ಬಿಜೆಪಿ ಸರ್ಕಾರ ಹಲಾಲ್ ಕಟ್, ಹಿಜಾಬ್, ನಿರುದ್ಯೋಗ, ಭ್ರಷ್ಟಾಚಾರಕ್ಕೆ ಹೆಸರುವಾಸಿ : ಪ್ರಿಯಾಂಕ್ ಖರ್ಗೆ!

congress

ಕಾಂಗ್ರೆಸ್ ಶಾಸಕ(Congress MLA) ಪ್ರಿಯಾಂಕ್ ಖರ್ಗೆ(Priyank Kharghe) ಇತ್ತೀಚಿನ ದಿನಗಳಲ್ಲಿ ಬಿಜೆಪಿ ಸರ್ಕಾರದ(BJP Government) ಬೆಳವಣಿಗೆಗಳನ್ನು ಆಧಾರಿಸಿ ಅಂದಿನ ಕಾಂಗ್ರೆಸ್ ಸರ್ಕಾರ(Congress Government) ಅಧಿಕಾರದಲ್ಲಿದ್ದಾಗ ಹೇಗಿತ್ತು? ಇಂದು ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಪ್ರಸ್ತಾಪ ಮಾಡುವ ಮುಖೇನ ಬಿಜೆಪಿ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ಎರಡು ತಿಂಗಳ ಹಿಂದೆ ಪ್ರಾರಂಭವಾದ ಹಿಜಾಬ್ ವಿವಾದ ಇಡೀ ದೇಶವೇ ಕರ್ನಾಟಕವನ್ನು ತಿರುಗಿ ನೋಡುವಂತೆ ಮಾಡಿತು. ಹಿಜಾಬ್ ಮುಗಿಯುತ್ತಿದ್ದಂತೆ ಹಲಾಲ್ ಕಟ್ ಬಹಿಷ್ಕರಿಸಿ ಎಂಬ ವಿವಾದ ಹುಟ್ಟಿಕೊಂಡಿತು, ಇದರ ಬೆನ್ನಲ್ಲೇ ಮಾವಿನಹಣ್ಣು, ಮುಸ್ಲಿಂ ವಿಗ್ರಹ ಕೆತ್ತನೆಗಾರರಿಂದ ಖರೀದಿ ಮಾಡಬಾರದು ಅದನ್ನು ಬಹಿಷ್ಕರಿಸಿ ಎಂಬ ಆಗ್ರಹ ಕೇಳಿಬಂತು. ತದನಂತರ ಹುಬ್ಬಳ್ಳಿಯಲ್ಲಿ ಪೊಲೀಸ್ ಜೀಪ್ ಸೇರಿದಂತೆ ಕಲ್ಲು ತೂರಾಟ, ಕೋಮು ಗಲಭೆ ಘರ್ಷಣೆ ಇಷ್ಟು ವಿಷಯಗಳು ಒಂದರಂತೆ ಒಂದು ರಾಜ್ಯದಲ್ಲಿ ಅಶಾಂತಿಯನ್ನು ಸೃಷ್ಟಿಸುತ್ತಿದೆ.

ಸದ್ಯ ಈ ವಿಚಾರಗಳನ್ನು ಪ್ರಮುಖವಾಗಿ ಗುರಿಯಾಗಿಸಿಕೊಂಡ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ, ರಾಷ್ಟ್ರೀಯ ಕಾಂಗ್ರೆಸ್ ಕರ್ನಾಟಕ ಸರ್ಕಾರ ಆಡಳಿತದಲ್ಲಿದ್ದಾಗ ಕೇವಲ ಶಿಕ್ಷಣ, ಐಟಿ/ಬಿಟಿ ಹೊಸ ಆಯಾಮಗಳು, ಪ್ರಗತಿಪರ ನೀತಿಗಳು, ಆರ್ಥಿಕತೆ ಮತ್ತು ವಿದೇಶಿ ಹೂಡಿಕೆಗಳು, ಉದ್ಯೋಗ ಮತ್ತು ಸಂಸ್ಕೃತಿಗೆ ಹೆಚ್ಚು ಪ್ರಾಮುಖ್ಯತೆ ಕೊಟ್ಟಂತ ಸರ್ಕಾರ.

ಆದ್ರೆ, ಇಂದು ಬಿಜೆಪಿ ಸರ್ಕಾರದ ಆಡಳಿತದಲ್ಲಿ ಹಿಜಾಬ್, ಜಟ್ಕಾ ಕಟ್/ಹಲಾಲ್ ಕಟ್, ಅಜಾನ್, ಧ್ವನಿ ವರ್ಧಕ, ಭ್ರಷ್ಟಾಚಾರ, ನಿರುದ್ಯೋಗ ಮತ್ತು ಬಡತನಕ್ಕೆ ಕಾರಣವಾಗಿರುವಂತ ಸರ್ಕಾರ ಎಂದು ಟ್ವೀಟ್ ಮಾಡುವ ಮೂಲಕ ಪರೋಕ್ಷವಾಗಿ ಬಿಜೆಪಿ ಸರ್ಕಾರಕ್ಕೆ ಟಾಂಗ್ ಕೊಟ್ಟಿದ್ದಾರೆ.

Exit mobile version