ಹನೂರು, ಡಿ. 05: ಪ್ರೀತಿಸಿ ಮದುವೆಯಾಗಲೂ ಸಿದ್ದವಾಗಿದ್ದ ಪ್ರೇಮಿಗಳ ಮೇಲೆ ಯುವತಿಯ ತಂದೆ ಹಾಗೂ ಅಣ್ಣ ಮಚ್ಚಿನಿಂದ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಕೊಳ್ಳೇಗಾಲ ತಾಲೂಕಿನ ಪಿ.ಜಿ.ಪಾಳ್ಯದಲ್ಲಿ ಘಟನೆ ನಡೆದಿದ್ದು, ಘಟನೆಯಲ್ಲಿ ಗ್ರಾಮದ ಧನಲಕ್ಷ್ಮಿ(೨೪) ಮತ್ತು ಸತ್ಯ(೨೮) ಗಾಯಗೊಂಡಿದ್ದಾರೆ. ಕಳೆದ ಎರಡೂ ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದ ಇವರ ಮದುವೆಗೆ ಯುವತಿಯ ಮನೆಯವರಿಂದ ವಿರೋಧವಿತ್ತ ಎನ್ನಲಾಗಿದೆ.
ಆದರೆ ಮನೆಯವರ ವಿರೋಧದ ನಡುವೆಯೂ ಈ ಜೋಡಿ, ಮದುವೆಯಾಗಲು ಮುಂದಾಗಿದ್ದರು. ವಿಷಯ ತಿಳಿಯುತ್ತಿದ್ದಂತೆ ಕುಪಿತಗೊಂಡ ಯುವತಿಯ ತಂದೆ ಶಿವಸ್ಮಾಮಿ ಹಾಗೂ ಅಣ್ಣ ಮಹೇಂದ್ರ ಎಂಬುವರು, ಪ್ರೇಮಿಗಳ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದು, ಈ ಘಟನೆಯಲ್ಲಿ ಯುವತಿಯ ನಾಲ್ಕು ಬೆರಳುಗಳು ತುಂಡಾಗಿವೆ. ಘಟನೆಯಲ್ಲಿ ಗಾಯಗೊಂಡಿರುವ ಯುವತಿ ಕೊಳ್ಳೇಗಾಲ ಉಪ ವಿಭಾಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ಸಂಬಂಧ ಹನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.