ಹಾರ ಶಾಲು ಸಂಸ್ಕೃತಿ ಬೇಡ – ಬಸವರಾಜ ಬೊಮ್ಮಾಯಿ

ಬೆಂಗಳೂರು, ಆ. 10: ಸಭೆಗಳಲ್ಲಿ ಹಾರ, ಶಾಲು ಮತ್ತು ಹೂ ಗೂಚ್ಚಗಳನನ್ನು ನೀಡವುದನ್ನು ನಿಷೇಧಿಸಲಾಗಿದ್ದು ಅವುಗಳ ಬದಲಿಗೆ ಪುಸ್ತಕಗಳನ್ನು ನೀಡಬಹುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅದೇಶಿಸಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಹಿರಿಯ ಪೋಲೀಸ್ ಅಧಿಕಾರಿಗಳ ಸಭೆಗೆ ಆಗಮಿಸಿದ ಅವರಿಗೆ ಸಾಂಪ್ರದಾಯಿಕವಾಗಿ ಹೂಗುಚ್ಚ ನೀಡಲು ಬಂದಾಗ ಅದನ್ನು ಸ್ವೀಕರಿಸಲು ಮುಖ್ಯಮಂತ್ರಿಗಳು ನಿರಾಕರಿಸಿದರು. ಇದು ಅನವಶ್ಯಕವಾದ ವೆಚ್ಚವಾಗಿದ್ದು ಇದಕ್ಕೆ ಕಡಿವಾಣಹಾಕಬೇಕು. ಆದ್ದರಿಂದ ಇನ್ನು ಮುಂದೆ ಯಾವುದೇ ಸಾಂಪ್ರದಾಯಿಕ ಹೆಸರಿನಲ್ಲಿ ಯಾವುದೇ ಹಾರ, ಹೂಗುಚ್ಚ, ಶಾಲುಗಳು ಮತ್ತು ನೆನಪಿನ ಕಾಣಿಕೆ ಕೊಡುವ ಅಗತ್ಯವಿಲ್ಲ ಅದರ ಬದಲಾಗಿ ಕನ್ನಡ ಪುಸ್ತಕಗಳನ್ನು ನೀಡಬಹುದಾಗಿದೆ ಎಂದು ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ. ಮುಖ್ಯಮಂತ್ರಿಯವರ ಈ ಆದೇಶವನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಅವರು ಇದನ್ನು ಸರ್ಕಾರದ ಅಧಿಕೃತ ಆದೇಶವನ್ನಾಗಿ ಜಾರಿಗೊಳಿಸಿದ್ದಾರೆ.

Exit mobile version