ಇಂದಿನಿಂದ 3 ದಿನ ಪೀಣ್ಯ ಫ್ಲೈ ಓವರ್ ಬಂದ್: ಜನವರಿ 19ರ ಬೆಳಗ್ಗೆ 11ಗಂಟೆ ತನಕ ನಿರ್ಬಂಧ

Bengaluru: ಬೆಂಗಳೂರು #Bengaluru ವಾಹನ ಸವಾರರಿಗೆ ಬಿಗ್ ಶಾಕ್ ಆಗಿದ್ದು, ಇಂದಿನಿಂದ ಪೀಣ್ಯ ಫ್ಲೈ ಓವರ್ (Peenya Flyover Closed) ಬಂದ್ ಆಗಲಿದೆ. ಇಂದು ರಾತ್ರಿ 11

ಗಂಟೆಯಿಂದ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದ್ದು, ಲೋಡ್ ಟೆಸ್ಟಿಂಗ್ ಹಿನ್ನೆಲೆಯಲ್ಲಿ ವಾಹನ (Peenya Flyover Closed) ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.

ಜನವರಿ(January) 16 ರ ರಾತ್ರಿ 11ಗಂಟೆಯಿಂದ ಜನವರಿ 21ರ ಬೆಳಗ್ಗೆ 11 ಗಂಟೆ ತನಕ ಫ್ಲೈಓವರ್ ಬಂದ್ ಆಗಿರಲಿದ್ದು, ಪರ್ಯಾಯ ಮಾರ್ಗಗಳು ಹಾಗೂ ಸರ್ವೀಸ್ ರಸ್ತೆ ಬಳಸುವಂತೆ ಸಂಚಾರ

ಪೊಲೀಸರು ವಾಹನ ಸವಾರರಿಗೆ ಮನವಿ ಮಾಡಿದ್ದು, ರಾಷ್ಟ್ರೀಯ ಹೆದ್ದಾರಿ-4 ರ ಪೀಣ್ಯ ಎಲಿವೇಟೆಡ್ ಹೈವೇಗೆ (Elevated Highway) ಅಳವಡಿಸಿದ್ದ ವಯಾಡಕ್ಟ್ ದುರಸ್ತಿ ಕಾರ್ಯ ಇದೆ. ಹಾಗಾಗಿ

ವಯಾಡಕ್ಟ್ ನ ಸಮಗ್ರತೆ ಪರಿಶೀಲನೆ ಮತ್ತು ಲೋಡ್ ಟೆಸ್ಟಿಂಗ್ (Load Testing) ಹಿನ್ನೆಲೆಯಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.

ಪರ್ಯಾಯ ಮಾರ್ಗಗಳು :
ನೆಲಮಂಗಲ (Nelamangala) ಕಡೆಯಿಂದ ಬೆಂಗಳೂರು ನಗರಕ್ಕೆ ಫ್ಲೈ ಓವರ್ ರಸ್ತೆಯ ಮೂಲಕ ಹಾಡು ಹೋಗುವ ವಾಹನಗಳು ಕೆನ್ನಮೆಟಲ್ ವಿಡಿಯಾ ಹತ್ತಿರ ಫ್ಲೈಓವರ್ ಪಕ್ಕದ ಎನ್ ಹೆಚ್-4, ಸರ್ವಿಸ್

ರಸ್ತೆಯ ಮೂಲಕ 8ನೇ ಮೈಲಿ, ದಾಸರಹಳ್ಳಿ, ಜಾಲಹಳ್ಳಿ ಕ್ರಾಸ್ (Jalahalli Cross), ಪೀಣ್ಯ ಪೊಲೀಸ್ ಠಾಣೆ ಜಂಕ್ಷನ್, ಎಸ್​ಆರ್​ಎಸ್ ಜಂಕ್ಷನ್ ಮೂಲಕ ಗೊರಗುಂಟೆಪಾಳ್ಯ ತಲುಪಬಹುದು.

