ಹಾಸನ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಅಶ್ಲೀಲ ವಿಡಿಯೋದಲ್ಲಿರುವ (Prajwal Revanna Sex Scandal Scam) ಪೋಲಿ–ಅಸಹ್ಯಕರ ದೃಶ್ಯಾವಳಿಗಳಲ್ಲಿ ಆಂಕರ್ಸ್ ಗಳಿದ್ದಾರೆನ್ನುವ
ಸುದ್ದಿ ಕೆಲದಿನಗಳಿಂದ ಹರಿದಾಡುತ್ತಲಿದೆ. ಆಕ್ಟರ್ಸ್–ಆಫೀಸರ್ಸ್ ಗಳ ಜತೆಗೆ ಆಂಕರ್ಸ್ ಗಳ ಹೆಸರು ಕೂಡ ಥಳಕು ಹಾಕಿಕೊಳ್ಳುತ್ತಿದೆ. ಪ್ರಜ್ವಲ್ ರೇವಣ್ಣ ಸಂಬಂಧಿ ಪೆನ್ ಡ್ರೈವ್ನ ವಿಚಾರದ ಬಗ್ಗೆ ವರದಿ
ಮಾಡುತ್ತಿರುವ ನ್ಯೂಸ್ ಚಾನೆಲ್ (News Channel) ಗಳಲ್ಲಿನ ಕೆಲವು ಆಂಕರ್ಸ್ ಗಳೇ ಪೆನ್ ಡ್ರೈವ್ ನಲ್ಲಿ ಬಂಧಿಯಾಗಿದ್ದಾರೆನ್ನುವುದು ಆಶ್ವರ್ಯದೊಂದಿಗೆ ಅಸಹ್ಯವನ್ನೂ ಮೂಡಿಸಿದೆ.

ಇದು ನಿಜವೇ ಆಗಿದ್ದರೆ ಮಾದ್ಯಮ ಲೋಕಕ್ಕೆ ಇದೊಂದು ಕಪ್ಪು ಚುಕ್ಕೆಯಾಗಬಲ್ಲಂಥ ವಿದ್ಯಾಮಾನ ಆಗಬಹುದೇನೋ..? ಏಕೆಂದರೆ ಪೋಲಿ ಹಾಗೂ ಅಸಹ್ಯಕರವಾದ ದೃಶ್ಯಗಳಲ್ಲಿ ಲಾಕ್ ಆಗುವಂಥ
ಅಸಹಾಯಕ ಸನ್ನಿವೇಶವೇನೂ ನಮ್ಮ ಆಂಕರ್ಸ್ಗಳಿಗೆ (Anchor) ಬಂದಿರಲು ಸಾಧ್ಯವೇ ಇಲ್ಲ. ಇದು ಗೊತ್ತಿದ್ದೇ ನಡೆದಿರಬಹುದಾದ ಪ್ರಜ್ಞಾ ಪೂರ್ವಕ ಪ್ರಮಾದಬಿಟ್ಟರೆ ಬೇರೆನೋ ಆಗಿರಲು ಸಾಧ್ಯವೇ
ಇಲ್ಲ ಹೀಗೆ ಮಾತನಾಡಿಕೊಳ್ಳುತ್ತಿದೆ (Prajwal Revanna Sex Scandal Scam) ಮಾದ್ಯಮ ಜಗತ್ತು.
ರಾಜ್ಯಾದ್ಯಂತ ಕೋಲಾಹಲವನ್ನೇ ಸೃಷ್ಟಿಸಿರುವುದರಿಂದ ಎಲ್ಲಾ ವೀಡಿಯೋ–ಫೋಟೋಗಳಂತೆ ಇದು ಕೂಡ ಬಹಿರಂಗವಾಗುವುದನ್ನೇ ರಾಜ್ಯ ಕುತೂಹಲದಿಂದ ಕಾಯುತ್ತಿದೆ. ಮಾದ್ಯಮಗಳಲ್ಲೂ ಕೂಡ
ಆ ಮಹಾನ್ ಆಂಕರ್ಸ್ ಗಳು ಯಾರೆನ್ನುವ ಕೌತುಕವಿದೆ. ಆದರೆ ಪೆನ್ ಡ್ರೈವ್ (Pen drive) ನಲ್ಲಿ ಬೆತ್ತಲಾಗಿರಬಹುದಾದ ಆಂಕರ್ಸ್ ಗಳಿಗೆ ಮಾತ್ರ ಎದೆಯಲ್ಲಿ ಢವ ಢವ ಶುರುವಾಗಿದೆ. ಈ ಹಿಂದೆ ಅನೇಕ
ವಿದ್ಯಾಮಾನ ಗಳಲ್ಲಿ ಇದು ನಡೆದೋಗಿದ್ದು, ಸುದ್ದಿ ಓದುವವರೇ ಸುದ್ದಿಯಾಗುತ್ತಿರುವುದು ಇದೇ ಮೊದಲೇನಲ್ಲ. ಆದರೆ ಸಂದರ್ಭ–ಸನ್ನಿವೇಶಕ್ಕೆ ವ್ಯತ್ಯಾಸವಿದೆ. ಇದನ್ನು ಮಾಮೂಲು ಘಟನೆ ಎಂದು ತಳ್ಳಿಹಾಕೊಕ್ಕೆ
ಸಾಧ್ಯವಿಲ್ಲ. ಸುದ್ದಿಕ್ಷೇತ್ರಕ್ಕೆ ಸಂಬಂಧಿಸಿದ್ದೆಂದು ಮುಚ್ಚಿ ಹಾಕಲಿಕ್ಕೂ ಸಾಧ್ಯವಿಲ್ಲ. .
