ಪುನೀತ್‌ ಸಾವಿಗೆ ಕಂಬನಿ ಮಿಡಿದ ಗಣ್ಯರು

ನಟ ಪುನೀತ್ ರಾಜ್ ಕುಮಾರ್ ಇಂದು ಬೆಳಿಗ್ಗೆ ಹೃದಯಾಘಾತದಿಂದ ವಿಧಿವಸರಾಗಿದ್ದು ಅನೇಕ ನಟರು, ರಾಜಕೀಯ ಗಣ್ಯರು ಸಂತಾಪ ವ್ಯಕ್ತ ಪಡಿಸಿದ್ದಾರೆ.

ನಟ ಪುನೀತ್ ರಾಕುಮಾರ್ ಅವರ ಆರೋಗ್ಯದಲ್ಲಿ ಇಂದು (ಅ.29) ಏರುಪೇರು ಉಂಟಾದ ಕಾರಣ, ಕೂಡಲೇ ಅವರನ್ನು ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಪುನೀತ್ ರಾಜಕುಮಾರ್ ಇಹಲೋಕ ತ್ಯಜಿಸಿದ್ದಾರೆ. ವಿಕ್ರಂ ಆಸ್ಪತ್ರೆಯಿಂದ ಪಾರ್ಥಿವ ಶರೀರವನ್ನು ಸದಾಶಿವನಗರದ ನಿವಾಸಕ್ಕೆ ಸ್ಥಳಾಂತರ ಮಾಡಲಾಗಿದೆ. ಆ್ಯಂಬುಲೆನ್ಸ್ ಮೂಲಕ ಮನೆಗೆ ಪಾರ್ಥಿವ ಶರೀರ ಸ್ಥಳಾಂತರ ಮಾಡಲಾಗಿದ್ದು, ನಂತರ ಸಂಜೆ ಐದು ಗಂಟೆ ಬಳಿಕ ನಟ ಪುನೀತ್ ಮೃತದೇಹ ಕಂಠೀರವ ಕ್ರೀಡಾಗಂಣಕ್ಕೆ ಸ್ಥಳಾಂತರ ಮಾಡಿ ಸಂಜೆ ಬಳಿಕವೇ ಅಭಿಮಾನಿಗಳ ದರ್ಶನಕ್ಕೆ ಪ್ರಾರ್ಥಿವ ಶರೀರ ದರ್ಶನಕ್ಕೆ ಅವಕಾಶ ನೀಡಲಾಗುವುದು ಎಂದು ಮೂಲಗಳು ತಿಳಿಸಿವೆ.

ಮಾಜಿ ಸಿಎಂ ಸಿದ್ದರಾಮಯ್ಯ ಸಂತಾಪ

ಪುನೀತ್ ರಾಜ್ಕುಮಾರ್ ನಿಧನಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ. ಪುನೀತ್ ಹಠಾತ್ ನಿಧನದಿಂದ ಆಘಾತಕ್ಕೀಡಾಗಿದ್ದೇನೆ. ಪುನೀತ್ ರಾಜ್ಕುಮಾರ್ ಕನ್ನಡಿಗರ ಮನೆ ಮಗನಂತಿದ್ದರು. ಅವರ ನಿಧನ ತುಂಬಲಾರದ ನಷ್ಟ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಡಿಕೆ ಶಿವಕುಮಾರ್ ಸಂತಾಪ

ನನ್ನ ಬಾಲ್ಯ ಸ್ನೇಹಿತ, ನೆರೆ ಮನೆಯ ಪುನೀತ್ ಇನ್ನಿಲ್ಲ. ಇದನ್ನು ನಂಬುವುದಕ್ಕೂ ಸಾಧ್ಯವಾಗುತ್ತಿಲ್ಲ. ವಿಧಿ ಎಷ್ಟು ಕ್ರೂರಿ ಎನ್ನುವುದಕ್ಕೆ ಇದೇ ಸಾಕ್ಷಿ. ಪುನೀತ್ಗೆ ಯಾವುದೇ ಕೆಟ್ಟ ಹವ್ಯಾಸಗಳು ಇರಲಿಲ್ಲ. ರಾಜಕೀಯಕ್ಕೆ ಕರೆತರಲು ಪ್ರಯತ್ನಿಸಿದ್ದೆವು. ಆದರೆ ಅವರು ರಾಜಕೀಯಕ್ಕೆ ಬರಲು ಇಷ್ಟಪಡಲಿಲ್ಲ ಎಂದು ಹೇಳಿದ್ದಾರೆ.

