ನ್ಯಾಯಾಲಯದ ಆದೇಶ ಪಾಲಿಸದ ರಾಜ್ಯ ಸರ್ಕಾರಕ್ಕೆ ₹5 ಲಕ್ಷ ದಂಡ: ಕರ್ನಾಟಕ ಹೈಕೋರ್ಟ್

Bengaluru: ಬುಧವಾರ(ಜ.17) ಕರ್ನಾಟಕ ಹೈಕೋರ್ಟ್ @KarnatakaHighcourt ನ್ಯಾಯಾಲಯದ (Penalty for Kar Govt-HC) ಆದೇಶ ಪಾಲಿಸದ ರಾಜ್ಯ ಸರ್ಕಾರವನ್ನು ತರಾಟೆಗೆ

ತೆಗೆದುಕೊಂಡಿದ್ದು, ಬೆಂಗಳೂರಿನ ವಿ.ಎ ನಾಗಮಣಿ (V.A Nagamani) ಎಂಬುವರು ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಕ್ಕೆ ಸಂಬಂಧಪಟ್ಟಂತೆ 5 ಲಕ್ಷ ರೂಪಾಯಿ ದಂಡವನ್ನು ವಿಧಿಸಿದೆ.

ನಿವೃತ್ತ ಗ್ರಂಥಪಾಲಕಿಯೊಬ್ಬರ ವೇತನ ಮತ್ತು ಹಿಂಬಾಕಿ ಪಾವತಿ ವಿಚಾರದಲ್ಲಿ ಬುಧವಾರ ತರಾಟೆಗೆ ತೆಗೆದುಕೊಂಡಿದ್ದು, 5 ಲಕ್ಷ ರೂಪಾಯಿ ದಂಡ ವಿಧಿಸಿದೆ. ಅರ್ಜಿಯ ವಿಚಾರಣೆಯ ವೇಳೆ ಮುಖ್ಯ

ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ (Prasanna Balachandra Varale) ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್.‌ ದೀಕ್ಷಿತ್‌ ಅವರ ನೇತೃತ್ವದ ವಿಭಾಗೀಯ ಪೀಠವು ಸರ್ಕಾರದ ವಿರುದ್ದ

ಕೆಂಡಾ (Penalty for Kar Govt-HC) ಮಂಡಲವಾಗಿದೆ.

ನ್ಯಾಯಮೂರ್ತಿಗಳು ಮೌಖಿಕವಾಗಿ ಆಕ್ರೋಶ ವ್ಯಕ್ತಪಡಿಸಿದ್ದು, ಸರ್ಕಾರಕ್ಕೆ ಮೃದು ಭಾಷೆಯ ಆದೇಶ ಅರ್ಥವಾಗುವುದಿಲ್ಲ. ನಾವು ಪ್ರತಿಯೊಂದು ಆದೇಶವನ್ನು ಆಸಿಡ್‌ನಲ್ಲಿ (Acid) ಅದ್ದಿದ ಬರಹದಲ್ಲಿ

ಬರೆಯಬೇಕಿದೆ ಎಂದು ತಿಳಿಸಿದೆ.

ಹೈಕೋರ್ಟ್‌ಗೆ ರಾಜ್ಯ ಸರ್ಕಾರದ ಪರ ಮೆಮೋ ಸಲ್ಲಿಸಿದ್ದ ವಕೀಲರು, ನ್ಯಾಯಾಲಯದ (Court) ಆದೇಶ ಪಾಲಿಸಲು ಆರು ವಾರಗಳ ಕಾಲವಕಾಶ ನೀಡುವಂತೆ ಕೋರಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ

ನ್ಯಾಯಾಲಯ, ಸಾಮಾನ್ಯವಾಗಿ ಸರ್ಕಾರ ಕೋರಿದರೆ ನ್ಯಾಯಾಲಯವು ಆರು ವಾರಗಳ ಸಮಯ ನೀಡುತ್ತದೆ. ಆದರೆ ಈ ಪ್ರಕರಣದಲ್ಲಿ ರಾಜ್ಯ ಸರ್ಕಾರಕ್ಕೆ ಸಮಯ ನೀಡಲು ಸಾಧ್ಯವಿಲ್ಲ ಎಂದಿದೆ.

ಏನಿದು ಪ್ರಕರಣ:
ಬೆಂಗಳೂರಿನ (Bengaluru) ಕೋನೇನ ಅಗ್ರಹಾರದಲ್ಲಿರುವ ಸರ್.ಎಂ.ವಿಶ್ವೇಶ್ವರಯ್ಯ ಪ್ರೌಢಶಾಲೆಯಲ್ಲಿ (Sir M Vishweshwaraiah) ದ್ವಿತೀಯ ದರ್ಜೆ ಸಹಾಯಕಿಯಾಗಿ ನಿವೃತ್ತಿ ಹೊಂದಿರುವ

ಗ್ರಂಥಪಾಲಕಿ ವಿ.ಎ.ನಾಗಮಣಿ ಯವರು ತಮಗೆ ಗ್ರಂಥಪಾಲಕರ ದರ್ಜೆಯ ವೇತನ‌ ಮಂಜೂರು ಮಾಡಲು 2014 ರಲ್ಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದರು.

ರಾಜ್ಯದಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿದ್ದ 250ಕ್ಕೂ ಹೆಚ್ಚು ನೌಕರರು ಗ್ರಂಥಪಾಲಕರ ಹುದ್ದೆಯ ವೇತನ ಶ್ರೇಣಿ ಹೊಂದಿದ್ದು, ನನಗೂ ಇದೇ ವೇತನ ಶ್ರೇಣಿಯನ್ನು ಅನ್ವಯಿಸಲು ಆದೇಶಿಸಬೇಕು

ಎಂದು ಮನವಿ ಮಾಡಿದ್ದರು.

ಅಕ್ಟೋಬರ್‌ (October) 2021ರಲ್ಲಿ ಹೈಕೋರ್ಟ್, ನಾಗಮಣಿ ಅವರ ರಿಟ್ ಅರ್ಜಿಯನ್ನು ಮಾನ್ಯ ಮಾಡಿದ್ದು, ಅವರ ವೇತನ ತಾರತಮ್ಯ ಸರಿಪಡಿಸುವಂತೆ ಸರ್ಕಾರಕ್ಕೆ ಆದೇಶ ಹೊರಡಿಸಿ ಎರಡು

ತಿಂಗಳ ಗಡುವು ನೀಡಿತ್ತು. ಆದರೆ ರಾಜ್ಯ ಸರ್ಕಾರ ಹೈಕೋರ್ಟ್‌ ಆದೇಶ ಪಾಲಿಸಿರಲಿಲ್ಲ. ಹಾಗಾಗಿ ನಾಗಮಣಿಯವರು ರಾಜ್ಯ ಸರ್ಕಾರದ ವಿರುದ್ದ ಸಿವಿಲ್ ನ್ಯಾಯಾಂಗ ‌ನಿಂದನೆ ಮೊಕದ್ದಮೆ ದಾಖಲಿಸಿದ್ದರು.

ಇದನ್ನು ಓದಿ: ಗುಂಡಿನ ದಾಳಿ: ಅಮೇರಿಕಾದ ಚಿಕಾಗೋದಲ್ಲಿ 2 ಮನೆಗಳ ಮೇಲೆ ಗುಂಡಿನ ದಾಳಿ, 8 ಮಂದಿ ಸಾವು

Exit mobile version