ಇಳಿಕೆ ಕಂಡ ಚಿನ್ನ, ಬೆಳ್ಳಿ ದರ; ಭಾರತ, ಅಮೆರಿಕ, ದುಬೈ ದೇಶದಲ್ಲಿ ಎಷ್ಟಿದೆ ಚಿನ್ನ ಮತ್ತು ಬೆಳ್ಳಿ ದರ?

Bangalore :  ಭಾರೀ ಪ್ರಮಾಣದಲ್ಲಿ ಏರಿಕೆ ಕಂಡಿದ್ದ ಚಿನ್ನದ ಬೆಲೆ (Gold Price) ಇಂದು ಕೊಂಚ ಇಳಿಕೆ ಕಂಡಿದೆ. ಇತ್ತೀಚೆಗೆ ನೂರು ಗ್ರಾಮ್​ಗೆ ಐದು ಸಾವಿರ ರೂನಷ್ಟು ಏರಿಕೆಯಾಗಿತ್ತು. ಚಿನಿವಾರಪೇಟೆಯಲ್ಲಿ ನಿನ್ನೆ ಬೆಳಗ್ಗೆ ನಡೆದ ವಹಿವಾಟು ಬಳಿಕ ಚಿನ್ನದ ಬೆಲೆ ಮತ್ತೆ ಏರುಗತಿಗೆ ಹೋಗ ತೊಡಗಿತ್ತು.
ಆದರೆ  ಇಂದು ಏಪ್ರಿಲ್ 19ರಂದು ಚಿನ್ನ ಗ್ರಾಮ್​ಗೆ 9 ರೂನಷ್ಟು ಕುಸಿತ ಕಂಡಿದೆ. ಚಿನ್ನ ಎಂದರೆ ಯಾರಿಗೆ ಇಷ್ಟ ಇಲ್ಲ, ಮಹಿಳೆಯರಿಗೆ ಚಿನ್ನದ ಮೇಲೆ ವ್ಯಾಮೋಹವಾದರೆ ಪರುಷರಿಗೆ ಚಿನ್ನದ ಮೇಲೆ ಹೂಡಿಕೆ ಸುರಕ್ಷಿತ ಮಾರ್ಗವಾಗಿದೆ. ಚಿನ್ನಕ್ಕೆ ಮೊದಲಿನಿಂದಲೂ ಅಪಾರ ಬೇಡಿಕೆಯಿದೆ ಎನ್ನಬಹುದು.
ಭಾರತದಲ್ಲಿ ಮದುವೆ, ಮುಂಜಿಗಳಂತಹ ಶುಭ ಸಂದರ್ಭಗಳಲ್ಲಿ ಬಹುತೇಕರು ಚಿನ್ನ ಖರೀದಿ ಮಾಡುತ್ತಾರೆ ಅಷ್ಟೇ ಅಲ್ಲ ಚಿನ್ನ-ಬೆಳ್ಳಿ ಖರೀದಿಗೆಂದೇ ಮೀಸಲಾಗಿರುವ ಹಬ್ಬದ ದಿನವೂ ನಮ್ಮಲ್ಲಿದೆ.
ಜಾಗತಿಕವಾಗಿ ಆರ್ಥಿಕ ಪರಿಸ್ಥಿತಿ ಕುಗ್ಗಿರುವುದರಿಮದ ಹೂಡಿಕೆದಾರರಲ್ಲಿ ಚಿನ್ನದ ಮೇಲಿನ ಹೂಡಿಕೆ ಸುರಕ್ಷಿತ ಮಾರ್ಗ ಎಂದೆನಿಸಿದೆ ಮುಂದೆಯೂ ಆರ್ಥಿಕ ಸ್ಥಿತಿಯು (Financial status) ಗೊಂದಲಮಯ ಇರುವುದರಿಮದ ಚಿನ್ನದ ಮೇಲಿನ ಬೇಡಿಕೆ ಕಡಿಮೆ ಆಗುವ ಸಾಧ್ಯತೆ ಬಹಳ ಕಡಿಮೆ. ಈ ಹಿನ್ನೆಲೆಯಲ್ಲಿ ಚಿನ್ನದ ಬೆಲೆಯು ದಾಖಲೆ ಮಟ್ಟಕ್ಕೆ ಏರುವ ಸಾಧ್ಯತೆಗಳು ಹೆಚ್ಚಿವೆ.

ಇದನ್ನೂ ಓದಿ : https://vijayatimes.com/siddaramaiah-statement-2/

ಭಾರತದಲ್ಲಿ ಚಿನ್ನದ ದರವು ಸದ್ಯಕ್ಕೆ 22 ಕ್ಯಾರಟ್ 10 ಗ್ರಾಮ್​ನ ಬೆಲೆ 55,850 ರುಪಾಯಿ ಆಗಿದೆ. ಹಾಗೂ 24 ಕ್ಯಾರಟ್​  10 ಗ್ರಾಮ್‌ ಚಿನ್ನದ ಬೆಲೆ 60,920 ರುಪಾಯಿ ಆಗಿದೆ. ಬೆಳ್ಳಿ ಬೆಲೆ  100 ಗ್ರಾಮ್‌ಗೆ 7,740 ರುಪಾಯಿ ಇದೆ. 
ಚಿನ್ನದ ಬೆಲೆ ಏರಿಳಿತಕ್ಕೆ ಕಾರಣ ಏನಿರಬಹುದು?

ಅಮೆರಿಕದಲ್ಲಿರುವ  ಫೆಡರಲ್ ಬ್ಯಾಂಕು (Federal Bank) ಈ ಬಾರಿ ಬಡ್ಡಿ ದರವನ್ನು ಏರಿಕೆ ಮಾಡುವ ಸಾಧ್ಯತೆ ಇಲ್ಲ ಆದ್ದರಿಮದ ಚಿನ್ನದ ಮೇಲೆ ಮಾಡುವ ಹೂಡಿಕೆ ಹೆಚ್ಚುವ ಸಾಧ್ಯತೆ ಇದೆ. ಇದರಿಂದ ಮುಂದಿನ ದಿನಗಳಲ್ಲಿ ಚಿನ್ನದ ಬೆಲೆಯು ತುಟ್ಟಿಯಾಗುತ್ತಾ ಹೋಗಬಹುದು.

ಇದನ್ನೂ ಓದಿ : https://vijayatimes.com/sudeep-campaign-for-bommai/

ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ (ಏಪ್ರಿಲ್ 19ಕ್ಕೆ) :

ಬೆಂಗಳೂರಿನಲ್ಲಿ ಚಿನ್ನ ಮತ್ತುಬೆಳ್ಳಿ ಬೆಲೆ

 

ವಿವಿಧ ನಗರಗಳಲ್ಲಿ ಇರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)
Exit mobile version