ಆಸ್ತಿ ಘೋಷಿಸಿದ ನಟ ಪವನ್ ಕಲ್ಯಾಣ: ಇಷ್ಟೇನಾ ಎಂದ ಅಭಿಮಾನಿಗಳು!

Vijayawada: ತೆಲುಗಿನ ಖ್ಯಾತ ನಟ ಹಾಗೂ ಜನಸೇನಾ ಪಕ್ಷದ ಮುಖಂಡ ಪವನ್ ಕಲ್ಯಾಣ್ (Pavan Kalyan) ಅವರು ಸದ್ಯ ಆಂಧ್ರಪ್ರದೇಶ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದಾರೆ. ಇದಕ್ಕಾಗಿ ಅವರು ಚುನಾವಣಾ ಆಯೋಗಕ್ಕೆ ನಾಮಪತ್ರ ಸಲ್ಲಿಕೆ ಮಾಡಿದ್ದು, ಇದರಲ್ಲಿ ಅವರು ತಮ್ಮ ಆಸ್ತಿಯ ವಿವರಗಳನ್ನು ಘೋಷಿಸಿಕೊಂಡಿದ್ದಾರೆ. ಪವನ್ ಕಲ್ಯಾಣ ಆಸ್ತಿಯ ವಿವರಗಳ ಕುರಿತು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ನಡೆಯುತ್ತಿದ್ದು, ಸಿನಿಮಾಯೊಂದಕ್ಕೆ ನೂರಾರೂ ಕೋಟಿ ಸಂಭಾವನೆ ತೆಗೆದುಕೊಳ್ಳುವ ಸ್ಟಾರ್ ನಟನ ಆಸ್ತಿ (Assets) ಇಷ್ಟೇನಾ ಎಂಬ ಪ್ರಶ್ನೆಇದೀಗ ಅಭಿಮಾನಿಗಳಲ್ಲಿ ಮೂಡಿದೆ.

ಪವನ್ ಕಲ್ಯಾಣ ಅವರು ನೀಡಿರುವ ಮಾಹಿತಿಯ ಪ್ರಕಾರ, 2019ರಿಂದ 2024ರವರೆಗೆ ಅವರ ಸಾಲದಲ್ಲಿ ಏರಿಕೆ ಆಗಿದೆ. ಪವನ್ ಕಲ್ಯಾಣ ಅವರ ಒಟ್ಟು ಆಸ್ತಿ 136 ಕೋಟಿ ರೂಪಾಯಿ. ಇದರಲ್ಲಿ ಚರಾಸ್ಥಿ ಹಾಗೂ ಸ್ಥಿರಾಸ್ತಿಗಳು ಸೇರಿವೆ ಎಂದು ಮಾಹಿತಿ ನೀಡಿದ್ದಾರೆ. 2019ರಲ್ಲಿ ಅವರ ಆಸ್ತಿ 52.85 ಕೋಟಿ ರೂಪಾಯಿ ಇತ್ತು. ಈಗ ಅದು ದ್ವಿಗುಣವಾಗಿದೆ. ಅದೇ ರೀತಿ ಅವರ ಸಾಲದಲ್ಲೂ ಏರಿಕೆ ಆಗಿದ್ದು, 17.56 ಕೋಟಿ ರೂಪಾಯಿ ಸಾಲವನ್ನು ಪವನ್ ಕಲ್ಯಾಣ ಮಾಡಿದ್ದಾರೆ.

ಇನ್ನು 18 ಕೋಟಿ ರೂಪಾಯಿ ಮೌಲ್ಯದ ಕೃಷಿ ಭೂಮಿ, 52 ಕೋಟಿ ರೂಪಾಯಿ ಮೌಲ್ಯದ ಕೃಷಿಯೇತರ ಭೂಮಿ, 31 ಕೋಟಿ ರೂಪಾಯಿ ಮೌಲ್ಯದ ಬಿಲ್ಡಿಂಗ್ ಅನ್ನು ಹೊಂದಿದ್ದಾರೆ. ಅವರ ಪತ್ನಿ ಕೊನಿಡೆಲಾ ಅನ್ನಾ ಅವರು 2.95 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ಬ್ಯಾಂಕ್ನಲ್ಲಿ 16.48 ಕೋಟಿ ರೂಪಾಯಿ ಫಿಕ್ಸ್ ಡಿಫಾಸಿಟ್ (Fix Deposit) ಇದೆ. ಅವರ ಪತ್ನಿ ಖಾತೆಯಲ್ಲಿ 86 ಲಕ್ಷ ರೂಪಾಯಿ ಇದೆ.

ಆಂಧ್ರಪ್ರದೇಶದ (Andrapradesh) ಕಾಕಿನಾಡು ಜಿಲ್ಲೆಯ ಪೀಟಾಪುರಮ್ ವಿಧಾನಸಭಾ ಕ್ಷೇತ್ರದಿಂದ ಪವನ್ ಕಲ್ಯಾಣ್ ಸ್ಪರ್ಧೆ ಮಾಡುತ್ತಿದ್ದು, ಜನಸೇನಾ ಪಕ್ಷವನ್ನು ಸ್ಥಾಪಿಸಿ, ರಾಜಕೀಯಕ್ಕೆ ಬರುವ ಮೊದಲು ಅವರ ಮೇಲೆ ಯಾವುದೇ ಕ್ರಿಮಿನಲ್ ಪ್ರಕರಣಗಳು ಇರಲಿಲ್ಲ. ಆದರೆ ರಾಜಕೀಯಕ್ಕೆ ಬಂದ ನಂತರ ಅವರ ವಿರುದ್ಧ 8 ಪ್ರಕರಣಗಳು ದಾಖಲಾಗಿವೆ. ಪವನ್ ಕಲ್ಯಾಣ್ ಅವರು 2019ರಲ್ಲಿ ವಿಧಾನಸಭಾ ಚುನಾವಣೆಗೆ ಸ್ಪರ್ಧೆ ಮಾಡಿದ್ದರು. ಆದರೆ, ಗೆಲುವು ಸಿಕ್ಕಿರಲಿಲ್ಲ.

Exit mobile version