ತಮ್ಮನ್ನು ಟ್ರೋಲ್ ಮಾಡಿದವರಿಗೆ ಚಪ್ಪಲಿ ತೋರಿಸಿ ಎಚ್ಚರಿಕೆ ಕೊಟ್ಟ ನಟ ಪವನ್ ಕಲ್ಯಾಣ್

Troll

Andra Pradesh : ಸಾಮಾಜಿಕ ಜಾಲತಾಣದಲ್ಲಿ ತೆಲುಗು ಚಿತ್ರರಂಗದ ಸ್ಟಾರ್ ನಟ ಪವನ್ ಕಲ್ಯಾಣ್ (Pawan Kalyan Slams Trollers) ಅವರು ವೇದಿಕೆಯ ಮೇಲೆ ಮಾತನಾಡುವ ವೇಳೆ ಕೈಯಲ್ಲಿ ಚಪ್ಪಲ್ಲಿ ಹಿಡಿದು ಮಾತನಾಡಿರುವ ದೃಶ್ಯ ಭಾರಿ ವೈರಲ್ ಆಗಿದೆ.

ನಟನೆ ಜೊತೆ ಜೊತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವ ನಟ ಪವನ್ ಕಲ್ಯಾಣ್, ಜನಸೇನಾ ಮುಖ್ಯಸ್ಥರಾಗಿ ತಮ್ಮ ಸಾಮಾಜಿಕ ಕೆಲಸಗಳನ್ನು ಮಾಡುತ್ತಿದ್ದಾರೆ.

ಆದ್ರೆ, ಇದನ್ನೇ ಕೆಲವರು ಟೀಕೆಗೆ ಒಳಪಡಿಸಿದ್ದು, ಅವರನ್ನು ಹಿಗ್ಗಾಮುಗ್ಗಾ ಟ್ರೋಲ್ (Troll) ಮಾಡಿ ಅಪಹಾಸ್ಯ ಮಾಡಿದ್ದಾರೆ.

ಈ ವಿಚಾರದ ಬಗ್ಗೆ ವೇದಿಕೆ ಮೇಲೆ ಮಾತನಾಡಿದ ಪವನ್ ಕಲ್ಯಾಣ್, ತನ್ನನ್ನು “ಪ್ಯಾಕೇಜ್ ಸ್ಟಾರ್” ಎಂದು ಹೇಳಿ ಅಪಹಾಸ್ಯ ಮಾಡುತ್ತಿರುವವರ ವಿರುದ್ಧ ರೊಚ್ಚಿಗೆದ್ದಿದ್ದಾರೆ.

ಆಂಧ್ರಪ್ರದೇಶದಲ್ಲಿ ತೆಲುಗು ದೇಶಂ ಪಕ್ಷದೊಂದಿಗೆ ಕೈಜೋಡಿಸಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿ ಜಗನ್ ರೆಡ್ಡಿ (Jagan Reddy) ನೇತೃತ್ವದ ವೈಎಸ್‌ಆರ್‌ಸಿಪಿ ಕಲ್ಯಾಣ್ ಅವರನ್ನು ನಿರಂತರವಾಗಿ ಟ್ರೋಲ್ ಮಾಡುತ್ತಿದೆ.

ಇದನ್ನೂ ಓದಿ : https://vijayatimes.com/rahul-gandhi-strikes-pm/

ಗುಂಟೂರಿನ ಮಂಗಳಗಿರಿಯಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ನಟ ಪವನ್ ಕಲ್ಯಾಣ್, “ನನ್ನನ್ನು ‘ಪ್ಯಾಕೇಜ್ ಸ್ಟಾರ್’ ಎಂದು ಕರೆಯುವವರನ್ನು ಅವರ ಎಡ ಮತ್ತು ಬಲಕ್ಕೆ ಚಪ್ಪಲಿಯಿಂದ ಹೊಡೆಯುತ್ತೇನೆ” ಎಂದು ಚಪ್ಪಲಿ ತೋರಿಸಿ ಹೇಳಿದ್ದಾರೆ.