ಮಾಜಿ ಸಿಎಂ ಬಿಎಸ್ವೈ ಸಂತಾಪ,

‘‘ನಟ ಪುನೀತ್ ನಿಧನದಿಂದ ನನಗೆ ತೀವ್ರ ಆಘಾತವಾಗಿದೆ. ನಟ ಪುನೀತ್ ನಿಧನದಿಂದ ಕರುನಾಡಿಗೆ ತುಂಬಲಾರದ ನಷ್ಟ. ನಟ ಪುನೀತ್ ಆತ್ಮಕ್ಕೆ ಆ ದೇವರು ಶಾಂತಿಯನ್ನ ಕರುಣಿಸಲಿ ಎಂದು ಹೇಳಿದ್ದಾರೆ.

ಟಾಲಿವುಡ್ ನಟರಿಂದ ಸಂತಾಪ

ನಟ ಪುನೀತ್ ನಿಧನಕ್ಕೆ ತೆಲುಗಿನ ಖ್ಯಾತ ನಟರಾದ ಮಹೇಶ್ ಬಾಬು ಸಂತಾಪ,

ಪುನೀತ್ ರಾಜ್‌ಕುಮಾರ್ ಅವರ ನಿಧನದ ದುರಂತ ಸುದ್ದಿಯಿಂದ ಆಘಾತ ಮತ್ತು ತೀವ್ರ ದುಃಖವಾಗಿದೆ. ನಾನು ಭೇಟಿಯಾದ ಮತ್ತು ಸಂವಾದ ನಡೆಸಿದ ಅತ್ಯಂತ ವಿನಮ್ರ ವ್ಯಕ್ತಿಗಳಲ್ಲಿ ಒಬ್ಬರು. ಅವರ ಕುಟುಂಬ ಮತ್ತು ಆತ್ಮೀಯರಿಗೆ ಹೃತ್ಪೂರ್ವಕ ಸಂತಾಪಗಳು ಎಂದಿದ್ದಾರೆ.

ಚಿರಂಜೀವಿ ಸಂತಾಪ,

ಆಘಾತಕಾರಿ, ವಿನಾಶಕಾರಿ ಮತ್ತು ಹೃದಯವಿದ್ರಾವಕ! #ಪುನೀತ್ ರಾಜ್ ಕುಮಾರ್ ಬೇಗನೇ ಹೋಗಿದ್ದಾರೆ. ಒಡೆದ ಹೃದಯ ಶಾಂತಿಯಲ್ಲಿ ವಿಶ್ರಾಂತಿ! ಕುಟುಂಬಕ್ಕೆ ನನ್ನ ಆಳವಾದ ಸಂತಾಪ ಮತ್ತು ಕಣ್ಣೀರಿನ ಸಂತಾಪ. ಒಟ್ಟಾರೆಯಾಗಿ ಕನ್ನಡ/ಭಾರತೀಯ ಚಲನಚಿತ್ರ ಬಂಧುಗಳಿಗೆ ಒಂದು ದೊಡ್ಡ ನಷ್ಟ. ಈ ದುರಂತ ನಷ್ಟವನ್ನು ನಿಭಾಯಿಸುವ ಶಕ್ತಿ ಎಲ್ಲರಿಗೂ ಕರುಣಿಸಲಿ ಎಂದಿದ್ದಾರೆ!

ಗೃಹ ಸಚಿವ ಆರಗ ಜ್ಞಾನೇಂದ್ರ ಸಂತಾಪ.

