ರಷ್ಯಾದ ಸ್ಪುಟ್ನಿಕ್‌ – ವಿ ಲಸಿಕೆಯ ಪ್ರತಿ ಶಾಟ್‌ಗೆ ದರ ನಿಗದಿ

ನವದೆಹಲಿ, ಮೇ. 14: ರಷ್ಯಾದಿಂದ ಆಮದು ಮಾಡಿಕೊಳ್ಳಲಾದ ಕೊರೊನಾ ಲಸಿಕೆ ಸ್ಪುಟ್ನಿಕ್​ – ವಿ ಪ್ರತಿ ಶಾಟ್​​ಗೆ 995.40 ರೂಪಾಯಿ ವೆಚ್ಚವಾಗಲಿದೆ ಎಂದು ರಾ.ರೆಡ್ಡೀಸ್​ ಔಷಧಾಲಯ ಘೋಷಣೆ ಮಾಡಿದೆ.

ಸ್ಪುಟ್ನಿಕ್​ ವಿ ಲಸಿಕೆಯ ಪ್ರತಿ ಡೋಸ್​ನ ಬೆಲೆ 948 ರೂಪಾಯಿ ಆಗಿದ್ದು ಇದಕ್ಕೆ 5 ಪ್ರತಿಶತ ಜಿಎಸ್​ಟಿ ಮೊತ್ತವನ್ನ ಸೇರಿಸಿ 995.40 ರೂಪಾಯಿ ನಿಗದಿಯಾಗಿದೆ. ಆದಾಗ್ಯೂ, ಭಾರತದಲ್ಲೇ ಲಸಿಕೆಯ ಡೋಸ್​ಗಳನ್ನ ತಯಾರು ಮಾಡಿದ್ದಲ್ಲಿ ಈ ದರವು ಕಡಿಮೆಯಾಗಲಿದೆ ಎನ್ನಲಾಗಿದೆ.

ಸ್ಪುಟ್ನಿಕ್​ ವಿ ಲಸಿಕೆಗಳು ಮುಂದಿನ ವಾರದಿಂದ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ ಎಂದು ಅಂದಾಜಿಸಲಾಗಿದೆ. ದೇಶದಲ್ಲಿ ಕೊರೊನಾ ಲಸಿಕೆಗೆ ಅಭಾವ ಉಂಟಾಗಿರೋದ್ರ ಬೆನ್ನಲ್ಲೇ ಗುರುವಾರ ಕೇಂದ್ರ ಸರ್ಕಾರ ಈ ಮಾಹಿತಿಯನ್ನ ನೀಡಿತ್ತು.

ಮುಂದಿನ ವಾರದಿಂದ ಸ್ಪುಟ್ನಿಕ್ ​- ವಿ ಲಸಿಕೆಗಳು ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ ಎಂದು ಘೋಷಣೆ ಮಾಡಲು ನನಗೆ ಖುಷಿ ಎನಿಸುತ್ತಿದೆ. ರಷ್ಯಾದಿಂದ ಬಂದಿರುವ ಸೀಮಿತ ಪೂರೈಕೆಯ ಲಸಿಕೆಗಳು ಮುಂದಿನ ವಾರದಿಂದ ಮಾರಾಟವಾಗಲಿದೆ ಎಂದು ಭಾವಿಸುತ್ತೇನೆ ಎಂದು ನೀತಿ ಆಯೋಗದ ವಿ.ಕೆ. ಪಾಲ್​ ಮಾಹಿತಿ ನೀಡಿದ್ದರು.

Exit mobile version