ಬಡವರ ಮಕ್ಕಳು ಶಿಕ್ಷಣ ಪಡೆಯುವುದು ಬೇಡವೇ ಪ್ರಧಾನಿ ಮೋದಿ ಅವರೇ? : ಸಿದ್ದರಾಮಯ್ಯ

Bengaluru : ಕೇಂದ್ರದ ಸಮಾಜ ಕಲ್ಯಾಣ ಸಚಿವರಾದ ನಾರಾಯಣಸ್ವಾಮಿಯವರು ಈ ಬಗ್ಗೆ ದಿಟ್ಟವಾದ ಧ್ವನಿ(PM Questioned By Siddu) ಎತ್ತಿ ಬಡ ವಿದ್ಯಾರ್ಥಿಗಳ ವಿರೋಧಿ ನಿಲುವು ತೆಗೆದುಕೊಳ್ಳವುದಿಲ್ಲ ಎಂಬುದನ್ನು ಘೋಷಿಸಬೇಕು ಎಂದು ಆಗ್ರಹಿಸುತ್ತೇನೆ.

ಸೈಕಲ್ ವಿತರಿಸದ ಕಾರಣದಿಂದ 10 ಕಿಮೀ ದೂರದವರೆಗೂ ನಡೆದು ಬರುವ ಕೊಡಗು-ಮಲೆನಾಡು ಸೇರಿದಂತೆ ವಿವಿಧ ಜಿಲ್ಲೆಗಳ ಸಾವಿರಾರು.

ವಿದ್ಯಾರ್ಥಿಗಳು ಅದರಲ್ಲೂ ಹೆಚ್ಚಿನ ಪ್ರಮಾಣದ ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಎಂದು ಸಮೀಕ್ಷೆಗಳು(Survey) ಹೇಳುತ್ತಿರುವುದು ಗೊತ್ತೇ ನರೇಂದ್ರ ಮೋದಿ ಅವರೇ?

ಪ್ರಧಾನಿ ಮೋದಿ(Narendra Modi) ಅವರಿಗೆ ಬಡ ಮಕ್ಕಳ ವಿದ್ಯಾರ್ಥಿ ವೇತನ ಹೊರೆಯಾಗಿಬಿಟ್ಟಿತೆ? ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಅವರು ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಸರಣಿ ಟ್ವೀಟ್‌ ಮಾಡಿರುವ ಅವರು, ಈ ದೇಶದ ಶೇ.50 ರಷ್ಟಿರುವ ರೈತ ಕುಟುಂಬಗಳ ಸರಾಸರಿ ಆದಾಯ ವಾರ್ಷಿಕವಾಗಿ 1 ಲಕ್ಷ ರೂ.ಗಳಿಗಿಂತ ಕಡಿಮೆ ಎಂದು ಬಿಜೆಪಿ ಸರ್ಕಾರದ ದಾಖಲೆಗಳೆ ಹೇಳುತ್ತವೆ.

ಇದನ್ನೂ ಓದಿ : https://vijayatimes.com/rbi-digtal-rupee/

ಕೂಲಿ ಕಾರ್ಮಿಕರ ಆದಾಯ ಇದಕ್ಕಿಂತ ಕಡಿಮೆ ಇದೆ. ಬಡವರ ಮಕ್ಕಳು ಶಿಕ್ಷಣ ಪಡೆಯುವುದು ಬೇಡವೇ ಮೋದಿ ಅವರೇ?

ಕೇಂದ್ರದ ಬಿಜೆಪಿ ಸರ್ಕಾರ ಏಕಾಏಕಿ ವಿದ್ಯಾರ್ಥಿವೇತನ ನಿಲ್ಲಿಸುವುದರಿಂದ ಶಾಲೆಗಳ ದಾಖಲಾತಿ ಪ್ರಮಾಣ ಕಡಿಮೆಯಾಗುತ್ತದೆ.

ಶೈಕ್ಷಣಿಕ ಸಾಮಾಗ್ರಿಗಳ ಖರೀದಿಗೂ ಮಕ್ಕಳು ಪೋಷಕರ ಮೇಲೆ ಅವಲಂಬಿತರಾಗುವ ಅನಿವಾರ್ಯತೆ ಸೃಷ್ಟಿಯಾಗುತ್ತದೆ.

ದೇಶದ 10.22 ಲಕ್ಷ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳ ಸಂಖ್ಯೆ 22.56 ಕೋಟಿ.

ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಶೇ.90ಕ್ಕೂ ಹೆಚ್ಚು ಮಕ್ಕಳು ಆರ್ಥಿಕವಾಗಿ ಹಿಂದುಳಿದವರು.

ಇವರೆಲ್ಲರೂ ವಿದ್ಯಾರ್ಥಿವೇತನದ ರದ್ದತಿಯಿಂದಾಗಿ ಶಿಕ್ಷಣ ವಂಚಿತರಾಗುವ ಸಾಧ್ಯತೆ ಇದೆ ಮೋದಿ ಅವರು ವಿದ್ಯಾರ್ಥಿಗಳಿಗೆ ತಲಾ ರೂ.750 ರಿಂದ ರೂ.1000 ಮಾತ್ರ ವಿದ್ಯಾರ್ಥಿವೇತನದ ರೂಪದಲ್ಲಿ ನೀಡಲಾಗುತ್ತಿತ್ತು ಎಂದಿದ್ದಾರೆ.

