ಪ್ರಿಯಾಂಕಾರ ಹೊಸ ಚಿತ್ರ 1980

ಸಾಮಾನ್ಯವಾಗಿ ನಾಯಕಿಯರು ಮದುವೆಯ ತನಕ ಎನ್ನುವ ಅಲಿಖಿತ ನಿಯಮ ಇತ್ತು. ಕನ್ನಡದ ಮಟ್ಟಿಗೆ ಒಬ್ಬ ಸ್ಟಾರ್ ನಟನ ಪತ್ನಿಯಾದರೂ ನಾಯಕಿಯಾಗಿಯೇ ಮುಂದುವರಿಯಬಲ್ಲೆ ಎನ್ನುವುದನ್ನು ತೋರಿಸಿಕೊಟ್ಟವರು ಪ್ರಿಯಾಂಕ ಉಪೇಂದ್ರ. ಅದರಲ್ಲಿಯೂ ವಿವಾಹದ ಬಳಿಕ ಅವರು ನಟಿಸುತ್ತಿರುವ ಚಿತ್ರಗಳು ನಾಯಕಿ ಪ್ರಾಧಾನ್ಯತೆ ಹೊಂದಿರುವುದು ಮತ್ತಷ್ಟು ವಿಶೇಷ. ಇದೀಗ ಅಂಥದೊಂದು ಹೊಸ ಚಿತ್ರದಲ್ಲಿ ನಟಿಸುತ್ತಿರುವುದಾಗಿ ತಿಳಿದು ಬಂದಿದೆ.

ಅಂದಹಾಗೆ ಕನ್ನಡದಲ್ಲಿ ಸಿನಿಮಾದ ಶೀರ್ಷಿಕೆಗಳ ಮೂಲಕವೇ ಗಮನ ಸೆಳೆದವರು ಉಪೇಂದ್ರ. ಇದೀಗ ಪ್ರಿಯಾಂಕ ಉಪೇಂದ್ರ ಅವರು ಕೂಡ ಬರೀ ಸಂಖ್ಯೆಗಳನ್ನಷ್ಟೇ ಹೊಂದಿರುವ ಚಿತ್ರವೊಂದರಲ್ಲಿ ನಾಯಕಿಯಾಗಿದ್ದಾರೆ. 1980' ಎನ್ನುವ ಶೀರ್ಷಿಕೆಯ ಚಿತ್ರದ ಶೂಟಿಂಗ್ ಇದೇ ಅಕ್ಟೋಬರ್ 28 ರಿಂದ ಆರಂಭವಾಗಲಿದೆ. ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರದ ಬಹುತೇಕ ಚಿತ್ರೀಕರಣ ಕೊಡಗಿನ‌ ಸುಂದರ ಪರಿಸರದಲ್ಲಿ ನಡೆಯಲಿದೆ.
ಸವಾರಿ 2′, ವಸಂತ ಕಾಲ',ಮಿಸ್ಡ್ ಕಾಲ್’, `ಪರಿಧಿ’ ಮುಂತಾದ ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿರುವ ರಾಜ್ ಕಿರಣ್ ಈ ಚಿತ್ರದ ನಿರ್ದೇಶಕರು. ಈ ಚಿತ್ರಕ್ಕೆ ಕಥೆ, ಚಿತ್ರಕಥೆಯನ್ನು ಕೂಡ ಇವರೇ ಬರೆದಿದ್ದಾರೆ.
ಪ್ರಿಯಾಂಕ ಅವರಲ್ಲದೆ ಈ ಚಿತ್ರದ ಉಳಿದ ತಾರಾಬಳಗದಲ್ಲಿ ಅರವಿಂದ್ ರಾವ್, ಶ್ರೀಧರ್, ಮುರಳಿ ಶರ್ಮ ಮುಂತಾದವರಿದ್ದಾರೆ.
ಆರ್ ಕೆ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಚಿಂತನ್ ವಿಕಾಸ್ ಸಂಗೀತ ನಿರ್ದೇಶನ, ಜೀವನ್ ಅಂತೋಣಿ ಛಾಯಾಗ್ರಹಣ ಹಾಗೂ ಶ್ರೀಕಾಂತ್ ಅವರ ಸಂಕಲನವಿದೆ.

Exit mobile version