ಕನ್ನಡ ಚಿತ್ರರಂಗದಲ್ಲಿ, “ಪವರ್ ಸ್ಟಾರ್” ಎಂದೇ ಖ್ಯಾತರಾಗಿದ್ದ, ಜನಾನುರಾಗಿ ಹಾಗೂ ಶ್ರೇಷ್ಠ ನಟ ಪುನೀತ್ ರಾಜಕುಮಾರ್, ಅವರ ಹಠಾತ್ ನಿಧನ, ಅಪಾರವಾದ ನೋವು ಹಾಗೂ ದುಃಖ ತಂದಿದೆ. ಬರ ಸಿಡಿಲಿನಂತೆ ಬಂದೆರಗಿದ ಪುನೀತ್ ರಾಜಕುಮಾರ್ ರವರ ಹಠಾತ್ ನಿಧನದ ಸುದ್ದಿಯಿಂದ ಇಡೀ ಕನ್ನಡ ಚಿತ್ರರಂಗ ಕನ್ನಡ ಚಿತ್ರರಂಗ ಹಾಗೂ ನಾಡಿನ ಜನತೆ, ಆಘಾತಗೊಂಡಿದ್ದು ನಾಡಿನಾದ್ಯಂತ, ದುಃಖದ ಛಾಯೆ ಆವರಿಸಿದೆ ಎಂದ ಹೇಳಿದ್ದಾರೆ.

ಸಚಿವ ಆರ್ ಅಶೋಕ್ ಮಾಹಿತಿ ಸಂತಾಪ

‘‘ಹೃದಯಾಘಾತದಿಂದ ವಿಕ್ರಂ ಆಸ್ಪತ್ರೆಗೆ ಪುನೀತ್ ದಾಖಲಾಗಿದ್ದರು. ನಟ ಪುನೀತ್ ನಮ್ಮನ್ನಗಲಿರುವುದು ತೀವ್ರ ನೋವಿನ ಸಂಗತಿ. ಸಕಲ ಸರ್ಕಾರಿ ಗೌರವಗಳೊಂದಿಗೆ ಪುನೀತ್ ಅಂತ್ಯಕ್ರಿಯೆಯನ್ನು ನಡೆಸಲಾಗುವುದು. ಕಂಠೀರವ ಸ್ಟೇಡಿಯಂನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು. ಕುಟುಂಬಸ್ಥರ ಆಸೆಯಂತೆ ಅಂತ್ಯಸಂಸ್ಕಾರ ಮಾಡಲಾಗುತ್ತದೆ. ದೇವರು ನಟ ಪುನೀತ್ ಆತ್ಮಕ್ಕೆ ಶಾಂತಿಯನ್ನ ಕರುಣಿಸಲಿ ಎಂದ ಹೇಳಿದ್ದಾರೆ.

ನಟಿ ರಮ್ಯಾ ಸಂತಾಪ

‘ಮಿಸ್ ಯೂ ಅಪ್ಪು’ ಎಂದು ನಟಿ ರಮ್ಯಾ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ.

ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ ಸಂತಾಪ

ನಟ ಪುನೀತ್ ನಿಧನಕ್ಕೆ ಮಾಜಿ ಪ್ರಧಾನಿ ದೇವೇಗೌಡ ಸಂತಾಪ ಸೂಚಿಸಿದ್ದಾರೆ. ಪುನೀತ್ ನಿಧನದ ಸುದ್ದಿ ತಿಳಿದು ಮನಸ್ಸಿಗೆ ತೀವ್ರ ಆಘಾತವಾಗಿದೆ. ಪುನೀತ್ ನಿಧನದ ಸುದ್ದಿಯನ್ನು ನಂಬಲು ಸಾಧ್ಯವಾಗುತ್ತಿಲ್ಲ. ಯುವರತ್ನನನ್ನು ಕಳೆದುಕೊಂಡ ಕರುನಾಡು ಬರಿದಾಗಿದೆ. ದೇವರು ಪುನೀತ್ ಆತ್ಮಕ್ಕೆ ಶಾಂತಿಯನ್ನು ಕರುಣಿಸಲಿ ಎಂದು ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ ಸಂತಾಪ ಸೂಚಿಸಿದ್ದಾರೆ.

