ಇಂದೂ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ

ನವದೆಹಲಿ,ಫೆ.19: ಪೆಟ್ರೋಲ್ ಮತ್ತು ಡೀಸೆಲ್ ದರ ಸತತ 11ನೇ ದಿನಕ್ಕೆ ಏರಿಕೆ ಯಾಗಿದ್ದು, ಜಾಗತಿಕ ತೈಲ ಉತ್ಪಾದಕರಿಗೆ ಉತ್ಪಾದನಾ ದರ ಕಡಿತ ವನ್ನು ಕಡಿಮೆ ಮಾಡುವಂತೆ ಭಾರತ ಮನವಿ ಮಾಡಿದ್ರೂ ಪೆಟ್ರೋಲ್ ದರ 31 ಪೈಸೆ ಹೆಚ್ಚಳ ವಾಗಿದೆ. ಡೀಸೆಲ್ ದರ 33 ಪೈಸೆ ಹೆಚ್ಚಳವಾಗಿದೆ ಎಂದು ಸರ್ಕಾರಿ ಸ್ವಾಮ್ಯದ ಇಂಧನ ಮಾರಾಟಗಾರರು ತಿಳಿಸಿದ್ದಾರೆ. ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ ₹90.19 ಕ್ಕೆಡೀಸೆಲ್ ದರ ಲೀಟರ್ ಗೆ ₹80.60ಕ್ಕೆ ಏರಿಕೆಯಾಗಿದೆ.

ಫೆಬ್ರವರಿ 17ರಂದು ರಾಜಸ್ಥಾನದ ಶ್ರೀ ಗಂಗಾನಗರದಲ್ಲಿ ಪೆಟ್ರೋಲ್ ಬೆಲೆ 34 ಪೈಸೆ ಏರಿಕೆ ಕಂಡು 100.13 ರೂಪಾಯಿಗಳಿಗೆ ತಲುಪಿದೆ.ಡೀಸೆಲ್ ಬೆಲೆ 27 ಪೈಸೆ ಏರಿಕೆಯಾಗಿ 92.13 ರೂಪಾಯಿಗಳಿಗೆ ತಲುಪಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ ವೆಬ್ ಸೈಟ್ ನಲ್ಲಿ ಲಭ್ಯಇರುವ ಮಾಹಿತಿಯಲ್ಲಿ ತಿಳಿಸಿದೆ. ಮಧ್ಯಪ್ರದೇಶದ ಅನೂಪ್ ಪುರದಲ್ಲಿ ಗುರುವಾರ ಪೆಟ್ರೋಲ್ ಬೆಲೆ 100 ರೂ. ದಾಟಿದೆ ಪ್ರತಿ ಲೀಟರ್ ಗೆ 100.25 ರೂ. ಡೀಸೆಲ್ ದರ ಕೂಡಾ ಪ್ರತಿ ಲೀಟರ್ ಗೆ 90.35 ರೂ ಆಗಿದೆ. ಇಂಧನ ದರ ಏರಿಕೆ ಯನ್ನು ಕಾಂಗ್ರೆಸ್ ಪಕ್ಷ ಹಾಗೂ ಪ್ರತಿಪಕ್ಷಗಳು ಟೀಕಿಸಿವೆ. ಜನ ಸಾಮಾನ್ಯರ ಮೇಲಿನ ಹೊರೆಯನ್ನು ತಗ್ಗಿಸಲು ಈ ಕೂಡಲೇ ತೆರಿಗೆ ಗಳನ್ನು ಕಡಿತಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.

Exit mobile version