ಪ್ರಭಾಕರ್ ಕೋರೆಯವರಿಗೆ 10 ಕೋಟಿ ರೂಪಾಯಿ ವಂಚನೆ; ಆರೋಪಿ ಸಿಸಿಬಿ ವಶಕ್ಕೆ

ಬೆಂಗಳೂರು, ಡಿ. 16: ಕೇಂದ್ರ ಗೃಹ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಯಡಿಯೂರಪ್ಪ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ಸೂಪರ್ ಸ್ಟಾರ್ ರಂಜನಿಕಾಂತ್ ಜೊತೆಗಿರುವ ಪೋಟೋ ತೋರಿಸಿ ವಂಚನೆ ಮಾಡುತ್ತಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರ್.ಎಸ್.ಎಸ್ ಸೇರಿದಂತೆ ಹಲವು ಗಣ್ಯರೊಂದಿಗೆ ಆತ್ಮೀಯ ಸಂಪರ್ಕ ಹೊಂದಿದ್ದೇನೆಂದು ನಂಬಿಸಿ ಹಣ ದೋಚುತ್ತಿದ್ದ ಯುವರಾಜ್ ಈಗ ಕಂಬಿ ಏಣಿಸುತ್ತಿದ್ದಾನೆ.

ಸಂಸತ್ ಚುನಾವಣೆಯ ಸಂದರ್ಭದಲ್ಲಿ ಎಂಪಿ ಟಿಕೆಟ್ ಕೊಡಿಸುತ್ತೇನೆಂದು ಪ್ರಭಾಕರ್ ಕೋರೆಯಿಂದ 10 ಕೋಟಿ ರೂಪಾಯಿ ಪಡೆದಿದ್ದ ಯುವರಾಜ್  ಟಿಕೆಟ್ ಕೊಡಿಸುವಲ್ಲಿ ವಿಫಲನಾಗಿದ್ದ, ಆದರೆ ಹಣವನ್ನು ವಾಪಸ್ ನೀಡಲು ಸಾತಾಯಿಸಿದ್ದ, ಈತನ ವರ್ತನೆಗೆ ಬೇಸತ್ತ ಪ್ರಭಾಕರ್ ಕೋರೆ ಈತನ ವಿರುದ್ಧ ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಹಿನ್ನೆಯಲ್ಲಿ ಈತನನ್ನು ವಿಚಾರಣೆ ಮಾಡಲಾಗುತ್ತಿದೆ. ಕೇವಲ ರಾಜಕಾರಣಿಗಳಷ್ಟೆ ಅಲ್ಲದೆ ಐಎಎಸ್, ಐಪಿಎಸ್ ಆಫೀಸರ್‌ಗಳ ವಿಶ್ವಾಸಗಳಿಸಿದ್ದ ಎನ್ನಲಾಗಿದೆ.

ನಂಬಿಕೆ ಮೂಡಿಸುವ ಸಲುವಾಗಿ  ಅರ್ಧ ಹಣವನ್ನು ಅಕೌಂಟ್‌ನಲ್ಲಿ ಹಾಕಿಸಿಕೊಳ್ಳುತ್ತಿದ್ದ ಯುವರಾಜ್‌, ಉಳಿದ ಅರ್ಧ ಹಣವನ್ನು ಕ್ಯಾಶ್‌ ಮೂಲಕ ಪಡೆಯುತ್ತಿದ್ದ, ಯುವರಾಜ್ ಮನೆ ಮೇಲೆ ದಾಳಿ ನಡೆಸಿ ಶೋಧ ಮಾಡಿದಾಗ 50 ಲಕ್ಷ ನಗದು ಚಿನ್ನಾಭರಣ ಪತ್ತೆಯಾಗಿದೆ.

ಇನ್ನೊಂದೆಡೆ ಈತನ ಹೆಂಡತಿ ಪ್ರೇಮಾ ಯುವರಾಜ್ ಕೂಡ ಇದೇ ದಾರಿ ತುಳಿದಿದ್ದು, ಮದ್ದೂರು ಮೂಲದ ಬಿಜೆಪಿ ನಾಯಕಿ ಎಂದು ಹೇಳಿಕೊಂಡು ಓಡಾಡುತ್ತಾ ಹಲವರಿಗೆ ಪಂಗನಾಮ ಹಾಕಿದ್ದಾಳೆ. ಸಚಿವ ಸ್ಥಾನ ಕೊಡಿಸುವುದಾಗಿ ಎ. ಮಂಜುವಿನ ಬಳಿ 5 ಕೋಟಿ ಪಡೆದು ವಂಚನೆ ಮಾಡಿರುವ ಆರೋಪಗಳು ಕೇಳಿ ಬಂದಿವೆ.

Exit mobile version