3ನೇ ದಿನಕ್ಕೆ 230 ಕೋಟಿ ರೂ. ಕಲೆಕ್ಷನ್ ಕಂಡ ಮಣಿರತ್ನಂ ಚಿತ್ರ ಪೊನ್ನಿಯಿನ್ ಸೆಲ್ವನ್ -1

PS 1

PS1 : ನಿರ್ದೇಶಕ (Director) ಮಣಿರತ್ನಂ (Manirathnam) ಅವರ ಪೊನ್ನಿಯಿನ್ ಸೆಲ್ವನ್ ಭಾಗ- 1 (Ponniyin Selvan) ಚಿತ್ರವೂ ಬಾಕ್ಸ್ ಆಫೀಸ್ ನಲ್ಲಿ ಧೂಳೆಬಿಸುತ್ತಿದೆ.

ಕೇವಲ ಮೂರು ದಿನಗಳಲ್ಲಿ, ಚಿತ್ರವು ವಿಶ್ವದಾದ್ಯಂತ 230 ಕೋಟಿ ರೂಪಾಯಿಗಳನ್ನು ತಲುಪುವಲ್ಲಿ ಯಶಸ್ವಿಯಾಗಿದೆ (PS 1 Hits box office) ಮತ್ತು

ಇಂದು ಅಕ್ಟೋಬರ್ 3 ರಂದು 250 ಕೋಟಿ ರೂಪಾಯಿಗಳ ಗಡಿಯನ್ನು ದಾಟಿ ಮುನ್ನುಗ್ಗಲ್ಲಿದೆ ಎಂದು ಚಿತ್ರತಂಡ ಲೆಕ್ಕಾಚಾರ ಹಾಕಿಕೊಂಡಿದೆ.

ಚಿತ್ರವು ಬ್ಲಾಕ್ಬಸ್ಟರ್ ಕಡೆಗೆ ಸಾಗುತ್ತಿದೆ ಮತ್ತು ಇದು ಇದೇ ವೇಗದಲ್ಲಿ ಮುಂದುವರಿದರೆ ಲಾಭದ ಮಳೆಯಲ್ಲಿ ಚಿತ್ರ ತೇಲಾಡಲಿದೆ ಎಂದೇ ಹೇಳಬಹುದು.

ಪೊನ್ನಿಯಿನ್ ಸೆಲ್ವನ್ ಬಾಕ್ಸ್ ಆಫೀಸ್ ನಲ್ಲಿ ಹಲವು ದಾಖಲೆಗಳನ್ನು ಒಡೆಯುವ ಸಾಧ್ಯತೆ ಇದೆ ಎಂದು ಚಿತ್ರರಂಗದ ವಲಯ ಅಂದಾಜಿಸಿದೆ.

ಇದನ್ನೂ ಓದಿ : https://vijayatimes.com/sonia-gandhi-joins-bharat-jodo-yatra/

ಜಾಗತಿಕವಾಗಿ 230 ಕೋಟಿ ರೂಪಾಯಿ ದಾಟಿದ ಪೊನ್ನಿಯಿನ್ ಸೆಲ್ವನ್ ಮೊದಲ ಭಾಗವು ಅಭಿಮಾನಿಗಳ ಭಾರೀ ನಿರೀಕ್ಷೆ ಮೇರೆಗೆ ಸೆಪ್ಟೆಂಬರ್ 30 ರಂದು ಥಿಯೇಟರ್‌ಗಳಿಗೆ ಅಪ್ಪಳಿಸಿತು.

ಈ ಚಿತ್ರ ಜಗತ್ತಿನಾದ್ಯಂತ ಏಕಕಾಲಕ್ಕೆ ಐದು ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಟ್ರೇಡ್ ವಿಶ್ಲೇಷಕ ರಮೇಶ್ ಬಾಲಾ ಮಾಹಿತಿ ಪ್ರಕಾರ, ಪೊನ್ನಿಯಿನ್ ಸೆಲ್ವನ್ ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ.

ಈ ಚಿತ್ರವು ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 230 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ ಎಂದು ಹೇಳಿದ್ದಾರೆ.

ಸದ್ಯ ಅವರು ಮಾಡಿರುವ ಟ್ವೀಟ್ ನಲ್ಲಿ, 3-ದಿನದ ಆರಂಭಿಕ ವಾರಾಂತ್ಯದಲ್ಲಿ, #PS1 WW ಬಾಕ್ಸ್ ಆಫೀಸ್ ನಲ್ಲಿ 230 ರೂ. ಕೋಟಿಗಿಂತಲೂ ಹೆಚ್ಚು ಗಳಿಸಿದೆ. ಪೊನ್ನಿಯಿನ್ ಸೆಲ್ವನ್ ಐಮ್ಯಾಕ್ಸ್‌ನಲ್ಲೂ ಬಿಡುಗಡೆಯಾಗಿದೆ.

ಈ ಚಿತ್ರವು ವಿಶ್ವಾದ್ಯಂತ IMAX ಪರದೆಗಳಲ್ಲಿ ದಾಖಲೆಯನ್ನು ಸೃಷ್ಟಿಸಿದೆ.

ಭಾರತದಲ್ಲಿ IMAX ನಲ್ಲಿ ಸಾರ್ವಕಾಲಿಕ ನಂ.4 ಸ್ಥಾನ , ನಿರ್ದೇಶಕ ಮಣಿರತ್ನಂ ಅವರ ಪೊನ್ನಿಯಿನ್ ಸೆಲ್ವನ್ office) ಕಾದಂಬರಿಕಾರ ಕಲ್ಕಿ ಕೃಷ್ಣಮೂರ್ತಿ ಅವರ ಅದೇ ಹೆಸರಿನ ಐದು ಭಾಗಗಳ ಪುಸ್ತಕದ ರೂಪಾಂತರವಾಗಿದೆ.

ಚಿತ್ರದಲ್ಲಿ ನಟಿ ಐಶ್ವರ್ಯಾ ರೈ ಬಚ್ಚನ್, ಚಿಯಾನ್ ವಿಕ್ರಮ್, ಕಾರ್ತಿ, ತ್ರಿಶಾ ಮತ್ತು ಜಯಂ ರವಿ ಪ್ರಮುಖ ಪಾತ್ರಗಳಲ್ಲಿದ್ದಾರೆ.

https://youtu.be/RdRy9A08g3k

ಸಂಗೀತ ಮಾಂತ್ರಿಕ, ಸಂಯೋಜಕ ಎ. ಆರ್ ರೆಹಮಾನ್ ಅವರ ಸಂಗೀತವಿದ್ದು, ಛಾಯಾಗ್ರಾಹಕ ರವಿವರ್ಮನ್, ಸಂಕಲನಕಾರ ಶ್ರೀಕರ್ ಪ್ರಸಾದ್ ಮತ್ತು ನೃತ್ಯ ನಿರ್ದೇಶಕಿ ಬೃಂದಾ ತಾಂತ್ರಿಕ ಸಿಬ್ಬಂದಿಯ ಶ್ರಮ ಈ ಚಿತ್ರದ ಮುನ್ನೋಟವಾಗಿದೆ.
Exit mobile version