ಬೆಂಗಳೂರಲ್ಲಿ ಶ್ರೀಮಂತರಿಗಾಗಿ ಪ್ರೀಮಿಯಂ ಬಸ್‌ ಸಂಚಾರ ಆರಂಭಿಸಲು ಒತ್ತಾಯ: ಆಮ್‌ ಆದ್ಮಿ ಪಕ್ಷ

Bengaluru: ಟ್ರಾಫಿಕ್‌ (Traffic) ಹಾಗೂ ಮಾಲಿನ್ಯ ನಿಯಂತ್ರಣದ ದೃಷ್ಟಿಯಲ್ಲಿ ಶ್ರೀಮಂತ ವರ್ಗದವರು (Premium Bus Service in Blore) ಕಾರ್‌ ಬಿಟ್ಟು ಸಾರ್ವಜನಿಕ ವಾಹನದಲ್ಲಿ

ಓಡಾಡುವಂತಾಗಲು ದೆಹಲಿ ಮಾದರಿಯ ಪ್ರೀಮಿಯಂ ಬಸ್‌ಗಳ ಸಂಚಾರವನ್ನು ಬೆಂಗಳೂರಿನಲ್ಲೂ (Bengaluru) ಆರಂಭಿಸಬೇಕು ಎಂದು ಆಮ್‌ ಆದ್ಮಿ ಪಕ್ಷ ಒತ್ತಾಯಿಸಿದೆ.

ಪ್ರೀಮಿಯಂ ಬಸ್‌ ಅಗ್ರಿಗೇಟರ್‌ (Premium Bus Aggregator) ಪಾಲಿಸಿ 2023ಗೆ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್‌ (Aravind Kejriwal) ಸರ್ಕಾರವು ಅನುಮೋದನೆ ನೀಡಿದ್ದು,

ಈ ಮೂಲಕ ಬಸ್‌ಗಳಲ್ಲಿ ಸಂಚರಿಸುವಂತೆ ಬಡತನ ರೇಖೆಗಿಂತ ಮೇಲಿರುವ ಮಧ್ಯಮ ವರ್ಗ ಹಾಗೂ ಶ್ರೀಮಂತ ವರ್ಗದವರನ್ನು ಉತ್ತೇಜನ ನೀಡುವ ಸಲುವಾಗಿ ಆ್ಯಪ್‌ ಆಧಾರಿತ ಆನ್‌ಲೈನ್‌ ಬಸ್‌

(Online Bus) ಸೇವೆ ಯೋಜನೆಯನ್ನು ಆರಂಭಿಸಲಾಗಿದ್ದು, ಇ-ವಾಹನಗಳ ಬಳಕೆಗೆ ಉತ್ತೇಜನ ನೀಡುತ್ತಿದೆ. ರಾಜ್ಯಪಾಲರ ಅನುಮೋದನೆ ಸಿಗುತ್ತಿದ್ದಂತೆ ಪ್ರೀಮಿಯಂ ಬಸ್‌ ಸೇವೆಗೆ ಚಾಲನೆ ಸಿಗಲಿದೆ.

ಬಡವರು ಮತ್ತು ಬಡ ಮಧ್ಯಮ ವರ್ಗದವರು ಬಸ್‌ಗಳಲ್ಲಿ ಸಂಚರಿಸುತ್ತಾರೆ ಎಂದು ಈ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಪಕ್ಷದ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್‌ ವಿ ಸದಂ

(Jagadeesh V Sadam) ಅವರು ತಿಳಿಸಿದರು. ಹಾಗೆಯೇ ತಮ್ಮ ಖಾಸಗಿ ವಾಹನಗಳನ್ನು ಬಿಟ್ಟು ಮಧ್ಯಮ ವರ್ಗದವರು ಮತ್ತು ಶ್ರೀಮಂತ ವರ್ಗದವರು ಬಸ್‌ಗಳಲ್ಲೇ ದಿನನಿತ್ಯ ಓಡುವಂತೆ