ಪ್ರಜ್ವಲ್ ರೇವಣ್ಣನ ಖಾಸಗಿ ಪ್ರಪಂಚದಲ್ಲಿ ನಮ್ಮ ಆಂಕರ್ಸ್ ಗಳಿಗೇನು ಕೆಲಸ…? ತೆರೆ ಮೇಲೆ ನ್ಯೂಸ್ (News) ಓದಿಕೊಂಡು ಇರಬೇಕಾದ ಇವರು ಹೇಗೆ ಎಂಟ್ರಿ ಹೊಡೆದರೆನ್ನುವುದೇ ಆಶ್ಚರ್ಯ!
ಅನೇಕ ರಾಜಕಾರಣಿಗಳಿಗೆ ಅನೇಕ ಪತ್ರಕರ್ತೆಯರು ತೀರಾ ಸನಿಹ–ಸಾಮೀಪ್ಯದಲ್ಲಿರುವ ಬೆಳವಣಿಗೆಗಳ ಬಗ್ಗೆ ಹಿಂದಿನಿಂದಲೂ ಕೇಳಿದ್ದೇವೆ. ರಾಜಕಾರಣಿಗಳ ಖಾಸಗಿ ದರ್ಬಾರ್ ನಲ್ಲಿ ಸಖಿಯರಾಗಿ ಮೆರೆದು
ಅವರಿಂದ ಎಲ್ಲಾ ರೀತಿಯ ಸೌಲಭ್ಯ–ಸವಲತ್ತು ಪಡೆದು ಬದುಕನ್ನು ಭದ್ರಮಾಡಿಕೊಂಡ ಮಹಿಳಾ ಪತ್ರಕರ್ತೆಯರ ನೂರಾರು ಗಾಸಿಪ್ ಗಳು ಇವತ್ತಿಗೂ ಪತ್ರಿಕೋದ್ಯಮದ ಪಡಸಾಲೆಯಲ್ಲಿ ಕೇಳುತ್ತಲೇ ಇರುತ್ತೆ.

ಪೆನ್ ಡ್ರೈವ್ ನಲ್ಲಿ ಆಂಕರ್ಸ್ ಗಳದ್ದೂ ಇದೆ ಎನ್ನುವ ಸುದ್ದಿ ಎಲ್ಲೆಡೆ ಹಬ್ಬುತ್ತಿದ್ದಂತೆ ಇಡೀ ಮಾದ್ಯಮ ನಾಚಿಕೆಯಿಂದ ಕೇಳುತ್ತಿರುವುದೇ ಇಂತದೊಂದಿಷ್ಟು ಪ್ರಶ್ನೆಗಳನ್ನು..ಆದ್ರೆ ಅವರೆಲ್ಲಾ ಯಾರು ಎನ್ನುವುದು
ಬಹಿರಂಗವಾದ ಮೇಲೆ ಅದಕ್ಕೆ ಸಂಬಂಧಿಸಿದಂತೆ ನಡೆಯುವ ತನಿಖೆಯಿಂದಲೇ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಸಿಗಬಹುದೇನೋ…? ಪೆನ್ ಡ್ರೈವ್ ನಲ್ಲಿ ಆಂಕರ್ಸ್ ಗಳ (Sex Scandal Scam) ಹಸಿಬಿಸಿ ದೃಶ್ಯ-
ಚಿತ್ರಗಳಿವೆ ಎನ್ನುವುದು ತನಿಖೆಯಿಂದ ದೃಢಪಟ್ಟಿದ್ದೇ ಆದಲ್ಲಿ ,ಪ್ರಜ್ವಲ್ ಗೂ., ಆಂಕರ್ಸ್ಗೂ ಏನ್ ಸಂಬಂಧ..ಅವರ ನಡುವೆ ಸಂಪರ್ಕ ಸೃಷ್ಟಿಯಾಗಿದ್ದಾದರೂ ಹೇಗೆ..ಯಾವಾಗ..? ಅಂತದ್ದೊಂದು ಸಲಿಗೆ-ಆತ್ಮೀಯತೆ
ಬೆಳೆಯೊಕ್ಕೆ ಕಾರಣವಾದ ಸನ್ನಿವೇಶವಾದ್ರೂ ಏನಿರಬಹುದು..ಆ ಸಂಬಂಧ-ಸಂಪರ್ಕ ಎಷ್ಟು ವರ್ಷಗಳದ್ದಾಗಿರಬಹುದು.,? ಎಷ್ಟರ ಮಟ್ಟಿಗೆ ಗಾಢವಾಗಿದ್ದಿದಿರಬಹುದು? ಅದು ಕೊಡುಕೊಳ್ಳುವಿಕೆ ವರೆಗೆ
ಮುಂದುವರೆಯುತ್ತೆ ಎನ್ನುವುದಾದ್ರೆ ಅದು ಬೆಳೆದ್ದಾದರೂ ಹೇಗೆ.? ಹೀಗೆ ಸಾಕಷ್ಟು ಪ್ರಶ್ನೆಗಳು ಮೂಡೋದು ಸಹಜ.
