ಕೇರಳ ಸರ್ಕಾರ ಅಯ್ಯಪ್ಪಸ್ವಾಮಿ ಭಕ್ತರಿಗೆ ಸರಿಯಾದ ವ್ಯವಸ್ಥೆ ಮಾಡಿಕೊಡುತ್ತಿಲ್ಲ: ಪ್ರಮೋದ್ ಮುತಾಲಿಕ್ ಕಿಡಿ

Chikkodi: ಕರ್ನಾಟಕ #Karnataka ಸರ್ಕಾರವು ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳ ನೆರವಿಗೆ ನಿಲ್ಲಬೇಕಿದ್ದು, ಕೇರಳದ ಸರ್ಕಾರದೊಂದಿಗೆ ಮಾತನಾಡಿ ಮೂಲಭೂತ ವ್ಯವಸ್ಥೆ ಒದಗಿಸಿಕೊಡಬೇಕು ಎಂದು ಕರ್ನಾಟಕ ಸರ್ಕಾರ ಕೇರಳ ಸರ್ಕಾರದೊಂದಿಗೆ ಮಾತನಾಡಿ ಬಗೆಹರಿಸಬೇಕು ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ @PramodMuthalik ಆಗ್ರಹಿಸಿದರು.

ನಮ್ಮ ದೇಶ ಆದ್ಮಾತಿಕ ದೇಶ. ಇಡೀ ದೇಶದಲ್ಲಿ ದೇವಸ್ಥಾನಗಳು, ದೇವರ ಕ್ಷೇತ್ರಗಳು ಬಹಳಷ್ಟಿವೆ. ವಿಷೇಶವಾಗಿ ದಕ್ಷಿಣ ಭಾರತದಲ್ಲಿ ತಿರುಪತಿ ತಿಮ್ಮಪ್ಪನಷ್ಟೇ ಪ್ರಖ್ಯಾತಿ ಪಡೆದಿರೋ ಅಯ್ಯಪ್ಪ ದೇವಸ್ಥಾನ #AyyappaTemple ಇದೆ. ಆರು ರಾಜ್ಯಗಳಿಂದ ಐದು ಕೋಟಿ‌ ಜನರು ಅಲ್ಲಿ ಭೇಟಿ ನೀಡ್ತಾರೆ ಆದರೆ ಅಲ್ಲಿ ಹೋಗುವೆ ಅಯ್ಯಪ್ಪ ಸ್ವಾಮಿ ಭಕ್ತದಿಗಳಿಗೆ ಯಾವುದೇ ರೀತಿ ಸೌಲಭ್ಯವನ್ನು ಕೊಡದೆ ಕೇರಳ ಸರ್ಕಾರ @KeralaGovt ಶೋಷಣೆ ಮಾಡುತ್ತಿದೆ ಎಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಆಕ್ರೋಶ ವ್ಯಕ್ತಪಡಿಸಿದರು..

ಸರಿಯಾದ ವ್ಯವಸ್ಥೆ ಮಾಡದ ಕೇರಳ ಸರ್ಕಾರ
ಅಯ್ಯಪ್ಪ ದೇವಸ್ಥಾನದಲ್ಲಿ ಮೂರು ಸಾವಿರ ಕೋಟಿ ರೂಗಿಂತಲೂ ಆದಾಯ ಜಾಸ್ತಿ ಇದೆ. ಪಾರ್ಕಿಂಗ್ (Parking) ಒಂದು ಕೋಟಿ ವಾಹನಗಳಾಗುತ್ತವೆ. ಒಂದು ವಾಹನಕ್ಕೆ ನಲವತ್ತು ರೂಪಾಯಿ ತೆಗೆದುಕೊಳ್ತಾರೆ. ಎಲ್ಲ ಮೂಲಗಳಿಂದ ಮೂರು ಸಾವಿರ ಕೋಟಿಗಿಂತಲೂ ಅಧಿಕವಾಗುತ್ತದೆ. ಕೇರಳದಲ್ಲಿರುವ ಸರ್ಕಾರ ನಾಸ್ತಿಕ ಸರ್ಕಾರ. ದೇವರನ್ನು ನಂಬದಂತಹ ಸರ್ಕಾರ. ಐದು ಕೋಟಿ ಭಕ್ತರಿಗೆ ಅನೂಕೂಲವಾಗುವಂತಹ ಸೌಕರ್ಯ ಒದಗಿಸಿ ಕೊಡ್ತಿಲ್ಲ.

ಕೇರಳ ಸರ್ಕಾರ ದೇವಸ್ಥಾನದ ಆದಾಯವನ್ನು ತಮ್ಮ ಉಪಯೋಗಕ್ಕೆ ಬಳಸಿಕೊಳ್ಳುತ್ತಿದ್ದು, ದೇವಸ್ಥಾನ ಮಂಡಳಿಯನ್ನು ಆ ಸರ್ಕಾರ ಹೆದರಿಸುವ ಕೆಲಸ ಮಾಡ್ತಿದೆ ಎಂದು ಮುತಾಲಿಕ್ ಆರೋಪಿಸಿದ್ದು, ಇಷ್ಟೆಲ್ಲಾ ತೊಂದರೆ ಅನುಭವಿಸುತ್ತಿರುವ ಅಯ್ಯಪ್ಪ ಮಾಲಾಧಾರಿಗಳಿಗೆ (Ayyappaswamy Devotees) ಕರ್ನಾಟಕ ಸರ್ಕಾರ ನೆರವಿಗೆ ನಿಲ್ಲಬೇಕು ಎಂದು ಹೇಳಿದರು.

ಭಕ್ತರ ಅನುಕೂಲಕ್ಕಾಗಿ ಸಾವಿರಾರು ಕೋಟಿ ಆದಾಯದ ಸಂಪೂರ್ಣ ಹಣ ಉಪಯೋಗಿಸಬೇಕು. ಅನ್ನವಿತರಣೆ ಕಾರ್ಯಕ್ರಮ ಈ ಹಿಂದೆ ಇದ್ದಂತೆ ನಡೆಯಬೇಕು. ಹಿಂದೂ ಸಂಘಟನೆಗಳು ಅನ್ನದಾನವನ್ನು ಉಚಿತವಾಗಿ ಮಾಡುತ್ತಿದ್ದರು. ಆದರೆ ಕೇರಳ ಸರ್ಕಾರ ನಿಷೇಧಿಸಿದ್ದು, ಪೊಲೀಸ್ ವ್ಯವಸ್ಥೆಗೆ ಕೊಟ್ಟಿದೆ ಇದರಿಂದಾಗಿ ಅನೇಕ ಭಕ್ತಾಧಿಗಳಿಗೆ ಊಟ ಸಿಗುತ್ತಿಲ್ಲ ಎಂದರು.

ಭವ್ಯಶ್ರೀ ಆರ್ ಜೆ

Exit mobile version