ಉತ್ತೇಜನ ನೀಡುವ ಸಲುವಾಗಿ ದೆಹಲಿ (Delhi) ಮಾದರಿಯ ಪ್ರೀಮಿಯಂ ಬಸ್‌ಗಳ ಸೇವೆಯನ್ನು ರಾಜ್ಯದ ಬೆಂಗಳೂರಿನಂತಹ ನಗರಗಳಲ್ಲಿ ಆರಂಭಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ

(Siddaramaiah), ಡಿಸಿಎಂ ಡಿ.ಕೆ.ಶಿವಕುಮಾರ್‌ ಹಾಗೂ ಸಾರಿಗೆ ಸಚಿವ ರಾಮಲಿಂಗರೆಡ್ಡಿ (Ramalingareddy) ಅವರನ್ನು ಒತ್ತಾಯಿಸಿದರು.

ಪ್ರೀಮಿಯಂ ಬಸ್‌ಗಳಲ್ಲಿ ಆನ್‌ಲೈನ್‌ ಮೂಲಕ ಸೀಟ್‌ ಕಾಯ್ದಿರಿಸುವುದು ಹಾಗೂ ಪೇಮೆಂಟ್‌ ಮಾಡುವ ಅವಕಾಶವಿದ್ದು, ನಿಂತು ಪ್ರಯಾಣಿಸುವುದಕ್ಕೆ ಅವಕಾಶವಿಲ್ಲ. ಎಲ್ಲರಿಗೂ ಆಸನ ಸಿಗಲಿದೆ. ಬಸ್‌ ಒಳಗೆ

ಟಿಕೆಟ್‌ (Ticket) ಹರಿಯುವ ಸಂಪ್ರದಾಯ ಇರುವುದಿಲ್ಲ. ನೂಕುನುಗ್ಗಲು, ಅನವಶ್ಯಕ ಗದ್ದಲ ಇರುವುದಿಲ್ಲ. ಸ್ವಂತ ಗಾಡಿಯಲ್ಲಿ ಆರಾಮದಾಯಕವಾಗಿ, ಅನುಕೂಲಕರವಾಗಿ ಪ್ರಯಾಣಿಸಿದಂತೆ ದಿನನಿತ್ಯ

ಓಡಾಡಬಹುದು ಎಂದು ಜಗದೀಶ್‌ (Premium Bus Service in Blore) ವಿವರಿಸಿದರು.

ವೈಫೈ (WIFI), ಜಿಪಿಎಸ್‌, ಸಿಸಿಟಿವಿ (CCTV) ಸೇರಿದಂತೆ ಲಕ್ಸೂರಿ ಖಾಸಗಿ ವಾಹನಗಳಲ್ಲಿರುವ ಎಲ್ಲ ರೀತಿಯ ವ್ಯವಸ್ಥೆಗಳನ್ನು ಒಳಗೊಂಡ ಆಧುನಿಕ ಬಸ್‌ಗಳು ಸಂಚಾರ ಆರಂಭಿಸಿದರೆ ಸ್ವಂತ

ಕಾರುಗಳನ್ನು ಬಿಟ್ಟು ಬಸ್‌ಗಳಲ್ಲೇ ಸಂಚರಿಸಲು ಆರಂಭಿಸುತ್ತಾರೆ. ಈ ಮೂಲಕ ಸಂಚಾರ ದಟ್ಟಣೆ, ವಾಯು ಮಾಲಿನ್ಯದಂತಹ ಪ್ರಮುಖ ಸಮಸ್ಯೆಗಳನ್ನು ಹತೋಟಿಗೆ ತರಬಹುದು.

ಇದನ್ನು ಓದಿ: ಚಳಿಗೆ ಚರ್ಮ ಒಡೆದು, ಡ್ರೈ ಆಗುವುದನ್ನು ತಡೆಯಲು ಇಲ್ಲಿದೆ ಉಪಯುಕ್ತ ಟಿಪ್ಸ್

Exit mobile version