Latest News

ದೇಶ-ವಿದೇಶ

ರೇಷನ್ ಕಾರ್ಡ್ ಹೊಂದಿರುವ ಬಡವರಿಗೆ ರಾಷ್ಟ್ರಧ್ವಜ ಖರೀದಿಸುವಂತೆ ಒತ್ತಾಯಿಸುತ್ತಿದ್ದಾರೆ : ರಾಹುಲ್ ಗಾಂಧಿ

ಇದು ಬಿಜೆಪಿ ಸರ್ಕಾರದ ಪ್ರಚಾರ ಪಿತೂರಿ. ಈ ರೀತಿ ಮಾಡುವ ಮೂಲಕ ಬಿಜೆಪಿಯು “ರಾಷ್ಟ್ರೀಯತೆ”ಯನ್ನು ಮಾರಾಟ ಮಾಡುತ್ತಿದೆ ಮತ್ತು ಬಡವರ ಆತ್ಮಗೌರವಕ್ಕೆ ಧಕ್ಕೆ ತಂದಿದೆ ಎಂದು ಆರೋಪಿಸಿದ್ದಾರೆ.

ರಾಜಕೀಯ

`ಬ್ಲ್ಯಾಕ್‌ ಮೇಲ್‌ ಕುಮಾರಸ್ವಾಮಿʼ ; ಕಣ್ಣೀರ ಕೋಡಿಯಿಂದ ಕುಟುಂಬಕ್ಕೆ ಲಾಭವೇ ಹೊರತು ಜನತೆಗೇನು ಲಾಭ? : ಅಶ್ವಥ್ ನಾರಾಯಣ್‌

ನೀವು ಈವರೆಗೆ ಹೇಳಿದ ಸುಳ್ಳುಗಳನ್ನು ಎಣಿಸಲು ಸಾಧ್ಯವೇ? ಎಂದು ಸಚಿವ(Minister) ಅಶ್ವಥ್‌ ನಾರಾಯಣ್(Ashwath Narayan) ಪ್ರಶ್ನಿಸಿದ್ದಾರೆ.

ದೇಶ-ವಿದೇಶ

ಇಬ್ಬರು ಭಯೋತ್ಪಾದಕರನ್ನು ಹತ್ಯೆಗೈದ ಭಾರತೀಯ ಸೇನೆ ; ದಾಳಿಯಲ್ಲಿ ಮೂವರು ಯೋಧರು ಹುತಾತ್ಮ!

ಸ್ವಾತಂತ್ರ್ಯ ದಿನಾಚರಣೆ(Independence Day) ಸಂದರ್ಭದಲ್ಲಿ ಉಗ್ರರು ದೇಶದ ವಿವಿಧ ಭಾಗಗಳಲ್ಲಿ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ.

ದೇಶ-ವಿದೇಶ

‘ಡಾನಿ’ ಬುಡಕಟ್ಟು ಜನಾಂಗದಲ್ಲಿ ಬೆರಳನ್ನು ಕತ್ತರಿಸುವುದೇ ಸಂಪ್ರದಾಯವಂತೆ!

ಇಂಡೋನೇಷ್ಯಾದ, ಪಪುವಾ ಗಿನಿಯಾ ದ್ವೀಪದಲ್ಲಿ ವಾಸಿಸುವ ಎಲ್ಲಾ ಡಾನಿ ಬುಡಕಟ್ಟಿನ ಮಹಿಳೆಯರನ್ನು ಕತ್ತರಿಸಿದ ಬೆರಳುಗಳಿಂದ ಬದುಕಲು ಒತ್ತಾಯಿಸಲಾಗುತ್ತದೆ.