UP : ಹಸುವಿನ ದವಡೆಗೆ ಕಚ್ಚಿದ ಪಿಟ್‌ಬುಲ್ ನಾಯಿ ; ವೀಡಿಯೋ ವೈರಲ್

Kanpur : ಇತ್ತೀಚೆಗೆ ನಾಯಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಅದರಲ್ಲೂ ಪ್ರತ್ಯೇಕವಾಗಿ ಸಾಕು ನಾಯಿಗಳ ಹಾವಳಿ ತೀವ್ರವಾಗುತ್ತಿವೆ. ಉತ್ತರ ಪ್ರದೇಶದಲ್ಲಿ(UttarPradesh) ಪಿಟ್‌ಬುಲ್ ತಳಿಯ ನಾಯಿಯೊಂದು ಹಸುವಿನ ಮೇಲೆ ದಾಳಿ ಮಾಡುವ ವೀಡಿಯೊ(Video) ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್(Viral) ಆಗಿದೆ.

ಉತ್ತರಪ್ರದೇಶದ ಕಾನ್ಪುರದ(Kanpur) ಸರ್ಸಯ್ಯಾ ಘಾಟ್ ಬಳಿ ಈ ಘಟನೆ ನಡೆದಿದೆ. ಪಿಟ್ಬುಲ್(Pitbull) ಸಾಕು ನಾಯಿಯೊಂದು ತನ್ನ ಮಾಲೀಕನ ಕೈಯಿಂದ ಬಿಡಿಸಿಕೊಂಡು ಸ್ಥಳದಲ್ಲಿದ್ದ ಹಸುವಿನ ದವಡೆಯನ್ನು ಬಲವಾಗಿ ಕಚ್ಚಿ ಹಿಡಿದಿದೆ. ನಾಯಿಯ ಮಾಲೀಕ ಮತ್ತು ಸ್ಥಳೀಯರು ಬೆತ್ತದ ಕೋಲಿನಿಂದ ನಾಯಿಗೆ ಹೊಡೆದರು ಹಸುವನ್ನು ಬಿಡದೇ ಬಲವಾಗಿ ಹಿಡಿದುಕೊಂಡಿದೆ.

ಬಳಿಕ ಮಾಲೀಕ ಬೆತ್ತದ ಕಡ್ಡಿಯಿಂದ ಅನೇಕ ಬಾರಿ ತನ್ನ ನಾಯಿಗೆ ಹೊಡೆದ ಮೇಲೆ ಹಸುವಿನ ಬಾಯಿಯನ್ನು ಬಿಟ್ಟಿದೆ. ಈ ಒಂದು ದೃಶ್ಯ ಸ್ಥಳಿಯರೊಬ್ಬರ ಮೊಬೈಲ್ ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಸರ್ಸಯ್ಯ ಘಾಟ್ ನಿವಾಸಿಗಳ ಬಳಿ ಒಟ್ಟು ನಾಲ್ಕು ಪಿಟ್‌ಬುಲ್ ನಾಯಿಗಳು ಉಳಿದಿವೆ ಎಂದು ಮೂಲಗಳು ತಿಳಿಸಿವೆ.

https://youtu.be/pUiXPb0tMJA ನಮ್ಮ ರೈತ ನಮ್ಮ ಹೆಮ್ಮೆ!

ಈ ಘಟನೆ ಬಳಿಕ ಸ್ಥಳೀಯರು ತಮ್ಮ ಮಕ್ಕಳು, ಜಾನುವಾರು ಮತ್ತು ಸಾಕುಪ್ರಾಣಿಗಳ ಬಗ್ಗೆ ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದಾರೆ. ವಾಸ್ತವವಾಗಿ, 2019 ರಲ್ಲಿ ಯುಎಸ್‌ನಲ್ಲಿ 48 ನಾಯಿ ಕಚ್ಚುವಿಕೆ ಸಂಬಂಧಿತ ಸಾವುಗಳು ಹೆಚ್ಚಿದ್ದವು, ಅದರಲ್ಲಿ ಸುಮಾರು 69 ಪ್ರತಿಶತದಷ್ಟು ಪಿಟ್‌ಬುಲ್ಸ್‌ ನಾಯಿಯ ಕಚ್ಚುವಿಕೆಯೇ ಕಾರಣವೆಂದು ಸಮೀಕ್ಷೆಯೊಂದು ವರದಿ ನೀಡಿದೆ.

ಈ ಘಟನೆಯಂತೆಯೇ ಲಕ್ನೋದಲ್ಲಿ ಪಿಟ್‌ಬುಲ್ ನಾಯಿಯೊಂದು ವಯೋವೃದ್ಧರನ್ನು ಕೊಂದುಹಾಕಿದ ಘಟನೆಯ ನಂತರ, ಹಲವಾರು ವಸತಿ ಮತ್ತು ಸ್ಥಳೀಯ ನಾಗರಿಕ ಸಂಸ್ಥೆಗಳು ಅನುಸರಣೆಯನ್ನು ಮಂಡಿಸಿವೆ. ಸದ್ಯ ಮಾಲೀಕರು ಅವುಗಳನ್ನು ಸಾಕಲು ಪರವಾನಗಿಗಳನ್ನು ಪಡೆಯಬೇಕಾಗಿದೆ.

ಮತ್ತೊಂದು ಘಟನೆಯಲ್ಲಿ, ಯುಪಿಯ ಗಾಜಿಯಾಬಾದ್‌ನಲ್ಲಿ ಪಿಟ್‌ಬುಲ್ ನಾಯಿಯೊಂದು 11 ವರ್ಷದ ಬಾಲಕನ ಮುಖವನ್ನು ಕಚ್ಚಿದ್ದು, ಬಾಲಕನ ಮುಖದ ಮೇಲೆ 20ಕ್ಕೂ ಹೆಚ್ಚು ಹೊಲಿಗೆಗಳನ್ನು ಹಾಕಲಾಗಿದೆ ಎಂದು ವರದಿಯಲ್ಲಿ ತಿಳಿದುಬಂದಿದೆ.

Exit mobile version