನಿಂದ ಇಬ್ಬರು ಮೃತಪಟ್ಟಿದ್ದಾರೆ ಹಾಗಾಗಿ ರಾಜ್ಯದ ಗಡಿ ಜಿಲ್ಲೆಗಳಲ್ಲಿ ಎಚ್ಚರಿಕೆ ವಹಿಸಲು ಸೂಚನೆ ನೀಡಿದ್ದೇನೆ.

ಅಧಿಕಾರಿಗಳ ಸಂಪರ್ಕದಲ್ಲಿದ್ದು ಮಾಹಿತಿ‌ ಪಡೆಯುತ್ತಿದ್ದೇನೆ. ರೋಗ ಲಕ್ಷಣಗಳು ಪತ್ತೆಯಾದರೆ ನಿಗಾ ವಹಿಸಲು ಸೂಚಿಸಿದ್ದೇನೆ. 2-3 ದಿನಗಳ ಕಾಲ ಪ್ರಕರಣಗಳ ಬಗ್ಗೆ ನಿಗಾ ವಹಿಸುತ್ತೇವೆ.

ಕೇರಳದಲ್ಲಿ ಪ್ರಕರಣಗಳು ಸ್ಫೋಟಗೊಂಡರೆ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಕೇರಳದಿಂದ ನಿಫಾ ಔಟ್ ಬ್ರೇಕ್ ಆಗಿದೆ. ಸದ್ಯಕ್ಕೆ ಇಲ್ಲಿಯವರೆಗೂ ಜಿಲ್ಲೆಯಲ್ಲಿ ಯಾವುದೇ ಶಂಕಿತ ಪ್ರಕರಣಗಳು ಕಂಡುಬಂದಿಲ್ಲ. ಅಂತರ್ ರಾಜ್ಯ ಗಡಿಗಳಲ್ಲಿ ಯಾವುದೇ ಚೆಕ್ ಪೋಸ್ಟ್

(Check Post) ಗಳನ್ನು ತೆರೆಯಲ್ಲ. ಎಲ್ಲಾ ಮಾದರಿಯ ಜ್ವರದ ರೋಗಿಗಳಿಗೆ ಟೆಸ್ಟ್ ಮಾಡಬೇಕಾಗಿದ್ದು ಕೇರಳದಿಂದ ಬಂದ ರೋಗಿಗಳ ಮೇಲೆ ನಿಗಾ ಇಟ್ಟು ಮಾಹಿತಿ ನೀಡಬೇಕು‌ ಎಂದು ಮಂಗಳೂರು

ಜಿಲ್ಲಾ ಆರೋಗ್ಯ ಇಲಾಖೆ ಸರ್ವೇಕ್ಷಣಾಧಿಕಾರಿ ಡಾ.ನವೀನ್ ಚಂದ್ರ (Dr. Naveen Chandra) ಪ್ರತಿಕ್ರಿಯೆ ನೀಡಿದ್ದು, ಗಡಿಭಾಗದ ಹಾಗೂ ಎಲ್ಲಾ ಆಸ್ಪತ್ರೆಗಳಿಗೆ ಸೂಚನೆ‌ ಹೊರಡಿಸಲಾಗಿದೆ ಎಂದರು.

ಮಂಗಳೂರಿನಲ್ಲಿರುವ (Mangalore) ಎಲ್ಲಾ 8 ಮೆಡಿಕಲ್ ಕಾಲೇಜುಗಳಿಗೆ ಕೇರಳ ಹಾಗೂ ಜ್ವರದಿಂದ ಬರುವ ರೋಗಿಗಳ ಬಗ್ಗೆ ನಿಗಾ ಮತ್ತು ಮಾಹಿತಿ ನೀಡಲು ಸೂಚನೆ ನೀಡಿದ್ದು, ಐಸೋಲೇಸನ್

ವಾರ್ಡ್​ಗಳನ್ನು (Isolation Ward) ಮೀಸಲಿಡಲು ಸೂಚಿಸಿದ್ದೇವೆ. ವೆನ್ಲಾಕ್ ಆಸ್ಪತ್ರೆಯಲ್ಲೂ ಕೂಡ ಐಸೋಲೇಶನ್ ವಾರ್ಡ್ ತೆರೆಯಲಾಗಿದೆ ಮತ್ತು ಬಾವಲಿ ಕಚ್ಚಿದ ಹಣ್ಣು, ಹಂದಿಗಳಿಂದ ಸೋಂಕು

ತಗುಲುತ್ತದೆ ಹಾಗಾಗಿ ಈ ಬಗ್ಗೆ ಜನರು ಎಚ್ಚರಿಕೆ ವಹಿಸಬೇಕಾಗುತ್ತೆ‌ ಎಂದರು.

ಇದನ್ನು ಓದಿ: 22ರಲ್ಲಿ ಕಳ್ಳತನ 80ರಲ್ಲಿ ಜೈಲು: 58 ವರ್ಷಗಳ ಬಳಿಕ ಬೀದರ್‌ನಲ್ಲಿ ಎಮ್ಮೆ ಕಳ್ಳನ ಬಂಧನ

ಭವ್ಯಶ್ರೀ ಆರ್.ಜೆ

Exit mobile version