ಪೊಗರು ಸಿನಿಮಾದ ಖುಷಿಗೆ ಕಾರಣವಾದ್ರು ಬಾಲಿವುಡ್ ನಿರ್ಮಾಪಕರು

ಆಕ್ಷನ್ ಪ್ರಿನ್ಸ್ ದ್ರುವ ಸರ್ಜಾ ಅಭಿನಯದ ಪೊಗರು ಸಿನಿಮಾಕ್ಕೆ ಸಿಹಿಸುದ್ದಿಯೊಂದು ಸಿಕ್ಕಿದೆ.. ಪೊಗರು ಸಿನಿಮಾದ ಹಿಂದಿ ರೈಟ್ಸ್ ಅನ್ನು ಕೋಟಿ ಮೊತ್ತಕ್ಕೆ ಪಡೆದುಕೊಳ್ಳಲಾಗಿದೆ ಅನ್ನೋ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.

ಈಗಾಗಲೇ ಶೂಟಿಂಗ್ ಮುಗಿಸಿರೋ ಪೊಗರು . ರಿಲೀಸ್ ಗೆ ರೆಡಿಯಾಗಿ ನಿಂತಿದೆ . ಡಿಸಂಬರ್ ಅಥವಾ ಜನವರಿಯಲ್ಲಿ ಚಿತ್ರ ತೆರೆಕಾಣಲಿರುವ ಸಾಧ್ಯತೆ ಇದೆ .. ಈಗಾಗಲೇ ಚಿತ್ರದ ಪೊಗರು ಹಾಡು ಸೂಪರ್ ಹಿಟ್ ಆಗಿದ್ದು ಮಿಲಿಯನ್ಸ್ ವ್ಯೂವ್ ಗಳ ಜೊತೆಗೆ ಒಳ್ಳೆ ಹೈಪ್ ನ್ನು ಪಡೆದುಕೊಂಡಿದೆ ..

ಇದೀಗ ಈ ಸಿನಿಮಾದ ಹಿಂದಿ ಡಬ್ಬಿಂಗ್ ರೈಟ್ಸ್ ಅನ್ನು ೭.೨ ಕೋಟಿಗೆ ಮಾರಾಟ ಮಾಡಲಾಗಿದೆ ಅನ್ನೋ ಮಾಹಿತಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಬಾಲಿವುಡ್ ನಿರ್ಮಾಪಕ ಆರ್ ಕೆ ದಗ್ಗಲ್ ಈ ದೊಡ್ಡ ಮೊತ್ತಕ್ಕೆ ಖರೀದಿ ಮಾಡಿದ್ದಾರೆ ಅನ್ನೋ ಮಾಹಿತಿ ಸಿಕ್ಕಿದ್ದು . ಇದರ ಬಗ್ಗೆ ಅಧಿಕೃತವಾಗಿ ಚಿತ್ರತಂಡ ಯಾವುದೇ ಮಾತನಾಡಿಲ್ಲ.

ಇನ್ನು ಚಿತ್ರಕ್ಕೆ ನಂದ ಕಿಶೋರ್ ಆಕ್ಷನ್ ಕಟ್ ಹೇಳಿದ್ದು ಸಿನಿಮಾದ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲದ ಜೊತೆ ಸಂಭ್ರಮವು ಹೆಚ್ಚಾಗಿದೆ.

Exit mobile version