ಅಮೆರಿಕದಲ್ಲಿ ನರ್ಸ್ ಹುದ್ದೆ ಖಾಲಿಯಿದೆ ಸಂಬಳ ತಿಂಗಳಿಗೆ 15ಲಕ್ಷ !

ನ್ಯೂಯಾರ್ಕ್ ಸೆ 04 : ಕೊರೊನಾದಿಂದಾ ತತ್ತರಿಸಿರುವ ಅಮೆರಿಕದಲ್ಲಿ ಈಗ ನರ್ಸ್‌ಗಳಿಗೆ ಎಲ್ಲಿಲ್ಲದ ಬೇಡಿಕೆ ಸೃಷ್ಟಿಯಾಗಿದೆ. ನರ್ಸ್‌ಗಳ ಕೊರತೆ ಹಿನ್ನಲೆಯಲ್ಲಿ ಸಂಚಾರಿ ನರ್ಸ್‌ಗಳಿಗೆ ಬೇಡಿಕೆ ಹೆಚ್ಚಿದ್ದು ಪ್ರಸ್ತುತ ಸಂಚಾರಿ ನರ್ಸ್‌ಗಳಿಗೆ ವಾರಕ್ಕೆ ಸುಮಾರು 3.75ಲಕ್ಷ ರೂ ವೇತನವನ್ನು ಪಡೆಯುತ್ತಿದ್ದಾರೆ.

ಕಳೆ ಹಲವು ದಿನಗಳಿಂದ ಅಮೆರಿಕದಾದ್ಯಂತ ಕೊರೊನಾ ಸೋಂಕಿತರು ಹೆಚ್ಚಾಗುತ್ತಿದ್ದು, ಈ ಹಿನ್ನಲೆ ಸಂಚಾರಿ ನರ್ಸ್‌ಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಇದರಿಂದ ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ನರ್ಸ್‌ಗಳು ಅಲ್ಲಿನ ಉದ್ಯೋಗವನ್ನು ತ್ಯೆಜಿಸಿ ಸಂಚಾರಿ ನರ್ಸ್‌ ಕೆಲಸಕ್ಕೆ ಹೋಗುತ್ತಿದ್ದಾರೆ. ಸಂಚಾರಿ ನರ್ಸ್‌ಗಳಿಗೆ ತಿಂಗಳಿಗೆ ಸುಮಾರು 15 ಲಕ್ಷ ಸಂಬಳವಿದೆ.

ಇಗಾಗಲೇ ಸಾಕಷ್ಟು ಆಸ್ಪತ್ರೆಗಳು ತಮ್ಮ ನರ್ಸ್‌ಗಳನ್ನು ಉಳಿಸಿಕೊಳ್ಳಲು ಸಾಕಷ್ಟು ಸಾಹಸ ಪಡುತ್ತಿದ್ದು ಜೊತಗೆ ಅನಿವಾರ್ಯವಾಗಿ ಹೆಚ್ಚಿನ ವೇತನವನ್ನು ಕೂಡ ಕೊಡಲು ಮುಂದಾಗಿದೆ.

ಸಂಚಾರಿ ನರ್ಸ್‌ಗೆ  ಯಾಕಿಷ್ಟು ಬೇಡಿಕೆ : ಏಜೆನ್ಸಿಗಳು ನರ್ಸ್ಗಳನ್ನು ಸಂಚಾರಿ ನರ್ಸ್‌ ಹುದ್ದೆಗೆ ನೇಮಿಸಿಕೊಂಡು ಅಗತ್ಯ ಇರುವ ಆಸ್ಪತ್ರೆಗಳು ಅಥವಾ ಸ್ಥಳಗಳಿಗೆ ಕೆಲಸಕ್ಕೆ ಹೆಚ್ಚಿನ ಸಂಬಳ ನೀಡಿ ನಿಯೋಜಿಸುತ್ತವೆ. ಈ ನರ್ಸ್‌ಗಳು ಒಂದೇ ಆಸ್ಪತ್ರೆಯಲ್ಲಿ ಕೆಲಸಕ್ಕಿರುವುದಿಲ್ಲ. ಅಲ್ಪಾವಧಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತ, ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ನೌಕರಿ ಬದಲಿಸುತ್ತಿರುತ್ತಾರೆ. ಆದರೆ ಇವರಿಗೆ ಶಾಶ್ವತ ಉದ್ಯೋಗ ವಿರುವುದಿಲ್ಲ. ಈ ಪ್ರಕ್ರಿಯೆಯಲ್ಲಿ ಏಜೆನ್ಸಿಗಳು ಅಗತ್ಯಕ್ಕೆ ತಕ್ಕಂತೆ ಉದ್ಯೋಗಿಗಳನ್ನು ನೇಮಿಸಿಕೊಳ್ಳಲಾಗುತ್ತದೆ.

Exit mobile version