ಇದೇ ರೀತಿ ನೀವುಗಳು ನನ್ನನ್ನು ಮತ್ತೊಮ್ಮೆ ‘ಪ್ಯಾಕೇಜ್ ಸ್ಟಾರ್’ ಎಂದು ಕರೆದರೆ, ನಾನು ಈ ಚಪ್ಪಲಿಯಿಂದ ನಿಮಗೆ ಅರ್ಥ ಮಾಡಿಸುತ್ತೇನೆ ಎಂದು ಕೆಲ ನಿಮಿಷ ಚಪ್ಪಲಿ ಹಿಡಿದು, ತಾಳ್ಮೆಯನ್ನು ಮರೆತು ಮಾತನಾಡಿದ್ದಾರೆ.

ವೇದಿಕೆಯಲ್ಲಿ ನೆರೆದಿದ್ದ ಜನಸೇನಾ ಕಾರ್ಯಕರ್ತರು, ಮುಖಂಡರು ಮತ್ತು ಬೆಂಬಲಿಗರು ನಟ ಪವನ್ ಕಲ್ಯಾಣ್ ಅವರಿಗೆ ಜೈಕಾರ ಕೂಗುವ ಮೂಲಕ ಹುರಿದುಂಬಿಸುವ ಪ್ರಯತ್ನ ಮಾಡಿದ್ದಾರೆ.

ಸ್ಥಳೀಯ ವಿಮಾನ ನಿಲ್ದಾಣದಲ್ಲಿ ಸಚಿವರು, ನಾಗರಿಕರು ಮತ್ತು ಪೊಲೀಸ್ ಅಧಿಕಾರಿಗಳ ಮೇಲೆ ನಟ ಪವನ್ ಕಲ್ಯಾಣ್ ಬೆಂಬಲಿಗರು ಹಲ್ಲೆ ನಡೆಸಿದ ಬೆನ್ನಲ್ಲೇ,

ಅವರಿಗೆ ವಿಶಾಖಪಟ್ಟಣಂ ಪೊಲೀಸರು ನೋಟಿಸ್ ನೀಡಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ (PTI Report) ಮಾಡಿದೆ.

ಬಿಗುವಿನ ವಾತಾವರಣ ಸೃಷ್ಟಿಯಾದ ಹಿನ್ನೆಲೆ ಪವನ್ ಕಲ್ಯಾಣ್ ಅವರು ತಮ್ಮ ಹೋಟೆಲ್ ರೂಮಿಂದ ಹೊರಗೆ ಬರಲು ಆಗದಂತೆ ಮತ್ತು,

ಜನರ ಕುಂದು ಕೊರತೆಗಳನ್ನು ಆಲಿಸಬೇಕಿದ್ದ ನಿಗದಿತ ‘ಜನ ವಾಣಿ’ ಕಾರ್ಯಕ್ರಮವನ್ನು ಕೂಡ ನಡೆಸದಂತೆ ಅಡ್ಡಿಪಡಿಸಲಾಯಿತು.

https://youtu.be/j9JcNFBswz0 ಥೂ…..ಇದೂ ರಸ್ತೆನಾ? ಬೆಂಗಳೂರಿನ ಸುಂಕದಕಟ್ಟೆಯ ರಸ್ತೆ ದುಸ್ಥಿತಿ ನೋಡಿ.

ತಮ್ಮ ಹೋಟೆಲ್ ರೂಮಿನ ಕಿಟಕಿಯಿಂದ ರಸ್ತೆಯಲ್ಲಿ ಸಾಲುಗಟ್ಟಿ ನಿಂತ ಪಕ್ಷದ ಕಾರ್ಯಕರ್ತರು ಮತ್ತು ಜನರಿಗೆ ಕೈಬೀಸುತ್ತ ದೈರ್ಯ ಹೇಳಲು ಮಾತ್ರ ಸಾಧ್ಯವಾಯಿತು ಎಂದು ವರದಿಯಲ್ಲಿ ತಿಳಿಸಲಾಗಿದೆ.
Exit mobile version