ಪ್ರಶಾಂತ್ ನೀಲ್ ಚಿತ್ರದಲ್ಲಿ ಪ್ರಭಾಸ್!

ಕೆಜಿಎಫ್ ಎರಡನೇ ಭಾಗದ ಬಳಿಕ ಪ್ರಶಾಂತ್ ನೀಲ್ ಚಿತ್ರದಲ್ಲಿ ಪ್ರಭಾಸ್ ನಟಿಸುವುದಾಗಿ ಘೋಷಣೆಯಾಗಿತ್ತು. ಇವತ್ತು ಮಧ್ಯಾಹ್ನ ಚಿತ್ರದ ಹೆಸರನ್ನು ಘೋಷಣೆ ಮಾಡಲಾಗಿದೆ. ವಿಶೇಷ ಎಂದರೆ ಚಿತ್ರದ ಕೆಜಿಎಫ್ ನಿರ್ಮಾಪಕ‌ ವಿಜಯ್ ಕಿರಗಂದೂರ್ ಅವರೇ ತಮ್ಮ ಹೊಂಬಾಳೆ ಫಿಲ್ಮ್ಸ್ ಮೂಲಕ ಈ‌ ಚಿತ್ರ ನಿರ್ಮಿಸುತ್ತಿದ್ದಾರೆ.

Salaar ಎನ್ನುವ ಇಂಗ್ಲಿಷ್ ಪೋಸ್ಟರ್ ಇಂದು ಮಧ್ಯಾಹ್ನ ಎರಡು ಗಂಟೆ ಒಂಬತ್ತು ನಿಮಿಷಕ್ಕೆ ಬಿಡುಗಡೆಯಾಗಿದೆ. ಇದನ್ನು ಹೇಗೆ ಉಚ್ಚರಿಸಬೇಕು, ಏನು ಅರ್ಥ ಎನ್ನುವುದನ್ನು ಸ್ವತಃ ನಿರ್ದೇಶಕ ಪ್ರಶಾಂತ್ ಅವರೇ ಹೇಳಬೇಕು. ಗೂಗಲ್ ಮಾಡಿದಾಗ ಇದು ಮುಸಲ್ನಾನ ಹುಡುಗನ ಹೆಸರು ಎಂದು ಅರ್ಥ ನೀಡುತ್ತದೆ. ಉರ್ದುವಿನಲ್ಲಿ ಸಲಾರ್ ಎಂದರೆ ಲೀಡರ್ ಎಂದು ಅರ್ಥವಂತೆ. ಚಿತ್ರದಲ್ಲಿ ಪ್ರಭಾಸ್ ಮುಸಲ್ಮಾನನಾಗಿ ಕಾಣಿಸುತ್ತಾರ ಎನ್ನುವುದು ಮುಂದೆ ತಿಳಿಯಬೇಕಿದೆ. ಜನವರಿಯಿಂದ ಚಿತ್ರೀಕರಣ ಶುರುವಾಗಲಿರುವ ಈ ಸಿನಿಮಾ ಕೂಡ ಪ್ಯಾನ್ ಇಂಡಿಯಾ ಚಿತ್ರವಾಗಿ ಮೂಡಿ ಬರಲಿದೆಯಂತೆ.

Exit mobile version