ಆಗಸ್ಟ್ 23 ರಿಂದ 9 ರಿಂದ 12ನೇ ತರಗತಿವರೆಗಿನ ಭೌತಿಕ ತರಗತಿಗಳು ಪ್ರಾರಂಭ

ಬೆಂಗಳೂರು ಆ 16 : ಕೊರೊನಾದಿಂದಾಗಿ ಕಳೆದ ಒಂದೂವರೆ ವರ್ಷದಿಂದ ಸ್ಥಗಿತಗೊಂಡಿದ್ದ ಭೌತಿಕ ತರಗತಿಗಳು ಇದೀಗ ಆರಂಭಕ್ಕೆ ಸಜ್ಜುಗೊಂಡಿದ್ದು ಇದಕ್ಕೆ ಹಲವು ಕಠಿಣ ಕ್ರಮಗಳೊಂದಿಗೆ ಆ 23 ರಿಂದ 9 ರಿಂದ 12 ರವರೆಗಿನ ಭೌತಿಕ ತರಗತಿಗಳನ್ನು ನಡೆಸಲು ಸರ್ಕಾರವು ಮುಂದಾಗಿದೆ. ಈ ಹಿನ್ನಲೆಯಲ್ಲಿ ಹಲವು ಮಾರ್ಗಸೂಚಿಯನ್ನು ಬಿಡುಗಡೆಮಾಡಲಾಗಿದೆ.

ವಿದ್ಯಾರ್ಥಿಗಳು ಮನೆಯಿಂದಲೇ ನೀರು ಮತ್ತು ಆಹಾರ ತರುವಂತೆ ಸೂಚಿಸಬೇಕು. ಜೊತೆಗೆ ಅವಶ್ಯಕತೆ ಇದ್ದಲ್ಲಿ ಮಕ್ಕಳಿಗೆ ಶಾಲೆಯಲ್ಲಿ ಶುದ್ಧ ಬಿಸಿ ನೀರಿನ ವ್ಯವಸ್ಥೆ ಮಾಡಬೇಕು
ಗ್ರಂಥಾಲಯ, ಪ್ರಯೋಗಾಲಯ, ಕಂಪ್ಯೂಟರ್​ ಲ್ಯಾಬ್​​, ಒಳಾಂಗಡ ಕ್ರೀಡಾಗಂಣದಲ್ಲಿ ಶುಚಿತ್ವದ ಜೊತೆ ಸಾಮಾಜಿಕ ಅಂತರ ಕಾಪಾಡುವುದು ಅವಶ್ಯ

 ಶಾಲೆಗೆ ಹಾಜರಾಗುವ ಶಿಕ್ಷಕರಿಗೆ ಕೋವಿಡ್​ ನೆಗೆಟಿವ್​ ವರದಿ ಕಡ್ಡಾಯ. ಜೊತೆಗೆ ಕರ್ತವ್ಯಕ್ಕೆ ಹಾಜರಾಗುವ ಮೂರು ದಿನ ಮುಂಚಿತ ಆರ್​ಟಿಪಿಸಿಆರ್​ ನೆಗೆಟಿವ್ ವರದಿಯನ್ನು ಸಲ್ಲಿಸಬೇಕು

ಮುಖ್ಯ ಶಿಕ್ಷಕರು ಸೇರಿದಂತೆ ಶಾಲೆಯ ಶಿಕ್ಷಕರು, ಸಿಬ್ಬಂದಿಗಳು ಒಂದು ಡೋಸ್​ ಲಸಿಕೆ ಪಡೆದಿದ್ದಾರೆ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಬೇಕು. ಜೊತೆಗೆ ಎರಡನೇ ಡೋಸ್​​ ಲಸಿಕೆ ಶೀಘ್ರವಾಗಿ ಪಡೆಯಲು ಪ್ರಯತ್ನಿಸಬೇಕು.

ವಿದ್ಯಾರ್ಥಿಗಳು, ಶಿಕ್ಷಕರು, ಶಾಲಾ ಸಿಬ್ಬಂದಿಗಳು ಮಾಸ್ಕ್​ ಧರಿಸುವುದು ಕಡ್ಡಾಯವಾಗಿದೆ.

ಶಾಲೆಗೆ ಹಾಜರಾಗುವ ವಿದ್ಯಾರ್ಥಿಗಳು ಕಡ್ಢಾಯವಾಗಿ ಪೋಷಕರಿಂದ ಅನುಮತಿ ಪತ್ರದ ಜೊತೆಗೆ ಮಗುವಿನ ಆರೋಗ್ಯ ಪ್ರಮಾಣ ಪತ್ರವನ್ನು ತರಬೇಕು.

ವಿದ್ಯಾರ್ಥಿಗಳನ್ನು ಗುಂಪುಗೂಡಿಸುವಂತಹ ಸಭೆ, ಸಮಾರಂಭ, ಹಬ್ಬ ಮತ್ತು ಇತರೆ ಚಟುವಟಿಕೆಗಳನ್ನು ಹಮ್ಮಿಕೊಳ್ಳಬಾರದು.

ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಲಿಖಿತ ಪತ್ರವನ್ನು ನೀಡಬೇಕು

ಒಂದು ಬೆಂಚ್ ಗೆ ಒಬ್ಬ ವಿದ್ಯಾರ್ಥಿಯಂತೆ ಒಂದು ತರಗತಿಯಲ್ಲಿ ಕೇವಲ 20 ಮಂದಿಗೆ ಮಾತ್ರ ಕೂರಲು ಅವಕಾಶ ನೀಡಬೇಕು.

 ಇನ್ನೂ ಕೆಲವು ಮಾರ್ಗಸೂಚಿಗಳೊಂದಿಗೆ ಆ 23ರಿಂದ ಪ್ರೌಢ ಶಾಲೆಯ 9 ಮತ್ತು 10ನೇ ತರಗತಿಗಳನ್ನು ತೆರೆಯಲು ಸರ್ಕಾರ ಸಕಲ ರೀತಿಯಲ್ಲಿ ಸಜ್ಜುಗೊಂಡಿದೆ.

Exit mobile version