ಕಳೆದ 24 ಗಂಟೆಗಳಲ್ಲಿ 2.5 ಲಕ್ಷ ಹೊಸ ಪ್ರಕರಣ ದಾಖಲು

ನವದೆಹಲಿ, ಮೇ. 26: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 2,08,921 ಹೊಸ ಕೊವಿಡ್ -19 ಪ್ರಕರಣಗಳು ಮತ್ತು 4,157 ಸಾವು ವರದಿ ಆಗಿದೆ. ದೇಶದ ಒಟ್ಟಾರೆ ಪ್ರಕರಣಗಳ ಸಂಖ್ಯೆ 2,71,57,795 ಕ್ಕೆ ಏರಿದ್ದು, ಸಾವಿನ ಸಂಖ್ಯೆ ಪ್ರಸ್ತುತ 3,11,388 ರಷ್ಟಿದೆ. ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ ಇತ್ತೀಚಿನ ಮಾಹಿತಿಯ ಪ್ರಕಾರ ದೇಶದ ಸಕ್ರಿಯ ಪ್ರಕರಣಗಳು 24.95 ಲಕ್ಷಕ್ಕೆ ಇಳಿದಿದೆ. 2,95 ಲಕ್ಷಕ್ಕೂ ಹೆಚ್ಚು ರೋಗಿಗಳು ಚೇತರಿಸಿಕೊಂಡಿದ್ದಾರೆ. ಚೇತರಿಕೆ ದರ ಶೇ 89.66 ಕ್ಕೆ ಏರಿದೆ.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಪ್ರಕಾರ ಮೇ 25ರವರೆಗೆ 33,48,11,496 ಮಾದರಿಗಳನ್ನು ಪರೀಕ್ಷಿಸಲಾಗಿದೆ. ನಿನ್ನೆ 22,17,320 ಮಾದರಿಗಳನ್ನು ಪರೀಕ್ಷಿಸಲಾಗಿದೆ.

Exit mobile version