ರಾಜ್ಯ ಸರ್ಕಾರದ ವಿರುದ್ಧ ಮತ್ತೆ ಪೋಸ್ಟರ್ ವಾರ್ ಮುಂದುವರೆಸಿದ ಬಿಜೆಪಿ – ಜೆಡಿಎಸ್ ನಾಯಕರು.

Bengaluru: ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ ಮುಗಿದು ಬಹಳಷ್ಟು ದಿನ ಕಳೆದರೂ ಸಹ ರಾಜಕೀಯ ಪಕ್ಷಗಳ ಕೆಸರೆರಚಾಟ ಮಾತ್ರ ಇನ್ನು ನಿಂತಿಲ್ಲ. ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣದಲ್ಲಿ (Prajwal Revanna Pendrive Case) ಕಾಂಗ್ರೆಸ್‌ ಪಕ್ಷವನ್ನು ವಿರೋಧ ಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷಗಳು ತೀವ್ರ ತರಾಟೆಗೆ ತೆಗೆದುಕೊಂಡಿವೆ. ಇಷ್ಟು ದಿನ ತಣ್ಣಾಗಿದ್ದಂತೆ ಕಾಣುತ್ತಿದ್ದ ವಿರೋಧ ಪಕ್ಷಗಳು ಈಗ ಫುಲ್‌ ಎಕ್ಟಿವ್‌ ಆಗಿವೆ. ಸಾಮಾಜಿಕ ತಾಣದಲ್ಲಿ ಪೋಸ್ಟರ್‌ ವಾರ್‌ (Poster war) ಆರಂಭವಾಗಿದೆ.

Congress

ಬಿಜೆಪಿ ಹಾಗೂ ಜೆಡಿಎಸ್‌ (BJP-JDS) ಪಕ್ಷಗಳು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡು ಕಾಂಗ್ರೆಸ್‌ (Congress) ಪಕ್ಷದ ಮೇಲೆ ಒಟ್ಟಾಗಿ ಮುಗಿ ಬೀಳುತ್ತಿವೆ. ಜೆಡಿಎಸ್‌ ಪಕ್ಷ ನಿನ್ನೆ ಸಿಡಿ ಶಿವು ಎಂಬ ಹೆಸರಿನ ಎರಡು ಪೋಸ್ಟರ್‌ ಬಿಡುಗಡೆ ಮಾಡಿತ್ತು. ಇದರ ಬೆನ್ನಲ್ಲೆ ಬಿಜೆಪಿ ಸಹ ಪೋಸ್ಟರ್‌ ವಾರ್‌ ಮುಂದುವರೆಸಿದೆ. ಜೆಡಿಎಸ್‌ (JDS) ಪಕ್ಷ ಸರ್ಕಾರದಲ್ಲಿರುವ ಒಬ್ಬ ವ್ಯಕ್ತಿಯನ್ನು ಟಾರ್ಗೆಟ್‌ ಮಾಡಿ ಪೋಸ್ಟ್ ವಾರ್‌ ನಡೆಸಿದರೆ, ಬಿಜೆಪಿ ಸರ್ಕಾರದ ವಿರುದ್ಧವೇ ಧ್ವನಿ ಎತ್ತಿದೆ.

ಬೆಂಗಳೂರಿನ (Bengaluru) ಹೊರ ಒಲಯದಲ್ಲಿ ಇತ್ತೀಚಿಗೆ ನಡೆದಿದ್ದ ರೇವ್‌ ಪಾರ್ಟಿ (Rave Party), ಸಖತ್‌ ಸದ್ದು ಮಾಡಿತ್ತು. ಇದನ್ನೇ ಗುರಿಯಾಗಿಸಿ ಬಿಜೆಪಿ ತನ್ನ ಆಕ್ರೋಶವನ್ನು ಹೊರ ಹಾಕಿದೆ. ಬೆಂಗಳೂರಿನಲ್ಲಿ ನಡೆದ ಪಾರ್ಟಿಯಲ್ಲಿ ತೆಲುಗು ನಟಿಯರು ಭಾಗೀಯಾಗಿದ್ದಾರೆ ಎಂಬ ಬಗ್ಗೆ ವರದಿಗಳು ಆಗಿದ್ದವು. ಇದರ ಬೆನ್ನಲ್ಲೆ ಬಿಜೆಪಿ ಮಾಡಿದ್ದ ಉಡ್ತಾ ಬೆಂಗಳೂರು ಪೋಸ್ಟರ್‌ ಜನರ ಚಿತ್ತ ಕದ್ದಿದೆ. ಅಸಲಿಗೆ ಬಿಜೆಪಿ ಪೋಸ್ಟ್‌ ಸಾಮಾಜಿಕ ತಾಣದಲ್ಲಿ ಸಖತ್‌ ವೈರಲ್‌ ಆಗುತ್ತಿದೆ. ಈ ಪೋಸ್ಟ್‌ ಮೂಲಕ ಬಿಜೆಪಿ ರಾಜ್ಯದಲ್ಲಿರುವ ಕಾನೂನು ಸುವ್ಯವಸ್ಥೆಯ ಬಗ್ಗೆ ಆಕ್ರೋಶವನ್ನು ಹೊರ ಹಾಕಿದೆ.

Exit mobile version