ಪಾಕಿಸ್ತಾನದಲ್ಲಿ ಶಿಯಾ ಮುಸ್ಲಿಮರ ಬರ್ಭರ ಹತ್ಯೆ

ಕರಾಚಿ, ಜ. 04: ಇತ್ತೀಚೆಗೆ  ಪಾಕಿಸ್ತಾನದಲ್ಲಿ ನಡೆಯುವ ಕ್ರೌರ್ಯ ಹೆಚ್ಚಾಗಿದ್ದು ಧಾರ್ಮಿಕ ಅಲ್ಪಸಂಖ್ಯಾತರಾಗಿರುವ ‘ಶಿಯಾ ಹಜಾರಾ’ ವರ್ಗದ 11 ಮಂದಿಯನ್ನು ಅಪಹರಿಸಿ ಬಳಿಕ ಗುಂಡಿಕ್ಕಿ ಬರ್ಭರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.

ಬಲೂಚಿಸ್ತಾನದ ನೈರುತ್ಯ ಭಾಗದಲ್ಲಿ ಈ ಘಟನೆ ಜರುಗಿದೆ. ಶಸ್ತ್ರಧಾರಿ ದುಷ್ಕರ್ಮಿಗಳು ಮಾಛ್‌ ಕಲ್ಲಿದ್ದಲು ಗಣಿಗೆ ನುಗ್ಗಿ ಐವರನ್ನು ಅಪಹರಿಸಿ, ಉಳಿದ ಆರು ಮಂದಿಯನ್ನು ಸ್ಥಳದಲ್ಲಿಯೇ ಗುಂಡಿನ ಹತ್ಯೆಗೈದಿದ್ದಾರೆ.

ಬಹುಸಂಖ್ಯಾತ ಮುಸ್ಲಿಂ ಸಮುದಾಯ ಎನಿಸಿರುವ ‘ಸುನ್ನಿ’ ವರ್ಗ ಅಲ್ಪಸಂಖ್ಯಾತರ ಮೇಲೆ ಕ್ರೌರ್ಯ ಎಸಗುವ ಪ್ರಕರಣಗಳು ಪಾಕಿಸ್ತಾನದಲ್ಲಿ ಹೆಚ್ಚಾಗಿವೆ. ಇದನ್ನು ಪ್ರಧಾನಿ ಇಮ್ರಾನ್‌ ಖಾನ್‌ ತೀವ್ರವಾಗಿ ಖಂಡಿಸಿದ್ದಾರೆ. ಇದೊಂದು ಹೇಡಿತನದ ಮತ್ತು ಅಮಾನವೀಯ ಕೃತ್ಯ ಎಂದು ಅಸಮಾಧಾನ ಹೊರಹಾಕಿದ್ದಾರೆ. ಇದು ಲಷ್ಕರ್‌-ಇ-ಝಾಂಗ್ವಿ’ ಉಗ್ರ ಸಂಘಟನೆಯ ಕೃತ್ಯ ಇರಬಹುದು ಎಂದು ಶಂಕಿಸಲಾಗಿದ್ದು, ತನಿಖೆ ಮುಂದುವರಿದಿದೆ.

Exit mobile version