INDIA: ನ್ಯಾಷನಲ್ ಥರ್ಮಲ್ ಪವರ್ ಕಾರ್ಪೋರೇಷನ್ ಲಿಮಿಟೆಡ್ (NTPC) ವಿವಿಧ ಹುದ್ದೆಗಳ(Different jobs) ನೇಮಕಾತಿಗೆ ಅಧಿಕೃತ ಅಧಿಸೂಚಿಸಿ, ಹೊರಡಿಸಲಾಗಿದೆ. ಅರ್ಜಿ ಸಲ್ಲಿಕೆಗೆ ಡಿಸೆಂಬರ್ 31 ರವರೆಗೆ ಅವಕಾಶ ನೀಡಲಾಗಿದೆ. ಅಧಿಸೂಚನೆಯ ಪ್ರಕಾರ, ಒಟ್ಟು 114 ಹುದ್ದೆಗಳಿಗೆ ನೇಮಕಾತಿ ನಡೆಸಲಾಗುತ್ತಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ನೇಮಕಾತಿ ಪ್ರಾಧಿಕಾರ (Appointing Authority) : ನ್ಯಾಷನಲ್ ಥರ್ಮಲ್ ಪವರ್ ಕಾರ್ಪೋರೇಷನ್ ಲಿಮಿಟೆಡ್ (NTPC)
ಹುದ್ದೆಗಳ ವಿವರ
ಮೈನಿಂಗ್ ಓವರ್ಮನ್ : 52
ಮ್ಯಾಗಜೀನ್ ಇನ್ಚಾರ್ಜ್: 07
ಮೆಕ್ಯಾನಿಕಲ್ ಸೂಪರ್ವೈಸರ್: 21
ಇಲೆಕ್ಟ್ರಿಕಲ್ ಸೂಪರ್ವೈಸರ್ : 13
ವೊಕೇಷನಲ್ ಟ್ರೈನಿಂಗ್ ಇನ್ಸ್ಟ್ರಕ್ಟರ್: 03
ಜೂನಿಯರ್ ಮೈನ್ ಸರ್ವೇಯರ್: 11
ಮೈನಿಂಗ್ ಸರ್ದಾರ್ : 07
ಒಟ್ಟು ಹುದ್ದೆಗಳು : 114
ಶೈಕ್ಷಣಿಕ ವಿದ್ಯಾರ್ಹತೆ (Educational qualification) : ಅಭ್ಯರ್ಥಿಗಳು SSLC ಜೊತೆಗೆ ಡಿಪ್ಲೊಮ ಪಾಸ್ ಮಾಡಿರಬೇಕು.
ವಯೋಮಿತಿ(age limit) : ಅರ್ಜಿ ಸಲ್ಲಿಕೆಗೆ ಕನಿಷ್ಠ 18 ವರ್ಷ ಹಾಗೂ ಗರಿಷ್ಠ 30 ವರ್ಷ ವಯಸ್ಸು ಮೀರಿರಬಾರದು. ವೊಕೇಷನಲ್ ಟ್ರೈನಿಂಗ್ ಇನ್ಸ್ಟ್ರಕ್ಟರ್ ಹುದ್ದೆಗೆ 40 ವರ್ಷ ವಯಸ್ಸು ಮೀರಿರಬಾರದು. ವರ್ಗವಾರು ವಯೋಮಿತಿ ಸಡಿಲಿಕೆ ಇರುತ್ತದೆ.

ವೇತನ ವಿವರ (Salary Details) : ಎಲ್ಲ ಹುದ್ದೆಗಳಿಗೆ ರೂ.50,000 ಮಾಸಿಕ ವೇತನ ಹಾಗೂ ಮೈನಿಂಗ್ ಸರ್ದಾರ್ ಹುದ್ದೆಗೆ ರೂ.40,000 ಮಾಸಿಕ ವೇತನ ನೀಡಲಾಗುತ್ತದೆ.
ಅರ್ಜಿ ಶುಲ್ಕ : (Application Fee)
GM / EWS /OBC ಅಭ್ಯರ್ಥಿಗಳಿಗೆ ರೂ.300.
SC / ST / PWD / ಮಾಜಿ ಸೈನಿಕ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇರುತ್ತದೆ. ಅರ್ಜಿ ಶುಲ್ಕವನ್ನು SBI ಬ್ಯಾಂಕ್ ನಲ್ಲಿ ಪಾವತಿಸುವುದು.
ಪ್ರಮುಖ ದಿನಾಂಕಗಳು (Important dates)
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 12-12-2023
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 31-12-2023
ಅರ್ಜಿ ಸಲ್ಲಿಸುವ ವಿಧಾನ : ಆನ್ಲೈನ್
ಅರ್ಜಿ ಸಲ್ಲಿಸಲು ಅಧಿಕೃತ ವೆಬ್ ವಿಳಾಸ : https://www.ntpc.co.in