NLC ಇಂಡಿಯಾ ಲಿಮಿಟೆಡ್‌ನಲ್ಲಿ ಉದ್ಯೋಗ ಅವಕಾಶ: ಐಟಿಐ, ಡಿಪ್ಲೋಮ ಪಾಸಾದವರು ಇಂದೇ ಅರ್ಜಿ ಸಲ್ಲಿಸಬಹುದು.

ದೇಶದ ಪ್ರತಿಷ್ಠಿತ ನೈವೇಲಿ ಲಿಗ್ನೈಟ್ ಕಾರ್ಪೋರೇಷನ್ ಇಂಡಿಯಾ ಲಿಮಿಟೆಡ್ ಇಂಡಸ್ಟ್ರಿಯಲ್ ಟ್ರೈನಿ (Naiveli Lignite Corporation India Limited Industrial Trainee) ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ. ಡಿಪ್ಲೊಮ ಮತ್ತು ITI ಪೂರೈಸಿರುವವರು ಅರ್ಜಿ ಸಲ್ಲಿಸಬಹುದು. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ITI

ಹುದ್ದೆಗಳ ವಿವರ
ಇಂಡಸ್ಟ್ರಿಯಲ್ ಟ್ರೈನಿ / ಎಸ್ಎಂಇ ಅಂಡ್ ಟೆಕ್ನಿಕಲ್ : 100
ಇಂಡಸ್ಟ್ರಿಯಲ್ ಟ್ರೈನಿ (ಮೈನ್ಸ್ ಅಂಡ್ ಮೈನ್ಸ್ ಸಪೋರ್ಟ್ ಸರ್ವೀಸ್) : 139
ಒಟ್ಟು ಹುದ್ದೆಗಳು : 239

ಶೈಕ್ಷಣಿಕ ಅರ್ಹತೆಗಳು
ಇಂಡಸ್ಟ್ರಿಯಲ್ ಟ್ರೈನಿ / ಎಸ್ಎಂಇ ಅಂಡ್ ಟೆಕ್ನಿಕಲ್ : ಡಿಪ್ಲೊಮ
ಇಂಡಸ್ಟ್ರಿಯಲ್ ಟ್ರೈನಿ (ಮೈನ್ಸ್ ಅಂಡ್ ಮೈನ್ಸ್ ಸಪೋರ್ಟ್ ಸರ್ವೀಸ್) : ITI

ವಯೋಮಿತಿ : ಗರಿಷ್ಠ 37 ವರ್ಷ ವಯಸ್ಸು ಮೀರಿರಬಾರದು. OBC ಅಭ್ಯರ್ಥಿಗಳಿಗೆ 40 ವರ್ಷದವರೆಗೆ, SC / ST ಅಭ್ಯರ್ಥಿಗಳಿಗೆ 42 ವರ್ಷ ವರೆಗೆ ಅರ್ಜಿ ಸಲ್ಲಿಸಲು ಅವಕಾಶ ಇದೆ.

ತರಬೇತಿ ಅವಧಿ : 3 ವರ್ಷ.

ಪ್ರತಿ ತಿಂಗಳು ನೀಡುವ ಸ್ಟೈಫಂಡ್ :
ಇಂಡಸ್ಟ್ರಿಯಲ್ ಟ್ರೈನಿ / ಎಸ್ಎಂಇ ಅಂಡ್ ಟೆಕ್ನಿಕಲ್: ಮೊದಲ ವರ್ಷ Rs.18,000, ಎರಡನೇ ವರ್ಷ Rs.20,000, ಮೂರನೇ ವರ್ಷ Rs.22,000.
ಇಂಡಸ್ಟ್ರಿಯಲ್ ಟ್ರೈನಿ (ಮೈನ್ಸ್ ಅಂಡ್ ಮೈನ್ಸ್ ಸಪೋರ್ಟ್ ಸರ್ವೀಸ್): ಮೊದಲ ವರ್ಷ Rs.14,000, ಎರಡನೇ ವರ್ಷ Rs.16,000, ಮೂರನೇ ವರ್ಷ Rs.18,000.

ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು : ಆಧಾರ್ ಕಾರ್ಡ್, ವಿದ್ಯಾರ್ಹತೆ ದಾಖಲೆಗಳು, ಪಾಸ್ಪೋರ್ಟ್ (Passport) ಅಳತೆಯ ಭಾವಚಿತ್ರ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ.

ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 15-06-2024

ನೈವೇಲಿ ಲಿಗ್ನೈಟ್ ಕಾರ್ಪೋರೇಷನ್ ಇಂಡಿಯಾ ಲಿಮಿಟೆಡ್ ಅಧಿಕೃತ ವೆಬ್ಸೈಟ್ ವಿಳಾಸ : https://www.nlcindia.in/new_website

Exit mobile version