ಕರ್ನಾಟಕ ಬಂದ್ ಆಗುತ್ತಾ ಇಲ್ವಾ ? ಕಾರಣ ಇಲ್ಲಿದೆ ನೋಡಿ

 ಬೆಂಗಳೂರು: ಡಿಸೆಂಬರ್‌ 31ರಂದು ಹಲವು ಕನ್ನಡ ಪರ ಸಂಗಟನೆಗಳು ಬಂದ್‌ ಗೆ ಕರೆ ನೀಡಿದ್ದವು ಆದರೆ ಇದೀಗ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಬಣವೂ ಸೇರಿದಂತೆ ಕೆಲವು ಸಂಘಟನೆಗಳು ಬಂಧ್‌ ಮುಂದೂಡುವಂತೆ ಮನವಿಮಾಡಿವೆ. ಎಂಇಎಸ್ ಪುಂಡಾಟಿಕೆ ಖಂಡಿಸಿ ಕನ್ನಡಪರ ಸಂಘಟನೆಗಳು ಡಿಸೆಂಬರ್ 31ರಂದು ಕರ್ನಾಟಕ ಬಂದ್ ಗೆ ಕರೆ ನೀಡಿದ್ದವು. ಈ ಕರ್ನಾಟಕ ಬಂದ್ ಗೆ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿಯವರೂ ( Karave Praveen Shetty ) ಬೆಂಬಲ ಘೋಷಿಸಿದ್ದರು. ಆದ್ರೇ.. ಇದೀಗ ಅವರು ಕರ್ನಾಟಕ ಬಂದ್ ( Karnataka Bundh ) ಮುಂದೂಡುವಂತೆ ಕನ್ನಡಪರ ಸಂಘಟನೆಗಳಿಗೆ ಪತ್ರ ಬರೆದು ಕೋರಿದ್ದಾರೆ.

ಈ ನಡುವೆ ಕನ್ನಡಪರ ಸಂಘಟನೆಗಳಿಗೆ ಪತ್ರ ಬರೆದಿರುವಂತ ಕರವೇ ಪ್ರವೀಣ್ ಶೆಟ್ಟಿಯವರು, ಡಿಸೆಂಬರ್ 31ರಂದು ಕರೆ ನೀಡಿರುವಂತ ಕರ್ನಾಟಕ ಬಂದ್ ಗೆ ಬಹುಮುಖ್ಯವಾಗಿ ಬೆಳಗಾವಿಯ ಕ್ರಿಯಾ ಸಮಿತಿಯೇ ಬೆಂಬಲ್ ನೀಡಿಲ್ಲ. ಹೀಗಿದ್ದೂ ನಾವು ರಾಜ್ಯದಲ್ಲಿ ಬಂದ್ ಮಾಡಿದ್ರೂ ಅಷ್ಟೇನು ಪರಿಣಾಮ ಬೀರೋದಿಲ್ಲ ಎಂಬುದಾಗಿ ಅಭಿಪ್ರಾಯ ಪಟ್ಟಿದ್ದಾರೆ. ಇನ್ನೂ ವರ್ಷದ ಕೊನೆಯ ದಿನದಲ್ಲಿ ಕರ್ನಾಟಕ ಬಂದ್ ನಡೆಸುತ್ತಿರೋದಕ್ಕೆ ಸಾರ್ವಜನಿಕರು ತೀವ್ರ ವಿರೋಧ ವ್ಯಕ್ತ ಪಡಿಸಿದ್ದಾರೆ. ಕೊರೋನಾದಿಂದ ವ್ಯಾಪಾರಸ್ಥರು ತೀವ್ರ ಸಂಕಷ್ಟದಲ್ಲಿದ್ದಾರೆ. ಇದೇ ಸಂದರ್ಭದಲ್ಲಿ ವರ್ಷದ ಕೊನೆಯ ದಿನದಂದು ಒಳ್ಳೆಯ ವ್ಯಾಪಾರದ ನಿರೀಕ್ಷೆಯಲ್ಲಿದ್ದಾರೆ. ಕರ್ನಾಟಕ ಬಂದ್ ಡಿಸೆಂಬರ್ 31ರಂದು ಮಾಡೋದರಿಂದ ತೊಂದರೆ ಉಂಟಾಗಲಿದೆ ಎಂದಿದ್ದಾರೆ.

ಈ ಎಲ್ಲಾ ಕಾರಣದಿಂದಾಗಿ ಡಿಸೆಂಬರ್ 31ರ ಕರ್ನಾಟಕ ಬಂದ್ ಮುಂದೂಡುವಂತೆ ಪತ್ರದಲ್ಲಿ ಮನವಿ ಮಾಡಿರುವ ಅವರು, ಸಾರ್ವಜನಿಕರ ವಿರೋಧ ಬಂದ್ ಗೆ ಇರೋದ್ರಿಂದ ಕರ್ನಾಟಕ ಬಂದ್ ಮುಂದೂಡುವಂತೆ ಮನವಿ ಮಾಡಿ, ಬಂದ್ಗೆ ಮುಂಚೂಣಿಯಲ್ಲಿದ್ದಂತ ಕರವೇ ಪ್ರವೀಣ್ ಶೆಟ್ಟಿಬಣ ಬಂದ್‌ ಮುಂದೂಡುವಂತೆ ಸಲಹೆನೀಡಿದೆ

Exit mobile version