Bengaluru: ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಯಶಸ್ವಿಯಾಗಿ ಸಾಫ್ಟ್ ಲ್ಯಾಂಡಿಂಗ್ ಮಾಡಿದ ಒಂದು (Pragyan Rover sent first photo) ವಾರದ ನಂತರ ಪ್ರಗ್ಯಾನ್ ರೋವರ್

ಕ್ಲಿಕ್ ಮಾಡಿದ ವಿಕ್ರಮ್ ಲ್ಯಾಂಡರ್ನ ಮೊದಲ ಫೋಟೋವನ್ನು ಇಸ್ರೋ ತನ್ನ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದೆ.
ಇಸ್ರೋ ನೀಡಿರುವ ಮಾಹಿತಿಯ ಪ್ರಕಾರ, ಪ್ರಗ್ಯಾನ್ ರೋವರ್ನಲ್ಲಿರುವ ನ್ಯಾವಿಗೇಷನ್ ಕ್ಯಾಮೆರಾದಿಂದ ಈ ಚಿತ್ರವನ್ನು ತೆಗೆಯಲಾಗಿದೆ. ಈ ಚಿತ್ರವನ್ನು ಬುಧವಾರ ಬೆಳಿಗ್ಗೆ 7.35ಕ್ಕೆ
(ಭಾರತೀಯ ಕಾಲಮಾನ) ತೆಗೆದುಕೊಳ್ಳಲಾಗಿದೆ. ಚಿತ್ರದಲ್ಲಿ, ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ನಿಂತಿರುವುದನ್ನು ಕಾಣಬಹುದು. ಜೊತೆಗೆ ಅದರ ಎರಡು ಪೇಲೋಡ್ಗಳಾದ ChaSTE
ಮತ್ತು ILSA ಅನ್ನು ಫೋಟೋದಲ್ಲಿ (Pragyan Rover sent first photo) ಕಾಣಬಹುದು.
ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ದಸರಾ ಉದ್ಘಾಟಕರು: ಸಿಎಂ ಸಿದ್ದರಾಮಯ್ಯ ಘೋಷಣೆ
ಈಗಾಗಲೇ ಇಸ್ರೋ ಪ್ರಗ್ಯಾನ್ ರೋವರ್ ವಿಕ್ರಮ್ ನಿಂದ ಹೊರಹೋಗುವ ಮತ್ತು ನಂತರ ಸುತ್ತಲೂ ಅಡ್ಡಾಡುವ ಅನೇಕ ಫೋಟೋ ಮತ್ತು ವಿಡಿಯೋಗಳನ್ನು ಹಂಚಿಕೊಂಡಿದೆ.
ಆದರೆ ಇದೇ ಮೊದಲ ಬಾರಿಗೆ ವಿಕ್ರಮ್ ಲ್ಯಾಂಡರ್ ಇಳಿದ ಸ್ಥಳವಾದ ಶಿವಶಕ್ತಿ ಪಾಯಿಂಟ್ ಪೋಟೋ ಹಂಚಿಕೊಂಡಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಇಸ್ರೋ, ಇಸ್ರೋ, ‘ಸ್ಮೈಲ್ ಪ್ಲೀಸ್!’ ರೋವರ್ ವಿಕ್ರಮ್ ಲ್ಯಾಂಡರ್ನ ಚಿತ್ರವನ್ನು ಕ್ಲಿಕ್ಕಿಸಿದೆ. ರೋವರ್ನಲ್ಲಿನ ನ್ಯಾವಿಗೇಷನ್ ಕ್ಯಾಮೆರಾದಿಂದ ಮಿಷನ್ನ ಚಿತ್ರವನ್ನು ತೆಗೆಯಲಾಗಿದೆ.
ಚಂದ್ರಯಾನ-3 ಮಿಷನ್ಗಾಗಿ ನ್ಯಾವಿಗೇಷನ್ ಕ್ಯಾಮೆರಾಗಳನ್ನು ಲ್ಯಾಬೊರೇಟರಿ ಫಾರ್ ಎಲೆಕ್ಟ್ರೋ ಆಪ್ಟಿಕ್ಸ್ ಸಿಸ್ಟಮ್ಸ್ ಅಭಿವೃದ್ಧಿಪಡಿಸಿದೆ ಎಂದು ತಿಳಿಸಿದೆ.

ಇನ್ನು ಚಂದ್ರನ ಮೇಲೆ ಯಶಸ್ವಿಯಾಗಿ ಇಳಿದಿರುವ ವಿಕ್ರಮ್ ಲ್ಯಾಂಡರ್ 4 ಪೇಲೋಡ್ಗಳನ್ನು ಹೊಂದಿದೆ. ಇದು ಚಂದ್ರನ ಮೇಲ್ಮೈ ಪ್ಲಾಸ್ಮಾ ಸಾಂದ್ರತೆಯನ್ನು ಅಳೆಯಲು RAMBHA, ಮಣ್ಣಿನ ಉಷ್ಣ
ಗುಣಲಕ್ಷಣಗಳನ್ನು ಅಳೆಯಲು ChaSTE, ಲ್ಯಾಂಡಿಂಗ್ ಸೈಟ್ನ ಸುತ್ತಲಿನ ಭೂಕಂಪನವನ್ನು ಅಳೆಯಲು ILSA ಮತ್ತು ಚಂದ್ರನ ವ್ಯವಸ್ಥೆಯ ಡೈನಾಮಿಕ್ಸ್ ಅನ್ನು ಅರ್ಥಮಾಡಿಕೊಳ್ಳಲು LRA ಎಂಬ
ಪೇಲೋಡ್ಗಳನ್ನು ಹೊಂದಿದೆ. ಈ ಪೇಲೋಡ್ಗಳಿಂದ ಲಭ್ಯವಾಗುವ ಮಾಹಿತಿಯನ್ನು ಭೂಮಿಗೆ ಕಳುಹಿಸುತ್ತದೆ. ಚಂದ್ರನ ಮೇಲೆ ಅನೇಕ ಸಂಶೋಧನೆಗಳನ್ನು ಈ ವಿಕ್ರಮ್ ಲ್ಯಾಂಡರ್ನಲ್ಲಿರುವ
ಪೇಲೋಡ್ಗಳು ನಡೆಸುತ್ತಿವೆ. ಇನ್ನೊಂದೆಡೆ ಪ್ರಜ್ಞಾನ್ ರೋವರ್ , ವಿಕ್ರಮ್ ಲ್ಯಾಂಡರ್ನಿಂದ 8 ಮೀಟರ್ ಸುತ್ತಳತೆಯಲ್ಲಿ ಚಲಿಸುತ್ತಾ, ಅನೇಕ ಶೋಧನೆಗಳನ್ನು ನಡೆಸುತ್ತಿದೆ.