ಯೋಚನೆ ಮಾಡುತ್ತ ಕುಳಿತಿರುವ ಸೌತ್ ಚಿತ್ರರಂಗದ ಬಹುಬೇಡಿಕೆಯ ನಟಿ.!

ದಕ್ಷಿಣ ಭಾರತದ ಬಹುಬೇಡಿಕೆಯ ನಟಿಯರ ಪೈಕಿಯಲ್ಲಿ ಸದ್ಯ ಅಗ್ರಸ್ಥಾನ ಗಳಿಸಿಕೊಂಡಿರುವುದು ನಟಿ ಪೂಜಾ ಹೆಗ್ಡೆ. ಹೌದು, ಟಾಲಿವುಡ್ ಅಂಗಳದಲ್ಲಿ ತಮ್ಮ ಹೆಸರನ್ನು ಜನರ ಮನಸಿನಲ್ಲಿ ರಿಜಿಸ್ಟರ್ ಮಾಡಿರುವ ನಟಿಯರಲ್ಲಿ ಮೊದಲಿಗೆ ರಶ್ಮಿಕಾ ಮಂದಣ್ಣ ಇದ್ದರೆ, ದ್ವಿತೀಯವಾಗಿ ಮಂಗಳೂರಿನ ಬೆಡಗಿ ಪೂಜಾ ಹೆಗ್ಡೆ ಇದ್ದಾರೆ. ಸದ್ಯ ಸೌತ್ ಚಿತ್ರರಂಗದ ವಿಭಾಗದಲ್ಲಿ ಇವರಿಬ್ಬರದ್ದೇ ಪೈಪೋಟಿ.

ಕಳೆದ ವರ್ಷ ಅತಿ ಬಿಝಿಯಾಗಿದ್ದ ನಟಿ ಪೂಜಾ ಹೆಗ್ಡೆ ಈ ಬಾರಿ ಅಷ್ಟು ಕೆಲಸದಲ್ಲಿ ಬಿಝಿಯಾಗದೆ ಕುಳಿತ್ತಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಕೂಡ ಲಭ್ಯವಿದೆ. ಸೌತ್ ಇಂಡಿಯನ್ ಸಿನಿಮಾದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಪೂಜಾ ಹೆಗ್ಡೆ ಮೊದಲು. ಇಲ್ಲಿಯವರೆಗೂ ಪೂಜಾ ಹೆಗ್ಡೆ ಪಡೆದುಕೊಳ್ಳುತ್ತಿದ್ದ ಸಂಭಾವನೆ 3 ಕೋಟಿ. ಆದರೆ ಈಗ 3 ಕೋಟಿ ಇರಲಿ, 3 ಸಿನಿಮಾಗಳು ತಮ್ಮ ಕೈಯಲ್ಲಿಲ್ಲ ಮತ್ತು ತಮ್ಮ ಬೇಡಿಕೆ ಕಡಿಮೆಯಾಗಿದೆ ಎಂಬುದು ಸದ್ಯ ಪೂಜಾ ಹೆಗ್ಡೆ ಚಿಂತೆಯಾಗಿದೆ.!

ಕಳೆದ ವರ್ಷ ಪ್ರಕಟವಾಗಿದ್ದ ಸಿನಿಮಾ ಬಿಟ್ಟರೆ ಬೇರ್ಯಾವ ಸಿನಿಮಾಗಳು ಸದ್ಯ ಪೂಜಾ ಹೆಗ್ಡೆ ಬಳಿ ಇಲ್ಲವಂತೆ. ಈ ಕಾರಣದಿಂದಲೇ ಪ್ರಮುಖ ಸ್ಥಾನದಿಂದ ದಿಢೀರ್ ಎಂದು ಕುಸಿದಿದ್ದಾರೆ. ಇದೊಂದು ಕಾರಣವೇ ಪೂಜಾ ಹೆಗ್ಡೆ ಅವರಿಗೆ ಎದುರಾಗಿರುವ ಸಂಕಷ್ಟ.! ಸದ್ಯ ಪೂಜಾ ಹೆಸರನ್ನು ಕೇಳಿದರೆ ನಿರ್ಮಾಪಕರು ಮುಖ ತಿರುಗಿಸಿಕೊಳ್ಳುವಷ್ಟು ಪರಿಸ್ಥಿತಿ ಕೆಟ್ಟಿದೆ ಎನ್ನಲಾಗಿದೆ. ಪೂಜಾ ಹೆಗ್ಡೆ ಈ ಹಿಂದೆ ಪಡೆಯುತ್ತಿದ್ದ 3 ಕೋಟಿ ಸಂಭಾವನೆಯೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ.

