ಪೇಟಿಎಂ ಬಳಕೆದಾರರಿಗೆ ಸಿಹಿ ಸುದ್ದಿ

ಬೆಂಗಳೂರು, ಜ. 08: ಪೇಟಿಎಂ ಮೂಲಕ ಗ್ರಾಹಕರಿಗೆ ಎರಡೇ ನಿಮಿಷಗಳಲ್ಲಿ ಇನ್ಸ್ಟಂಟ್ ಸಾಲ ಸೌಲಭ್ಯ ಒದಗಿಸುವುದಾಗಿ Paytm ಘೋಷಣೆ ಮಾಡಿದೆ. ಈ ಸೇವೆ ವರ್ಷದ 365 ದಿನ, 24×7 ಲಭಿಸಲಿದೆ. ಅದರಂತೆ, ನೀವು ಸರ್ಕಾರಿ ರಜೆ ದಿನಗಳಲ್ಲಿಯೂ ಸಾಲ ಪಡೆಯಬಹುದಾಗಿದೆ.

ಕೇವಲ ಎರಡು ನಿಮಿಷಗಳ ಒಳಗೆ ಸಾಲ ರೂಪದ ಹಣ ನಿಮ್ಮ ಖಾತೆ ಸೇರುತ್ತೆ. ಉದ್ಯೋಗಿಗಳು, ಸಣ್ಣ ಉದ್ದಿಮೆದಾರರು ಮತ್ತು ವೃತ್ತಿಪರರು ಸಾಲ ಪಡೆಯಲು ಅರ್ಹರು ಎಂದು ಪೇಟಿಎಂ ಹೇಳಿದೆ. ಇನ್ನು ನೀವು ಮನೆಯಲ್ಲೇ ಕೂತು, ಮೊಬೈಲ್ ಮೂಲಕ ಆನ್ಲೈನ್ನಲ್ಲೇ ಲೋನ್ ಫಾರ್ಮ್ ತುಂಬಬಹುದು. ಆದ್ರೆ, ಸಾಲ ಪಡೆಯಲು ನೀವು ಸೂಕ್ತ ದಾಖಲೆ ನೀಡುವುದು ಕಡ್ಡಾಯ.

18-36 ತಿಂಗಳ ಒಳಗಾಗಿ ಈ ಸಾಲವನ್ನು ಮರುಪಾವತಿ ಮಾಡಬೇಕು.. ಇನ್ನು ಅವಧಿಯನ್ನ ಆಧರಿಸಿ ಇಎಂಐ ನಿರ್ಧಾರವಾಗುತ್ತೆ. ಈ ಸೇವೆ ನೀಡಲು ಸಾಕಷ್ಟು ಬ್ಯಾಂಕ್ ಹಾಗೂ ಬ್ಯಾಂಕೇತರ ಹಣಕಾಸು ಸಂಸ್ಥೆಗಳು Paytm ಜತೆ ಒಪ್ಪಂದ ಮಾಡಿಕೊಂಡಿವೆ.  ಮಾರ್ಚ್ ವೇಳೆಗೆ 10 ಲಕ್ಷ ಜನರಿಗೆ ಸಾಲ ನೀಡುವ ಗುರಿಯನ್ನು Paytm ಹೊಂದಿದೆ.

Exit mobile version