ಕಳೆದ ೨೪ಗಂಟೆಯಲ್ಲಿ 1.73 ಲಕ್ಷ ಹೊಸ ಕೇಸ್ ದಾಖಲು: 3,617 ಮಂದಿ ಸಾವು

ನವದೆಹಲಿ, ಮೇ. 29: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 1.73 ಲಕ್ಷ ಕೋವಿಡ್ ಹೊಸ ಪ್ರಕರಣಗಳು ದೃಢಪಟ್ಟಿದ್ದು, 3,617 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಕಳೆದ 45 ದಿನಗಳಲ್ಲಿ ಕಡಿಮೆ ಪ್ರಕರಣ ಶನಿವಾರ 24 ಗಂಟೆಗಳ ಅಂತರದಲ್ಲಿ ದಾಖಲಾಗಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 2,77,29,247ಕ್ಕೆ ಏರಿಕೆಯಾಗಿದ್ದು, ಸಾವಿನ ಸಂಖ್ಯೆ 3,22,512 ಮಂದಿ ಸಾವಿಗೀಡಾಗಿದ್ದಾರೆ.

ಇದುವರೆಗೆ 2,51,93,410 ಮಂದಿ ಗುಣಮುಖರಾಗಿದ್ದಾರೆ. ಸದ್ಯ ದೇಶದಲ್ಲಿ 22,28,724 ಸಕ್ರಿಯ ಪ್ರಕರಣಗಳಿವೆ. ದೇಶದಲ್ಲಿ ಇದುವರೆಗೆ 20,89,02,445 ಡೋಸ್‌ ಲಸಿಕೆಯನ್ನು ಹಾಕಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

Exit mobile version