ಟಿವಿ ಪರದೆಗಳ ಮೇಲೆ ತಮ್ಮದೇ ಆದ ಸ್ಟೈಲ್-ಮ್ಯಾನರಿಸಂ ಮೂಲಕ ನೋಡುಗರನ್ನು ಆಕರ್ಷಿಸುವ ಆಂಕರ್ಸ್ ಗಳು ಹಿಂದೆಯೂ ಇದ್ದರು..ಈಗಲೂ ಇದ್ದಾರೆ..ಮುಂದೆಯೂ ಇರಲಿದ್ದಾರೆ.ಅವರ ಪೈಕಿ ಆ
ಆಕರ್ಷಣೆಯನ್ನು ಕೇವಲ ತೆರೆಯ ಮೇಲಿನ ಕರ್ತವ್ಯಕ್ಕಷ್ಟೇ ಸೀಮಿತಗೊಳಿಸಿಕೊಂಡು ಕೆಲಸ ಮಾಡುವವರೊಂದು ವರ್ಗವಾದ್ರೆ, ಇನ್ನು ಕೆಲವರು ಹಳ್ಳಕ್ಕೆ ಬೀಳಿಸಿಕೊಳ್ಳೋವರೆಗಿನ ಹಿತಾಸಕ್ತಿಗೂ ಬಳಸಿಕೊಳ್ಳುವ
ವರ್ಗ ಮತ್ತೊಂದು. ಬಹುಷಃ ಪ್ರಜ್ವಲ್ ಪೆನ್ ಡ್ರೈವ್ ನಲ್ಲಿದ್ದಾರೆನ್ನಲಾಗುತ್ತಿರುವ ಆಂಕರ್ಸ್ ಗಳು ಎರಡನೇ ಕೆಟಗರಿಗೆ ಸೇರುವವರಾಗಿರಬಹುದೆನ್ನುವುದರಲ್ಲಿ ಯಾವುದೇ ಅತಿಶಯವಿಲ್ಲ.
ಆಂಕರ್ಸ್ ಗಳ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ವೇದಿಕೆ ಕಲ್ಪಿಸಿಕೊಟ್ಟಿರುವ ಈ ಪೆನ್ ಡ್ರೈವ್ ನಲ್ಲಿರುವವರ ಹೆಸರುಗಳು ಆದಷ್ಟು ಶೀಘ್ರ ಬಯಲಾಗಲೇಬೇಕಿದೆ. ಇಲ್ಲವಾದಲ್ಲಿ ಒಂದಿಬ್ಬರು ಮಾಡಿಕೊಂಡ
ಯಡವಟ್ಟಿನಿಂದ ಎಲ್ಲಾ ಆಂಕರ್ಸ್ ಸಮುದಾಯದ ಮೇಲೂ ಕೆಟ್ಟ ಹೆಸರು ಬರುವಂತಾಗಬಹುದು.ತಾವಾಯ್ತು ತಮ್ಮ ಕೆಲಸವಾಯ್ತೆಂದು ಪ್ರಾಮಾಣಿಕತೆ ಹಾಗೂ ಶೃದ್ಧೆಯಿಂದ ಕೆಲಸ ಮಾಡುತ್ತಿರುವ ಬಹುತೇಕ
ಆಂಕರ್ಸ ಗಳು ತಲೆ ಎತ್ತಿಕೊಂಡು ಅಡ್ಡಾಡದಂಥ ಪರಿಸ್ಥಿತಿ ನಿರ್ಮಾಣವಾಗಬಹುದು
ಇದನ್ನು ಓದಿ: ಆಸ್ಪತ್ರೆಗೆ ದಾಖಲಾದ ಕರ್ನಾಟಕದ ಮಾಜಿ ಸಿಎಂ ಎಸ್ಎಂ ಕೃಷ್ಣ!