ಇನ್ನು ಕಾರ್ಪೋರೇಟ್ ವಂಚಕರ ಸಹಸ್ರಾರು ಕೋಟಿ ಸಾಲದ ಹಣವನ್ನು ಕ್ಷಣ ಮಾತ್ರದಲ್ಲಿ ಮನ್ನಾ ಮಾಡುವ ಪ್ರಧಾನಿ ಮೋದಿ ಅವರಿಗೆ ಬಡ ಮಕ್ಕಳ ವಿದ್ಯಾರ್ಥಿ ವೇತನ ಹೊರೆಯಾಗಿಬಿಟ್ಟಿತೆ?

ವಾರ್ಷಿಕ 2.5 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವ ದಮನಿತ ವರ್ಗಗಳ ಮಕ್ಕಳಿಗೆ ಮಾಸಿಕ ತಲಾ ರೂ.225,

https://fb.watch/h6_9JrDPUG/ PROMO | ಥೂ ಥೂ..ಇದೆಂಥಾ ರಸ್ತೆ ರೀ? ಎಲ್ಲಿದೆ ಚಿನ್ನದ ರಸ್ತೆ? ಹಾಸನ : ಹಾಸನ-ಬೆಂಗಳೂರು ರಸ್ತೆಯ ಅವ್ಯವಸ್ಥೆ ನೋಡಿ

ಹಾಸ್ಟೆಲ್ನಲ್ಲಿರುವ ವಿದ್ಯಾರ್ಥಿಗಳಿಗೆ ತಲಾ ರೂ.525 ವಿದ್ಯಾರ್ಥಿ ವೇತನ ನೀಡಲಾಗುತ್ತಿತ್ತು. ಇದು ಪುಸ್ತಕ, ಪೆನ್ನು ಇತ್ಯಾದಿ ಶಿಕ್ಷಣ ಸಂಬಂಧಿತ ವಸ್ತುಗಳನ್ನು ಖರೀದಿಸಲು ಸಹಕಾರಿಯಾಗಿತ್ತು.

ಕೇಂದ್ರ ಸರ್ಕಾರ(Central Government) ಏಕಾಏಕಿ ಒಂದರಿಂದ ಎಂಟನೇ ತರಗತಿವರೆಗಿನ ಬಡ ಮಕ್ಕಳಿಗೆ

ವಿದ್ಯಾರ್ಥಿವೇತನವನ್ನು ರದ್ದುಗೊಳಿಸಿ ಆದೇಶ ಹೊರಡಿಸಿರುವುದು ಶೋಷಿತರನ್ನು ಶಿಕ್ಷಣದಿಂದ ದೂರ ಇಡುವ ಹುನ್ನಾರದಂತೆ ಕಾಣುತ್ತಿದೆ ಎಂದು ಆರೋಪಿಸಿದ್ದಾರೆ.

ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನದ ವೆಚ್ಚವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶೇ. 75-25 ಪ್ರಮಾಣದಲ್ಲಿ ಹಂಚಿಕೊಳ್ಳುವುದು ಈ ವರೆಗಿನ ಪದ್ಧತಿ.

ಈಗ ಕೇಂದ್ರ ಸರ್ಕಾರ ತನ್ನ ಪಾಲಿನ ದುಡ್ಡು ಉಳಿಸಲು ಬಡ ಮಕ್ಕಳ ಶಿಕ್ಷಣವನ್ನು ಬಲಿಕೊಟ್ಟಿದೆ. ಪ್ರಾಥಮಿಕ ಶಿಕ್ಷಣದ ನಂತರ ಹೈಸ್ಕೂಲಿಗೆ ದಾಖಲಾಗುವ ಮಕ್ಕಳ ಪ್ರಮಾಣ ಶೇ.75 ರಷ್ಟಿದೆ.

ಅಂದರೆ ಶೇ.25 ರಷ್ಟು ಮಕ್ಕಳು ಶಾಲಾ ಶಿಕ್ಷಣದಿಂದ ಹೊರಗಿದ್ದಾರೆ. ಈ ಕಾರಣಕ್ಕಾಗಿಯೇ ಬಿಸಿಯೂಟ, ಸಮವಸ್ತ್ರ, ಶೂ, ಕೆನೆ ಭರಿತ ಹಾಲು, ಸೈಕಲ್ ವಿತರಣೆ ಮಾಡುವ ಯೋಜನೆ ಜಾರಿಗೆ ತಂದಿದ್ದು.

ಇದನ್ನೂ ಓದಿ : https://vijayatimes.com/new-update-of-ration-card/

ಎಸ್ಸಿ/ಎಸ್ಟಿ ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳಿಗೆ ಸೇರಿದ ಮೆಟ್ರಿಕ್ಪೂರ್ವ ವಿದ್ಯಾರ್ಥಿಗಳ ವಿದ್ಯಾರ್ಥಿವೇತನವನ್ನು ರದ್ದುಗೊಳಿಸಿರುವ ಕೇಂದ್ರ ಸರ್ಕಾರದ ಕ್ರಮ ಖಂಡನೀಯ.

ಸರ್ಕಾರ ತನ್ನ ಈ ನಿರ್ಧಾರವನ್ನು ತಕ್ಷಣ ಹಿಂಪಡೆಯಬೇಕು ಎಂದು ಆಗ್ರಹಿಸುತ್ತೇನೆ ಎಂದು ತಿಳಿಸಿದ್ದಾರೆ.

Exit mobile version