Bengaluru: ಇತ್ತೀಚೆಗೆ ಡಿಕೆ ಶಿವಕುಮಾರ್, ಕಾಂಗ್ರೆಸ್ ವಿರುದ್ಧ ಪದೇ ಪದೇ ಆರೋಪಗಳನ್ನು ಮಾಜಿ ಸಿಎಂ (poster war against hdk) ಹೆಚ್ಡಿ ಕುಮಾರಸ್ವಾಮಿಯವರು (H.D.Kumaraswamy)
ಮಾಡುತ್ತಿದ್ದರು. ಇದರಿಂದ ರೊಚ್ಚಿಗೆದ್ದ ಅಭಿಮಾನಿಗಳು ಹಾಗೂ ಇತರರು ಹೆಚ್ಡಿಕೆ ವಿರುದ್ಧ ಮತ್ತೊಂದು ಪೋಸ್ಟರ್ ವಾರ್ (Poster War) ಶುರು ಮಾಡಿದ್ದು, ವ್ಯಂಗ್ಯವಾಡಿದ ಪೋಸ್ಟರ್ಗಳು
ಗೋಡೆಗಳ ಮೇಲೆ (poster war against hdk) ರಾರಾಜಿಸುತ್ತಿವೆ.
ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ವಿರುದ್ಧ ಮತ್ತೆ ಪೋಸ್ಟರ್ ವಾರ್ ಶುರುವಾಗಿದ್ದು,ಅವರು ಡಿಕೆಶಿ ಸೇರಿದಂತೆ ಕಾಂಗ್ರೆಸ್ (Congress) ವಿರುದ್ಧ ಆರೋಪಗಳ ಸುರಿಮಳೆ
ಗೈದಿದ್ದರು. ಇದರ ಜೊತೆಗೆ ಹೆಚ್ಡಿಕೆಯ ಹೇಳಿಕೆಗೆ ಕೆರಳಿದ ದುಷ್ಕರ್ಮಿಗಳು ಸಿನಿಮಾ ಮಾದರಿಯ ಪೋಸ್ಟರ್ ಅಂಟಿಸಿ ಆಕ್ರೋಶ ಹೊರ ಹಾಕಿದ್ದಾರೆ.
ಗೋಡೆಗಳ ಮೇಲೆ ಅಂಟಿಸಲಾಗಿದ್ದ ಪೋಸ್ಟರ್ಗಳ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಶೇಷಾದ್ರಿಪುರ ರಸ್ತೆ, ರಾಜಾಜಿನಗರ ಸೇರಿದಂತೆ ವಿವಿಧೆಡೆ ಪೋಸ್ಟರ್ (Poster) ಅಂಟಿಸಿ
ಆಕ್ರೋಶ ಹೊರ ಹಾಕಿದ್ದಾರೆ. ಇನ್ನು ಮಾಹಿತಿ ಬಂದ ಕೂಡಲೇ ಪೊಲೀಸರು ಹುಡುಕಾಟ ನಡೆಸಿದ್ದು ಎಲ್ಲೂ ಕೂಡ ಪೋಸ್ಟರ್ಸ್ ಪತ್ತೆಯಾಗಿಲ್ಲ ಎನ್ನಲಾಗುತ್ತಿದೆ.
ಪೋಸ್ಟರ್ನಲ್ಲಿ ಏನಿದೆ?
ಕರೆಂಟ್ ಕಳ್ಳ ಖ್ಯಾತಿಯ ಹೆಚ್ಡಿಕೆ ನಿರ್ಮಾಣದ ಚಿತ್ರ “ಪೆನ್ ಡ್ರೈವ್ ಬ್ರದರ್”(Pen Drive Bro) . ಪ್ರಾಮಾಣಿಕ ಕರೆಂಟ್ ಕಳ್ಳ ಖ್ಯಾತಿಯ ನಿರ್ದೇಶನ. ಬರೀ ಟೀಸರ್ಗೆ ಇಷ್ಟೊಂದು ಟೆನ್ಶನ್ ಆದರೆ ಹೇಗೆ
ಸಿನಿಮಾ ಇನ್ನೂ ಬಾಕಿಯಿದೆ. ರಾಧಾ, ಮಾರ, ಬ್ಲೂ ಬಾಯ್ಸ್ ಚಿತ್ರಮಂದಿರಗಳಲ್ಲಿ ಬಿಡುಗಡೆ. ಚಿತ್ರದ ನಿರ್ಮಾಣದ ವೆಚ್ಚ 68000 ಎಂದು ಪೋಸ್ಟರ್ನಲ್ಲಿ ವ್ಯಂಗ್ಯವಾಡಲಾಗಿದೆ.
ಆಕ್ರೋಶ ಯಾಕೆ?
ಇತ್ತೀಚೆಗೆ ತಮ್ಮ ವಿರುದ್ಧ ನಡೆಯುತ್ತಿರುವ ಪೋಸ್ಟರ್ ಅಭಿಯಾನಕ್ಕೆ ಡಿ.ಕೆ. ಶಿವಕುಮಾರ್ ಅವರೇ ಕಾರಣ ಎಂದು ಹೆಚ್ಡಿ ಕುಮಾರಸ್ವಾಮಿಯವರು ಆರೋಪಿಸಿದ್ದರು. ಈ ವೇಳೆ “ನನ್ನ ವಿರುದ್ಧ ಪೋಸ್ಟರ್
ಅಭಿಯಾನ ಮಾಡುತ್ತಿರುವವರು ಹಿಂದೆ ಟೆಂಟ್ ಗಳಲ್ಲಿ ಬ್ಲೂ ಫಿಲಂ ಕನೆಕ್ಷನ್ ತೆಗೆದುಕೊಂಡು ಅಂಥ ಸಿನಿಮಾಗಳನ್ನು ಜನರಿಗೆ ತೋರಿಸಿಕೊಂಡು ಬಂದವರು. ಅಂಥವರಿಂದಲೇ ಇಂಥ ಪೋಸ್ಟರ್ ಅಭಿಯಾನ
ನಡೆಯುತ್ತಿದೆ” ಎಂದು ಹೇಳಿದ್ದರು. ಇದರಿಂದ ಕೆರಳಿದ ಜನ ಮತ್ತೊಂದು ರೀತಿಯ ಪೋಸ್ಟರ್ ವೈರಲ್ (Viral) ಮಾಡುತ್ತಿದ್ದಾರೆ.
ಇದನ್ನು ಓದಿ: ರಾಜ್ಯಪಾಲರ ವಿರುದ್ಧ ಕೇರಳ ಸರ್ಕಾರ ಆರೋಪ: ಕೇಂದ್ರಕ್ಕೆ ಸುಪ್ರೀಂಕೋರ್ಟ್ ನೋಟಿಸ್
- ಭವ್ಯಶ್ರೀ ಆರ್ ಜೆ