ದಲಿತರಲ್ಲಿ ಕೀಳರಿಮೆ ಹೋಗಬೇಕು, ಅದಕ್ಕಾಗಿಯೇ ನಾನು ಮುಖ್ಯಮಂತ್ರಿಯಾಗುತ್ತೇನೆ ಎಂದು ಬಹಿರಂಗವಾಗಿ ಹೇಳ್ತೇನೆ – ಪರಮೇಶ್ವರ್

ಬೆಂಗಳೂರು : ದಲಿತರಲ್ಲಿ ಕೀಳರಿಮೆ ಹೋಗಬೇಕು. ಅದಕ್ಕಾಗಿಯೇ ನಾನು ಮುಖ್ಯಮಂತ್ರಿಯಾಗುತ್ತೇನೆ ಎಂದು ಬಹಿರಂಗವಾಗಿ ಹೇಳುತ್ತೇನೆ. ನಾನೇಕೆ (Parmeshwar cm aspirant) ಮುಖ್ಯಮಂತ್ರಿ ಆಗಬಾರದು?

ಕೆ.ಹೆಚ್.ಮುನಿಯಪ್ಪ ಅವರೇಕೆ ಸಿಎಂ ಆಗಬಾರದು..? ಮುನಿಯಪ್ಪ ಅಥವಾ ಪರಮೇಶ್ವರ ಅಥವಾ ಮಹದೇವಪ್ಪ ಅದೇ ರೀತಿ ಈ ಹಿಂದಿನ ಹಿರಿಯ ನಾಯಕರಲ್ಲಿ ಬಸವಲಿಂಗಪ್ಪ

ಅಥವಾ ಎನ್ ರಾಚಯ್ಯ ಅಥವಾ ರಂಗನಾಥ್ ಅವರಿಗೆ ಮುಖ್ಯಮಂತ್ರಿ ಆಗುವ ಸಾಮರ್ಥ್ಯ ಇರಲಿಲ್ಲವೇ..? ಎಂದು ಪರಮೇಶ್ವರ (Parmeshwar cm aspirant) ಪ್ರಶ್ನಿಸಿದ್ದಾರೆ.

ಇದನ್ನು ಓದಿ: ಲಿವ್-ಇನ್ ಸಂಬಂಧವನ್ನು ಮದುವೆ ಎಂದು ಗುರುತಿಸಲು ಸಾಧ್ಯವಿಲ್ಲ : ಕೇರಳ ಹೈಕೋರ್ಟ್

ರಾಜ್ಯದ ರಾಜಕೀಯ ಇತಿಹಾಸದಲ್ಲಿ ಹಲವಾರು ದಲಿತ ನಾಯಕರು ಮುಖ್ಯಮಂತ್ರಿಯಾಗುವ ಎಲ್ಲಾ ಸಾಮರ್ಥ್ಯ ಹೊಂದಿದ್ದರೂ ಸಹ ಅವಕಾಶಗಳಿಂದ ವಂಚಿತರಾಗಿದ್ದಾರೆ.

ಹೀಗಾಗಿ ದಲಿತ ಸಮುದಾಯವು ಒಗ್ಗಟ್ಟಾಗಿರಬೇಕು. ದಲಿತರು ತಮ್ಮ ಹಕ್ಕಿಗಾಗಿ ದನಿ ಎತ್ತಬೇಕು ಹಾಗೂ ತಮ್ಮ ಮತವನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂದು ಗೃಹ ಸಚಿವ ಪರಮೇಶ್ವರ್ ಕರೆ ನೀಡಿದರು.

ಇನ್ನು ಜಿ. ಪರಮೇಶ್ವರ ಅವರು ಈ ಹಿಂದೆ ತಮ್ಮ ಮುಖ್ಯಮಂತ್ರಿ ಹುದ್ದೆಯ ಮಹತ್ವಾಕಾಂಕ್ಷೆಯನ್ನು ಅನೇಕ ಬಾರಿ ಬಹಿರಂಗವಾಗಿ ವ್ಯಕ್ತಪಡಿಸಿದ್ದರು. ಕಳೆದ ತಿಂಗಳು ಚುನಾವಣಾ ಫಲಿತಾಂಶದ

ನಂತರ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಿದ ನಂತರ ದಲಿತರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಒತ್ತಾಯಿಸಿದ್ದರು.

ಈ ಹಿಂದೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಮುಖ್ಯಸ್ಥರಾಗಿ ಎಂಟು ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ್ದರು ಜಿ ಪರಮೇಶ್ವರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದಾಗ 2013ರ ವಿಧಾನಸಭೆ ಚುನಾವಣೆಯಲ್ಲಿ

ಕೊರಟಗೆರೆಯಿಂದ ಸೋತಿದ್ದರು. ಆಗ ಅವರು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಾಗಿದ್ದರು, ಆದರೆ ಅವರು ಸೋತಿದ್ದರಿಂದ ಸಿದ್ದರಾಮಯ್ಯ ಸರ್ಕಾರದಲ್ಲಿ ಎಂಎಲ್ಸಿ ಆಗಿ ನಂತರ ಸಚಿವರಾದರು.

2013 ರಲ್ಲಿ ಪರಮೇಶ್ವರ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿತು, ಆದರೆ ಯಾರೂ ಅವರಿಗೆ ಕ್ರೆಡಿಟ್ ನೀಡಲಿಲ್ಲ. ನಾನು ಅದರ ಬಗ್ಗೆ ಮಾತನಾಡಲಿಲ್ಲ, ಅದಕ್ಕೆ ವ್ಯತಿರಿಕ್ತವಾಗಿ

ಇಂದು ಕೆಲವು ನಾಯಕರು ತಮ್ಮ ನಾಯಕತ್ವದಲ್ಲಿ 2023ರಲ್ಲಿ ಅಧಿಕಾರಕ್ಕೆ ಬಂದಿದ್ದಕ್ಕೆ ಕ್ರೆಡಿಟ್ ತೆಗೆದುಕೊಳ್ಳುತ್ತಾರೆ ಎಂದು ಅವರು ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಅವರ ಹೆಸರನ್ನು

ತೆಗೆದುಕೊಳ್ಳದೆ ಟೀಕಿಸಿದರು. 2018ರ ಚುನಾವಣೆಯಲ್ಲಿ ಕೆಲವು ಸಮುದಾಯಗಳನ್ನು ನಿರ್ಲಕ್ಷಿಸಿದ್ದಕ್ಕಾಗಿ ಕಾಂಗ್ರೆಸ್ ಸೋತಿತು ಎಂದು ಪರಮೇಶ್ವರ ಕಿಡಿಕಾರಿದರು.

Exit mobile version