ಕ್ರಿಪ್ಟೋ ಲಾಭದ ಮೇಲೆ ಶೇ.30 ರಷ್ಟು ತೆರಿಗೆ ವಿಧಿಸಿದ್ದೇವೆ : ನಿರ್ಮಲಾ ಸೀತಾರಾಮನ್!

budget

ಇಂದು ಫೆಬ್ರವರಿ 1 2022ರ ಮಂಗಳವಾರ ಕೇಂದ್ರ ಬಜೆಟ್ ಮಂಡನೆಯನ್ನು ಕೇವಲ 90 ನಿಮಿಷಗಳಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹಿಂದಿನ ದಾಖಲೆಯನ್ನು ಮುರಿಯದೆ ಮುಗಿಸಿಕೊಟ್ಟರು. ಈ ಬಾರಿಯ ಬಜೆಟ್ ಮಂಡನೆಯಲ್ಲಿ ಬಹುಮುಖ್ಯ ಅಂಶಗಳನ್ನು ವಿತ್ತ ಸಚಿವರು ಬಹಿರಂಗಪಡಿಸಿದರು. ಕೃಷಿ, ಉದ್ಯೋಗ, ಬ್ಯಾಂಕ್ ಸೇರಿದಂತೆ ಹಲವು ಹೊಸ ಯೋಜನೆಗಳಿಗೆ ಚಾಲನೆ ನೀಡಿದರು

.

ಈ ಬಾರಿ ಬಜೆಟ್ ನಲ್ಲಿ ಸಾಕಷ್ಟು ಹೊಸ ಯೋಜನೆಗಳಿಗೆ ಉತ್ತೇಜನ ನೀಡುವ ಬಗ್ಗೆ ಉತ್ತಮ ಸ್ಪಷ್ಟನೆ ನೀಡಲಾಗಿದೆಸಿದರ ಬೆನ್ನಲ್ಲೇ ಕ್ರಿಪ್ಟೋ ಕರೆನ್ಸಿ ಬಗ್ಗೆ ಹಲವಾರು ಪ್ರಶ್ನೆಗಳು ಉದ್ಬವಗೊಂಡಿತ್ತು. ಈ ಕುರಿತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಡಿಜಿಟಲ್ ಕರೆನ್ಸಿಯನ್ನು ನೂತನವಾಗಿ ಪರಿಚಯಿಸುವುದಾಗಿ ಬಜೆಟ್‍ನಲ್ಲಿ ತಿಳಿಸಿದ್ದಾರೆ.

ಇನ್ನು ಐಟಿ ರಿಟನ್ರ್ಸ್ ಫೈಲ್ ಮಾಡುವವರಿಗೆ ಹೊಸ ನಿಯಮ ಜಾರಿಯಾಗಲಿದೆ ಅದು ಶೀಘ್ರವೇ ಅನ್ವಯವಾಗಲಿದೆ. ಎರಡು ವರ್ಷಗಳ ಸಮಯದಲ್ಲಿ ಐಟಿ ರಿಟನ್ರ್ಸ್ ಫೈಲ್ ಮಾಡಿಕೊಳ್ಳಬಹುದಾಗಿದೆ ಎಂದು ಹೇಳಿದ್ದಾರೆ. ಈ ಮಾಹಿತಿಯ ನಡುವೆ ಕ್ರಿಪ್ಟೋ ಕರೆನ್ಸಿಗೆ ತೆರಿಗೆ ವಿಧಿಸಿರುವ ಕೇಂದ್ರ, ಕ್ರಿಪ್ಟೋ ಕರೆನ್ಸಿಗಳ ಲಾಭದ ಮೆರಗೆ ಶೇ.30 ರಷ್ಟು ತೆರಿಗೆ ಘೋಷಣೆ ಮಾಡಿದೆ.

Exit mobile version