`ಆಲಾ ವೈಕುಂಠ ಪುರಂಮುಲೋ’ ಸಿನಿಮಾಗೆ 3 ಕೋಟಿ ಸಂಭಾವನೆ ಪಡೆದ ಬಳಿಕ ಹಿಂದೆ ತಿರುಗಿ ನೋಡದ ನಟಿ ಪೂಜಾ ಹೆಗ್ಡೆ, ಇಂದಿಗೂ 3 ಕೋಟಿ ಸಂಭಾವನೆಯನ್ನು ಕೇಳುತ್ತಾರೆ ವಿನಃ 3 ಕೋಟಿಗಿಂತ ಕಡಿಮೆ ಸಂಭಾವನೆಯನ್ನು ತೆಗೆದುಕೊಳ್ಳುವುದಿಲ್ಲವಂತೆ. ಇದೇ ನೋಡಿ ಈಗ ಎದುರಾಗಿರುವ ಸಮಸ್ಯೆ.! ಈ ಕಾರಣಕ್ಕೆ ಈಗ ಪೂಜಾಗೆ ಸಿನಿಮಾ ಆಫರ್‍ಗಳು ಕಡಿತಗೊಂಡಿದೆ. ಪೂಜಾ ಹೆಗ್ಡೆಗೆ ಕೊಡುವ ಸಂಭಾವನೆಯನ್ನು ತಪ್ಪಿಸಿ ಹೊಸ ಮುಖಗಳಿಗೆ ಅವಕಾಶ ಕೊಡುವುದು ಒಳಿತು ಎಂದು ನಿರ್ಮಾಪಕರು, ಸ್ಟಾರ್ ನಟರ ಸಿನಿಮಾಗಳಿಗೂ ಪೂಜಾ ಹೆಸರನ್ನು ಲೆಕ್ಕಕ್ಕೆ ಪರಿಗಣಿಸುತ್ತಿಲ್ಲ. ಪೂಜಾ ಬಳಿ ಕಾಲ್‍ಶೀಟ್ ಕೇಳುವ ಸಹವಾಸಕ್ಕೆ ಹೋಗುತ್ತಿಲ್ಲ.

ಪೂಜಾ ಹೆಗ್ಡೆ ನಟಿಸಬೇಕಿದ್ದ ಅನೇಕ ಸಿನಿಮಾಗಳು ಪ್ರಸ್ತುತ ಸೌತ್ ಕ್ರಶ್ ಎಂದೇ ಖ್ಯಾತಿ ಪಡೆದುಕೊಂಡಿರುವ ನಟಿ ರಶ್ಮಿಕಾ ಮಂದಣ್ಣ ಪಾಲಾಗಿದೆ. ರಶ್ಮಿಕಾ, ಪೂಜಾ ರೀತಿಯಲ್ಲಿ ದಿಢೀರ್ ಸಂಭಾವನೆ ಬೇಕು ಎಂದು ಕೇಳುವುದಿಲ್ಲವಂತೆ ಬದಲು ಹಂತ ಹಂತವಾಗಿ ಸಿನಿಮಾಗಳ ಹಿಟ್ ನೋಡಿಕೊಂಡು ಏರಿಸಿಕೊಳ್ಳುತ್ತಾರೆ ಎಂಬುದು ತಿಳಿದುಬಂದಿದೆ. ಪೂಜಾ ಇದೇ ರೀತಿ ಮುಂದುವರಿದರೆ ನಟಿ ರಶ್ಮಿಕಾ ಅಗ್ರಸ್ಥಾನವನ್ನು ಎಂದಿನಂತೆ ದಕ್ಕಿಸಿಕೊಳ್ಳುವುದು ಖಚಿತವಾಗಿದೆ.

  • ಮೋಹನ್ ಶೆಟ್ಟಿ

Latest News

ದೇಶ-ವಿದೇಶ

ಒಡಿಶಾದಲ್ಲಿ ಆಘಾತಕಾರಿ ಘಟನೆ ; ಹಾಡಹಗಲೇ ವೃದ್ಧನನ್ನು ಕಂಬಕ್ಕೆ ಕಟ್ಟಿ, ಥಳಿಸಿ ಕೊಂದ ಕುಟುಂಬಸ್ಥರು!

ಕೊರಾಪುಟ್ ಜಿಲ್ಲೆಯ ಬುಡಕಟ್ಟು ಪ್ರದೇಶದಲ್ಲಿ ಹಾಡಹಗಲೇ ವೃದ್ಧನನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ತಮ್ಮ ಕುಟುಂಬಸ್ಥರೇ ಥಳಿಸಿ ಕೊಂದಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ!

ಮಾಹಿತಿ

ಕಿಡ್ನಿ ಸ್ಟೋನ್‌ ಸಮಸ್ಯೆಗೆ ಇಲ್ಲಿದೆ ನೈಸರ್ಗಿಕ ಪರಿಹಾರ ; ಈ ಸರಳ ಪರಿಹಾರ ಪಾಲಿಸಿ

ಕೆಲವು ಮನೆಮದ್ದುಗಳು(Home Remedies) ಆರಂಭಿಕ ಹಂತದ ಕಿಡ್ನಿಸ್ಟೋನ್ ಸಮಸ್ಯೆಗೆ ಪರಿಹಾರ ನೀಡುತ್ತವೆ. ಅಂತಹ ಮನೆಮದ್ದುಗಳ ವಿವರ ಇಲ್ಲಿದೆ ನೋಡಿ.

ಮಾಹಿತಿ

ದೇಹಕ್ಕೆ ಪ್ರೋಟಿನ್‌ ಕೊರತೆಯಾದ್ರೆ `ಈ’ 10 ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ

ಯುವಜನರ ದೈಹಿಕ ಬೆಳವಣಿಗೆಯಲ್ಲಿ ಪ್ರೋಟಿನ್‌ ಪ್ರಮುಖ ಪಾತ್ರ ವಹಿಸುತ್ತದೆ. ದೇಹದಲ್ಲಿನ ಸ್ನಾಯುಗಳು, ಕಿಣ್ವಗಳು ಮತ್ತು ಹಾರ್ಮೋನುಗಳಿಗೆ ಪ್ರೋಟಿನ್ ಅತ್ಯಂತ ಅವಶ್ಯಕವಾಗಿದೆ.