“ನನ್ನ ನೋವಿಗಿಂತ ಜನರ ನೋವು ದೊಡ್ಡದು “ದೀದಿ ಮಮತಾ ಬ್ಯಾನರ್ಜಿ

ಹೌರಾ, ಮಾ. 15: ವೀಲ್ ಚೇರ್‌ನಲ್ಲಿ ಕುಳಿತು ಪಶ್ಚಿಮ ಬಂಗಾಳದ ಸಿ ಎಮ ಮಮತಾ ಬ್ಯಾನರ್ಜಿಯವರು ಪ್ರಚಾರ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು  ಈ ಗಾಯದಿಂದ ನಾನು ಮನೆಗೆ ಸೀಮಿತವಾಗುತ್ತೇನೆ ಎಂದು ಕೆಲವರು ಭಾವಿಸಿದ್ದರು. ಆದ್ರೆ, ಜನರ ನೋವು ನನಗಿಂತ ದೊಡ್ಡದಿದೆ. ಆದ್ದರಿಂದ ನಾನು ಓಡಾಡಲು ನಿರ್ಧರಿಸಿದ್ದೇನೆ ಎಂದು ಪುರುಲಿಯಾದಲ್ಲಿ ನಡೆದ ಪ್ರಚಾರದ ವೇಳೆ ಹೇಳಿದ್ದಾರೆ.

ನಮ್ಮ ಸರ್ಕಾರ ಅತ್ಯುತ್ತಮ ಯೋಜನೆಗಳನ್ನ ಜಾರಿಗೆ ತಂದಿದೆ.  ಪಶ್ಚಿಮ ಬಂಗಾಳದಲ್ಲಿ ನಾವು ನಡೆಸುತ್ತಿರುವ ಕಲ್ಯಾಣ ಯೋಜನೆಗಳ ಮೊತ್ತ, ಜಗತ್ತಿನ ಯಾವುದೇ ಸರ್ಕಾರ ನಮಗೆ ಸರಿಸಾಟಿಯಲ್ಲ ಎಂದು ಸಿಎಂ ಮಮತಾ ಬ್ಯಾನರ್ಜಿ ಹೇಳಿದರು.

ಹೌರಾದ ಡೊಮ್ಜೂರ್ ಪ್ರದೇಶದಲ್ಲಿ ಭಾನುವಾರ ತಡರಾತ್ರಿ ಭಾರತೀಯ ಜನತಾ ಪಾರ್ಟಿ ಮತ್ತು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದ್ದು, 15 ಮಂದಿ ಗಾಯಗೊಂಡಿದ್ದಾರೆ. ದೊಮ್ಮೂರ್ʼನ ಆನಂದ ನಗರ ಪ್ರದೇಶದಲ್ಲಿ ಬಿಜೆಪಿ ಬೆಂಬಲಿಗರ ಮೇಲೆ ಟಿಎಂಸಿ ಕಾರ್ಯಕರ್ತರು ಹರಿತವಾದ ಆಯುಧಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕೆಲವು ಮನೆಗಳ ಮೇಲೂ ದುಷ್ಕರ್ಮಿಗಳು ನುಗ್ಗಿ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರದೇಶದಲ್ಲಿ ಭಾರಿ ಪೊಲೀಸ್ ಪಡೆ ಮತ್ತು ಆರ್ ಎಎಫ್ ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Exit mobile version