ಸಿಎಂಟಿಐ ಜಂಕ್ಷನ್​ನಿಂದ (CMTI Junction) ನೆಲಮಂಗಲ ಕಡೆಗೆ ಫ್ಲೈ ಓವರ್ ರಸ್ತೆಯಲ್ಲಿ ಸಾಗುವ ವಾಹನಗಳು ಪಾರ್ಲೆ-ಜಿ ಟೋಲ್ ತಲುಪಲು ಫ್ಲೈ ಓವರ್ ಪಕ್ಕದ ಎನ್ ಹೆಚ್-4 ಮತ್ತು ಸರ್ವೀಸ್

ರಸ್ತೆಯಲ್ಲಿ ಎಸ್​ಆರ್​ಎಸ್ ಜಂಕ್ಷನ್, ಪೀಣ್ಯ ಪೊಲೀಸ್ ಠಾಣೆ ಜಂಕ್ಷನ್-ಜಾಲಹಳ್ಳಿ ಕ್ರಾಸ್, ದಾಸರಹಳ್ಳಿ- 8ನೇ ಮೈಲಿ ಮುಖಾಂತರ ಸಂಚರಿಸಲು ಅನುವು ಮಾಡಿಕೊಡಲಾಗಿದೆ.

ಫ್ಲೈಓವರ್ ಯಾಕೆ ಬಂದ್?
ತುಮಕೂರು (Tumakur) ರಸ್ತೆಯ ಗೊರಗುಂಟೆಪಾಳ್ಯದಿಂದ ನಾಗಸಂದ್ರದ ಪಾರ್ಲೆ ಜಿ ಫ್ಯಾಕ್ಟರಿವರೆಗೂ 5ಕಿಮೀ ಉದ್ದವಿರುವ ಪೀಣ್ಯ ಮೇಲ್ಸೇತುವೆಯ ವಯಾಡಕ್ಟ್​​ನ ಸಮಗ್ರತೆ ಹಾಗೂ ಲೋಡ್

ಟೆಸ್ಟಿಂಗ್ ಪರಿಶೀಲನೆ ಸಂಚಾರಕ್ಕೆ ನಿರ್ಬಂಧ ಹೇರಲು ಮುಖ್ಯ ಕಾರಣವಾಗಿದೆ.

ಭಾರಿ ವಾಹನಗಳ ಸಂಚಾರಕ್ಕೆ ಅಂದರೆ ಲಾರಿ, ಬಸ್ ಸೇರಿದಂತೆ ಪೀಣ್ಯ ಫ್ಲೈಓವರ್​​ನಲ್ಲಿ ಸಂಚಾರಕ್ಕೆ ನಿರ್ಬಂಧ ಹೇರಿ ಸುಮಾರು ಒಂದೂವರೆ ವರ್ಷವಾಗಿದೆ. ಮೇಲ್ಸೇತುವೆಯಲ್ಲಿ ತಾಂತ್ರಿಕ ದೋಷವಿದ್ದು,

ಘನ ವಾಹನಗಳ ಸಂಚಾರಕ್ಕೆ ಯೋಗ್ಯವಲ್ಲ ಎಂದು ಐಐಎಸ್​ಸಿ (IISC) ಎರಡು ವರ್ಷಗಳ ಹಿಂದೆ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ನಂತರ ಭಾರಿ ವಾಹನಗಳ ಸಂಚಾರ ನಿರ್ಬಂಧಿಸಲಾಗಿತ್ತು.

ಇದನ್ನು ಓದಿ: ರಾಮಮಂದಿರ ನನಗೆ ಆಧ್ಯಾತ್ಮಿಕತೆಯೇ ಹೊರತು, ರಾಜಕೀಯವಲ್ಲ – ರಜನಿಕಾಂತ್

ಭವ್ಯಶ್ರೀ ಆರ್ ಜೆ

Exit mobile version